Friday, 22nd November 2024

ವಿಡಿಯೋ ಕಾಲ್ ಮೂಲಕ ಹೆರಿಗೆ: ತಾಯಿ-ಮಗು ಸಾವು

ಚಂಡೀಗಢ: ಪ್ರಸೂತಿ ತಜ್ಞರು ಲಭ್ಯವಿಲ್ಲದ ಕಾರಣ ತೀವ್ರ ಹೆರಿಗೆ ನೋವಿನಿಂದ ಬಳಲು ತ್ತಿದ್ದ ಮಹಿಳೆಯನ್ನು ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆಯೊಂದಿಗೆ ಹೆರಿಗೆ ಮಾಡಿಸಿದ್ದು, ಪರಿಣಾಮ ಮೃತಪಟ್ಟಿದ್ದಾರೆ.

ಪಂಜಾಬಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮಾನಸಾ ಜಿಲ್ಲೆಯ ಈ ಮಹಿಳೆಯನ್ನು ಹೆರಿಗೆ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆ ತರಲಾಗಿತ್ತು.

ವೈದ್ಯರು ಸಕಾಲಕ್ಕೆ ಲಭ್ಯವಾಗದ ಕಾರಣ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದ ವೇಳೆ ವಿಡಿಯೋ ಕಾಲ್ ಮೂಲಕ ಸಲಹೆ ನೀಡುವು ದಾಗಿ ವೈದ್ಯರು ಹೇಳಿದ್ದಾರೆ. ಅದರಂತೆ ಸಿಬ್ಬಂದಿ ಮಹಿಳೆಗೆ ಹೆರಿಗೆ ಮಾಡಿಸಿದ್ದು, ಆದರೆ ಕೆಲ ಹೊತ್ತಿನಲ್ಲಿಯೇ ತಾಯಿ – ಮಗು ಸಾವನ್ನಪ್ಪಿದ್ದಾರೆ.

ಆಕ್ರೋಶಗೊಂಡ ಮಹಿಳೆಯ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದು, ಜಿಲ್ಲಾಡಳಿತಕ್ಕೂ ಮಾಹಿತಿ ತಲುಪಿದೆ. ಆದರೆ ಮಹಿಳೆ ಕುಟುಂಬಸ್ಥರು ದೂರು ಸಲ್ಲಿಸಿಲ್ಲವೆಂದು ಹೇಳಲಾಗಿದ್ದು, ಜಿಲ್ಲಾಡಳಿತ ಸ್ವಯಂ ಪ್ರೇರಿತವಾಗಿ ತನಿಖೆಗೆ ಮುಂದಾಗಿದೆ.