ಪಟೇರಿಯಾ ಅವರು ಸಂವಿಧಾನವನ್ನು “ಉಳಿಸಲು” ಪ್ರಧಾನಿ ಮೋದಿಯನ್ನು “ಕೊಲ್ಲಲು” ಜನರಿಗೆ ಪ್ರೇರೇಪಿಸುತ್ತಿರುವ ವೀಡಿಯೊ ವೈರಲ್ ಆದ ಬಳಿಕ ಈ ಕುರಿತು ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ವೈರಲ್ ವೀಡಿಯೊದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪಟೇರಿಯಾ ‘ಮೋದಿ ಚುನಾವಣೆಯನ್ನು ಕೊನೆಗೊಳಿಸುತ್ತಾರೆ, ಮೋದಿ ಧರ್ಮ, ಜಾತಿ, ಭಾಷೆಯ ಆಧಾರದ ಮೇಲೆ ವಿಭಜನೆ ಮಾಡುತ್ತಾರೆ. ದಲಿತರು, ಆದಿವಾಸಿಗಳು ಮತ್ತು ಅಲ್ಪ ಸಂಖ್ಯಾತರ ಜೀವನ ಅಪಾಯದಲ್ಲಿದೆ. ಸಂವಿಧಾನವನ್ನು ಉಳಿಸಬೇಕಾದರೆ ಮೋದಿ ಯನ್ನು ಕೊಲ್ಲಲು ಸಿದ್ಧರಾಗಿ” ಎಂದು ಹೇಳಿದ್ದರು.
ಅದೇ ವೀಡಿಯೊದಲ್ಲಿ, ಪಟೇರಿಯಾ ತಮ್ಮ ಭಾಷಣದಲ್ಲಿ “ಕೊಲೆ” ಎಂಬ ಪದವು “ಸೋಲು” ಎಂದರ್ಥ ಎಂದು ಹೇಳಿದ್ದಾರೆ.
ತಾನು ಮಹಾತ್ಮ ಗಾಂಧಿಯವರ ಅಹಿಂಸೆಯ ಸಿದ್ಧಾಂತದ ಅನುಯಾಯಿಯಾಗಿದ್ದು, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಪ್ರಧಾನಿ ಮೋದಿಯನ್ನು ಚುನಾವಣೆಯಲ್ಲಿ ಸೋಲಿಸುವುದು ಅಗತ್ಯ ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಪಟೇರಿಯಾ ಹೇಳಿಕೆಗಳ ನಂತರ ಮಧ್ಯಪ್ರದೇಶ ಸರಕಾರವು ಮಾಜಿ ರಾಜ್ಯ ಸಚಿವ ಪಟೇರಿಯಾ ವಿರುದ್ಧ ಪೊಲೀಸ್ ಕೇಸ್ ದಾಖಲಿಸುವಂತೆ ಆದೇಶಿಸಿದೆ.
ಪನ್ನಾದ ಪಾವಾಯಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಮಧ್ಯಾಹ್ನ ಪಟೇರಿಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಪಟೇರಿಯಾ ಅವರನ್ನು ರಾಜ್ಯದ ದಾಮೋಹ್ ಜಿಲ್ಲೆಯ ಹಟಾ ಪಟ್ಟಣದಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ.