ಉಜ್ಜಯಿನಿ: ಪೈಗಾಮ ಏ ಇನ್ಸಾನಿಯತ್ ಸೊಸೈಟಿಯಿಂದ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಸ್ಪರ್ಧಿಗಳಿಗೆ ಮಹಮ್ಮದ್ ಪೈಗಂಬರ್ ಇವರ ಬಗ್ಗೆ ಪ್ರಬಂಧ ಬರೆಯಲು ಹೇಳಲಾಗಿತ್ತು. ಆದರೆ ಭಾಗವಹಿಸಿದ್ದ ಸ್ಪರ್ಧಾಳುಗಳು ಹಿಂದೂಗಳು ಇದ್ದರು.
ಸ್ಪರ್ಧಾಳುಗಳು ಹೆಸರು ನೊಂದಾಯಿಸಿದ ಬಳಿಕ ಅವರಿಗೆ ಪೈಗಂಬರರ ಒಂದು ಪುಸ್ತಕ ನೀಡಲಾಗುತ್ತಿತ್ತು. ಇದರಿಂದ ಹಿಂದೂ ಸಂಘಟನೆಗಳು ಈ ಸ್ಪರ್ಧೆಯನ್ನು ವಿರೋಧಿಸಿ ದರು. ಈ ರೀತಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುವುದು , ಹಿಂದೂಗಳನ್ನು ಮತಾಂತ ರಿಸುವ ಪ್ರಯತ್ನವಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದಾರೆ.
ರಾಜ್ಯದ ಗೃಹ ಸಚಿವ ನರೋತ್ತಮ ಮಿಶ್ರ ಇವರಿಗೆ ದೂರು ನೀಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಸ್ಪರ್ಧೆಗೆ ವಿರೋಧ ವ್ಯಕ್ತವಾದ ಬಳಿಕ ಆಯೋಜಕರು ಸ್ಪರ್ಧೆ ರದ್ದುಗೊಳಿಸಿದ್ದಾರೆ.