ಈ ಘಟನೆಯು ಸಾರಣ್ ಜಿಲ್ಲೆಯಲ್ಲಿ ಇಸುಆಪೂರ್ ಪೊಲೀಸ್ ಠಾಣೆಯ ಸರಹದ್ದಿನ ಡೋಯಿಲಾ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ ೧೩ ಜನರ ಆರೋಗ್ಯ ಚಿಂತಾಜನಕವಾಗಿದ್ದು ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಅವರ ಕ್ರೋಧ ವಿಧಾನಸಭೆಯಲ್ಲಿ ಅಧಿವೇಶ ನದ ಸಮಯದಲ್ಲಿ ಮತ್ತೊಮ್ಮೆ ಬಹಿರಂಗ ವಾಯಿತು.
ಸಾರಣಾದಲ್ಲಿ ವಿಷಪೂರಿತ ಮದ್ಯ ಸೇವನೆಯಿಂದ ಆಗಿರುವ ಸಾವು ನೋವಿನ ಬಗ್ಗೆ ವಿರೋಧ ಪಕ್ಷದ ಕೆಲವು ಸದಸ್ಯರು ಸರಕಾರವನ್ನು ಘೇರಾವ್ ಹಾಕುವ ಪ್ರಯತ್ನ ಮಾಡಿ ದರು. ಅವರು ಮುಖ್ಯಮಂತ್ರಿಗಳು ತ್ಯಾಗ ಪತ್ರ ನೀಡಬೇಕೆಂದು ಒತ್ತಾಯಿಸಿದರು. ಇದರಿಂದ ನಿತೀಶ್ ಕುಮಾರ್ ಆಕ್ರೋಶ ಗೊಂಡರು.