Thursday, 19th September 2024

ಶಾಲೆ ಮತು ಶಿಕ್ಷಕ ಮಾತ್ರ ಆದರ್ಶವಾಗಿದ್ದರೆ ಸಾಕೆ?

ದಾಸ್ ಕ್ಯಾಪಿಟಲ್
ಟಿ.ದೇವಿದಾಸ್ ಬರಹಗಾರ ಶಿಕ್ಷಕ

ಈ ಪ್ರಶ್ನೆೆ ನನ್ನನ್ನು ಯಾವತ್ತೂ ಕಾಡುತ್ತಲೇ ಇದೆ. ಶಿಕ್ಷಕ ಎಲ್ಲ ಬಗೆಯಲ್ಲೂ ಸರಿಯಾಗಿರಬೇಕು, ತಪ್ಪು ಮಾಡಲೇಬಾರದು, ತಪ್ಪು ಆಗಲೇ ಬಾರದು, ಎಲ್ಲವೂ ಗೊತ್ತಿರಲೇಬೇಕೆಂಬ ಅಭಿಪ್ರಾಯವಿದೆ. ಶಿಕ್ಷಕನಾದವನು ಯಾವತ್ತೂ ಆದರ್ಶದ ಹಾದಿಯಲ್ಲಿರ
ಬೇಕೆಂಬ ಆಗ್ರಹವಿದೆ. ಈ ಅಭಿಪ್ರಾಯ, ಆಗ್ರಹಗಳು ವಿಚಿತ್ರವೆನಿಸುತ್ತವೆ. ಬಹುಮುಖ್ಯವಾಗಿ ಹೀಗೆ ಅಂದುಕೊಳ್ಳುವುದೇ ದೊಡ್ಡ ತಪ್ಪು.

ಯಾಕೆಂದರೆ ಶಿಕ್ಷಕನೂ ಮನುಷ್ಯನೇ. ಅವನಿಗೂ ವೈಯಕ್ತಿಕ ಬದುಕಿದೆ. ಅವನನ್ನೇ ನಂಬಿ ನಾಕಾರು ತಲೆಗಳು ಬದುಕುತ್ತವೆ. ಮನುಷ್ಯ ಸಹಜ ಗುಣಾವಗುಣಗಳೂ, ದೌರ್ಬಲ್ಯಗಳೂ, ನ್ಯೂನತೆಗಳೂ ರಾಗ – ದ್ವೇಷಗಳೂ, ಪ್ರತಿಯೊಬ್ಬನಲ್ಲೂ ಇರುವಂತೆ ಶಿಕ್ಷಕನಲ್ಲೂ ಇರುತ್ತವೆ. ಬೋಧನೆಗೆ ಸಂಬಂಧಿಸಿ ಲೋಪಗಳಿರಬಹುದು, ಜ್ಞಾನಾಸಕ್ತಿ, ವಿಷಯ ಗ್ರಹಣ, ಭಾವಾಭಿವ್ಯಕ್ತಿಯಲ್ಲಿ
ವ್ಯತ್ಯಯಗಳಿರಬಹುದು, ಹಾಗಂತ ಶಿಕ್ಷಕನ ಅಭಿರುಚಿಯೂ ಬಯಸಿದಂತೆಯೇ ಇರಬೇಕೆನ್ನುವುದು ಸರಿಯಲ್ಲ, ಸಮರ್ಥನೀಯವಲ್ಲ.

ಶಿಕ್ಷಕನೊಬ್ಬ ವರ್ತಮಾನಕ್ಕೆೆ ಸ್ಪಂದಿಸ ಬೇಕಾದುದು ತನ್ನಲ್ಲಿರುವ ಜ್ಞಾನದ ಮಾಹಿತಿಯನ್ನು ವಿದ್ಯಾರ್ಥಿಗಳ ಮೆದುಳಿಗೆ ರವಾನಿಸಬೇಕಾದ ಕೌಶಲವನ್ನು ಚೆನ್ನಾಗಿ ಸಿದ್ಧಿಸಿಕೊಳ್ಳುವುದರಲ್ಲಿ ಮಾತ್ರ ಎಂದು ನಾನು ಭಾವಿಸಿದವನು. ಸದ್ಯ ಆಗುತ್ತಿರು ವುದೂ ಇದೇ. ಇದರ ಹೊರತಾಗಿ ವಿದ್ಯಾರ್ಥಿಗಳನ್ನು ಬೌದ್ಧಿಕವಾಗಿ, ಮಾನಸಿಕವಾಗಿ, ವೈಚಾರಿಕವಾಗಿ, ಸಾಂಸ್ಕೃತಿಕವಾಗಿ ಸಂಪನ್ನಗೊಳಿಸುವಲ್ಲಿ ಶಾಲೆಗಳು ಪ್ರಭಾವ ಬೀರುವುದು ಸತ್ಯವೇ ಆದರೂ ಅವುಗಳು ಅಮೌಲ್ಯಗೊಂಡಿವೆ. ಶಿಕ್ಷಕನ ಹಕ್ಕನ್ನು ಪ್ರಶ್ನೆೆಮಾಡುವ ಈ ಸಮಾಜಕ್ಕೆೆ ಅಂಥ ಮೌಲ್ಯಗಳು ಬೇಕಾಗಿಲ್ಲ!

ಕಲಿಕಾ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಅಗತ್ಯವಾದ ಶಾಂತ ಮನಸ್ಥಿತಿಯನ್ನು ತಂದುಕೊಳ್ಳುವಲ್ಲಿ ಶಿಕ್ಷಣವೇ ಒತ್ತಡವಾದ ಪರಿಸ್ಥಿತಿಯಲ್ಲಿ ಶಿಕ್ಷಕನಿಗಿಂದು ಸಾಧ್ಯವಾಗುತ್ತಿಲ್ಲ. ಶಿಕ್ಷಕ – ಸಮುದಾಯ – ಶಾಲೆಗಳ ಸಂಬಂಧ ಶುದ್ಧ ವ್ಯಾವಹಾರಿಕವಾಗಿದೆ. ಮತ್ತೆೆ ಆದರ್ಶದ ಮಾತೆಲ್ಲಿ? ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಸಾಮ, ದಾನ, ಭೇದ, ದಂಡದಲ್ಲೋ ಹೇಳುವುದು ಶಿಕ್ಷಕನಿಗಿಂದು
ಸಾಧ್ಯವಿಲ್ಲ. ಮಕ್ಕಳ ಹಕ್ಕುರಕ್ಷಣಾ ಕಾನೂನುಗಳು ಶಿಕ್ಷಕನನ್ನು ಕಟ್ಟಿಹಾಕಿವೆ. ಮಕ್ಕಳನ್ನೂ, ಪೋಷಕರನ್ನೂ ದಾರಿತಪ್ಪಿಸಿವೆ.
ತಮ್ಮ ಮಕ್ಕಳಿಗೆ ಕಡಿಮೆ ಅಂಕಗಳು ಬಂದದ್ದಕ್ಕೆೆ ಶಿಕ್ಷಕನನ್ನೇ ಅವಾಚ್ಯವಾಗಿ ದಬಾಯಿಸುವ ಇಂದಿನ ಪೋಷಕರನೇಕರಲ್ಲಿ
ತಮ್ಮ ಮಕ್ಕಳ ಕಲಿಕಾ ಸಮಸ್ಯೆೆಯೇನೆಂಬುದನ್ನು ಅರಿಯುವ ಕನಿಷ್ಠಮಟ್ಟದ ಜ್ಞಾನವೂ ಇಲ್ಲ. ಯಾಕೆ ಅಂಕಗಳು ಕಡಿಮೆ
ಬರುತ್ತವೆ? ಯಾಕೆ ತಮ್ಮ ಮಕ್ಕಳು ಓದುವುದರಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ, ಕೊಟ್ಟ ಕೆಲಸವನ್ನು ಮಾಡುವುದಿಲ್ಲ, ಸುಳ್ಳು ಹೇಳುತ್ತಾರೆ, ಪ್ರತಿಯೊಂದಕ್ಕೂ ರೇಗಾಡುತ್ತಾರೆ, ಕದಿಯುತ್ತಾರೆ, ಗುರು – ಹಿರಿಯರನ್ನು ಅಗೌರವದಿಂದ ಕಾಣುತ್ತಾರೆ, ಅವಾಯ್ಡ್ ಮಾಡುತ್ತಾರೆ? ಇಂಥ ಹಲವು ಸಮಸ್ಯೆೆಗಳಿಗೆ ಪರಿಹಾರ ಶಾಲೆಯಲ್ಲೇ ಆಗಬೇಕೆಂಬ ಹುಂಬು ಹುಚ್ಚು ಪೋಷಕರನೇಕರಲ್ಲಿದೆ.

ಶಾಲೆಯಲ್ಲಿ ಮಾತ್ರ ವಿದ್ಯಾರ್ಥಿಗಳು ಆದರ್ಶವನ್ನು ಕಲಿಯಬೇಕೆ? ಅಥವಾ ಪಾಲಿಸಬೇಕೆ? ಶಾಲೆಯ ಹೊರಗಿನ ವಾತಾವರಣ ಹೇಗಿದ್ದರೂ ಆಗಬಹುದೆ? ಮಕ್ಕಳು ಮಕ್ಕಳೊಂದಿಗೆ ಸೇರಿಕೊಂಡು ಏನು ಮಾಡಿದರೂ ತಲೆಬಿಸಿ ಮಾಡಿಕೊಳ್ಳದ ಪೋಷಕರು ಕಲಿಕೆಯಲ್ಲಿ ಬೇಜವಾಬ್ದಾರಿ ತೋರಿಸಿದ ತನ್ನ ಮಗ/ಮಗಳಿಗೆ ಶಿಕ್ಷಕ ಪ್ರಶ್ನಿಸಿದರೆ, ಬೈದರೆ ಪೋಲಿಸ್ ಕಂಪ್ಲೇಂಟನ್ನು ಕೊಡಲೂ ಮುಂದಾಗುತ್ತಾರೆ!

ಸೋಷಿಯಲ್ ಮೀಡಿಯಾಗಳ ಪ್ರಭಾವ ಹಳ್ಳಿಹಳ್ಳಿಯಲ್ಲೂ ಇವೆ. ಕೆಜಿಗೆ ಹೋಗುವ ಮಗು ಯೂಟ್ಯೂಬ್ ನೋಡುತ್ತದೆ. ತಾಸುಗಟ್ಟಲೆ ಕುಳಿತುಕೊಂಡು ವಿಡಿಯೋ ಗೇಮ್‌ಸ್‌ ಆಡುತ್ತದೆ. ಸಿನೆಮಾಗಳನ್ನು ನೋಡುತ್ತದೆ. ಗೆಳೆಯ – ಗೆಳತಿಯರಿಗೆ ಮೆಸೇಜು ಮಾಡುತ್ತದೆ. ಇವೆಲ್ಲ ಪೋಷಕರಿಗೆ ಮಕ್ಕಳ ಹೆಚ್ಚುಗಾರಿಕೆಯಾಗಿ ಕಾಣುತ್ತದೆಯೇ ಹೊರತು ದುಷ್ಪರಿಣಾಮ ಕಾಣುವುದಿಲ್ಲ. ಪೋಷಕರೇ, ನಿಮ್ಮ ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಎಂದು ಎಚ್ಚರಿಸುವಂಥ
ಘಟನೆಗಳು ಪ್ರತಿನಿತ್ಯವೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಈಗಿನ ಕಾಲದ ಹೆಚ್ಚಿನ ಮಕ್ಕಳು ಕಲಿಕಾ ವಿಚಾರದಲ್ಲಿ ಹೆತ್ತವರಲ್ಲೇ ಸುಳ್ಳು ಹೇಳುತ್ತಾರೆ.

ಕಾರಣ ಮಕ್ಕಳ ಮೇಲಿನ ಪೋಷಕರ ಅತೀಯಾದ ವ್ಯಾಮೋಹದಿಂದ ಹುಟ್ಟಿದ ನಂಬಿಕೆ. ಅವರೇನೇ ಮಾಡಿದರೂ ಸರಿಯೆಂಬ ತಮ್ಮ ಅತಿನಂಬಿಕೆಯಿಂದ ತಮ್ಮ ಮಕ್ಕಳೇ ದಾರಿತಪ್ಪುತ್ತಾರೆಂಬುದನ್ನು ಪೋಷಕರು ಮರೆಯುತ್ತಾರೆ. ಇದೆಲ್ಲ ಸಣ್ಣ ಸಣ್ಣ ಸಂಗತಿಗಳಿರಬಹುದು. ಆದರೆ ಬಾಲ್ಯದ ನಡವಳಿಕೆಗಳು ಪ್ರೌಢಾವಸ್ಥೆೆಯಲ್ಲಿ ಸಮಸ್ಯೆೆಯಾಗುತ್ತವೆ. ಬಾಲ್ಯದಲ್ಲಿ ತಿದ್ದದೆ ದೊಡ್ಡವರಾದ ಮೇಲೆ ಅವರ ವರ್ತನೆಯಲ್ಲಾಗುವ ಸಮಸ್ಯೆೆಗಳಿಗೆ ಯಾರು ಹೊಣೆ? ತಪ್ಪು ಯಾರದ್ದು? ಕಲಿಯುವುದೋ, ಕಲಿಸುವುದೋ? ಶಿಕ್ಷಕರು ಕಲಿಸುವವರೋ, ಕಲಿಕಾ ಸಹಾಯಕರೋ? ಶಿಕ್ಷಕರನ್ನು ಕಲಿಸುವವರು ಎಂದರೆ ಕಲಿಯುವವನಿಗೆ
ಮಹತ್ವವಿರುವುದಿಲ್ಲ. ಕಲಿಸುವವರೇ ಕಲಿಯುವವನ ಕಲಿಕೆಗೆ ಪೂರ್ಣ ಜವಾಬ್ದಾರರಾಗಿರುತ್ತಾರೆ.

ಕಲಿಸುವವರು ಹೇಳಿದ್ದನ್ನು ಕಲಿತುಕೊಂಡರೆ ಕಲಿಯುವವನ ಜವಾಬ್ದಾರಿ ಮುಗಿಯಿತು. ಆದರೆ, ಕಲಿಕಾ ಸಹಾಯಕರು ಎಂದರೆ
ಕಲಿಯುವವನ ಜವಾಬ್ದಾರಿಯೇ ಹೆಚ್ಚಿರುತ್ತದೆ. ಕಲಿಕೆಯಲ್ಲಿ ಆಸಕ್ತಿ ಮತ್ತು ಅಭಿರುಚಿಯಿದ್ದಾಗ ಶಿಕ್ಷಕರು, ಪೋಷಕರು
ಕಲಿಕಾ ಸಹಾಯಕರಾಗುತ್ತಾರೆ. ಆಗ ಹೆಚ್ಚಿನದನ್ನು ಕಲಿಯಬಹುದು. ಕಲಿಕೆಯಲ್ಲಿ ತೊಡಗಿಸಿಕೊಳ್ಳುವಿಕೆಗೆ ಸಹಾಯ ಮಾಡಬೇಕಾದದ್ದು ಶಿಕ್ಷಕರ ಕರ್ತವ್ಯ. ಅಂಥಲ್ಲಿ ಕಲಿಯುವುದು ಎಷ್ಟು ಮುಖ್ಯವೋ, ಕಲಿಕೆಗೆ ಸಹಾಯ ಮಾಡುವುದು ಅಷ್ಟೇ ಮುಖ್ಯ. ಆದ್ದರಿಂದ ಎಲ್ಲವನ್ನೂ ಶಿಕ್ಷಕರ ಮೇಲೆ ಹೊರಿಸುವುದು ಸರಿಯಲ್ಲ. ಶಿಕ್ಷಕರು ಹೇಳದೇ ಇರುವ ಎಷ್ಟೋ ಸಂಗತಿಗಳನ್ನು ವಿದ್ಯಾರ್ಥಿ ಕಲಿತಿರುತ್ತಾನೆ.

ಆದರೆ ತರಗತಿಯಲ್ಲಿ ಕಲಿಸಿದ್ದು ಬರುವುದಿಲ್ಲ. ತಾವಾಗೇ ಕಲಿತಂಥ ವಿಚಾರಗಳನ್ನು ವಿದ್ಯಾರ್ಥಿಗಳು ಮರೆಯುವುದಿಲ್ಲ? ಅಂದರೆ ಕಲಿಕೆಯಲ್ಲಿರುವ ಅನಾಸಕ್ತಿಯೇ ಇದಕ್ಕೆೆಲ್ಲ ಕಾರಣ. ಸಿನೆಮಾ ಹಾಡುಗಳು ಬಾಯಿಪಾಠವಾದಂತೆ ಪದ್ಯದ ಸಾಲುಗಳು
ಬಾಯಿಪಾಠವಾಗುವುದಿಲ್ಲ. ಹರಿದುಹೋದ ಜೀನ್‌ಸ್‌ ಪ್ಯಾಾಂಟ್, ವಿಚಿತ್ರವಾದ ಶಟೋರ್, ಟಿ-ಶರ್ಟ್, ವಾಚು, ಷೂ ಧರಿಸಿಬೇಕೆಂಬ ಹಠದ ವಿದ್ಯಾರ್ಥಿಗಳಿಗೆ ತಮ್ಮ ಓರಗೆಯವರ ಒಳ್ಳೆೆಯ ಉಡುಪುಗಳ ಬಗ್ಗೆೆ, ವಿದ್ಯಾಭ್ಯಾಸ ಪ್ರಗತಿಯ ಬಗ್ಗೆೆ, ಅವರ ವಿನಯತೆ, ವಿಧೇಯತೆ, ಸಂಸ್ಕಾರ, ಸಂಸ್ಕೃತಿಯ ಬಗ್ಗೆೆ ಏನೂ ಅನಿಸುವುದಿಲ್ಲ!

ಇಂಥಲ್ಲಿ ಹೆತ್ತವರ ಪಾತ್ರ ಇಲ್ಲವೇ? ಶಿಕ್ಷಕರ ಪಾತ್ರವೇನಿದೆ? ಶಾಲೆ, ಸಮುದಾಯಗಳು ಏನು ಮಾಡೀತು? ಸಾಂದರ್ಭಿಕ ನಡೆಗಳನ್ನೇ ವ್ಯಕ್ತಿತ್ವವೆಂದು ತಿಳಿಯಲಾಗದು. ಅದರಲ್ಲೂ ಶಿಕ್ಷಕರು ಮಾತ್ರ ಯಾವಾಗಲೂ ಆದರ್ಶಕ್ಕೆೆ ಪ್ರತಿನಿಧಿಯೋ, ದ್ಯೋತಕವೋ, ದೃಷ್ಟಾಾಂತವೋ ಆಗಿಯೇ ಇರಬೇಕೆಂದು ಈ ಕಾಲಘಟ್ಟದಲ್ಲಿ ನಿರೀಕ್ಷಿಸುವುದು ಸರಿಯಲ್ಲ. ವಕೀಲ ತಪ್ಪು ವಾದ ಮಾಡಬಹುದು, ಇಂಜಿನಿಯರ್ ಕ್ಷಮತೆಯಿಲ್ಲದೆ ಕಾರ್ಯಪ್ರವೃತ್ತನಾಗಬಹುದು, ವಿಜ್ಞಾನಿ ತನ್ನ ಸಾಧನೆಯಲ್ಲಿ ಸೋಲ ಬಹುದು,  ವೈದ್ಯನಾದವನು ಶುಲ್ಕದ ರೂಪದಲ್ಲಿ ಲಂಚವನ್ನು ತಿನ್ನಬಹುದು, ಎಂಥ ಭ್ರಷ್ಟಾಚಾರವನ್ನು ಮಾಡಿಯೂ ರಾಜಕಾರಣಿ ನುಂಗಿ ನೀರು ಕುಡಿಯಬಹುದು, ಮಾಧ್ಯಮಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂಥ ಸುದ್ದಿಯನ್ನು ಬಿತ್ತರಿಸಬಹುದು, ಸನ್ಯಾಸಿಯ ವೇಷಧರಿಸಿ ಅನಾಚಾರವನ್ನು ಮಾಡಬಹುದು, ಸರಕಾರಿ ಖಜಾನೆಯನ್ನು ಅಧಿಕಾರಿಯೊಬ್ಬ
ಲೂಟಿ ಮಾಡಬಹುದು, ಸಿನೆಮಾ ನಟನಟಿಯರು ಡ್ರಗ್‌ಸ್‌ ದಂಧೆಯ ಆರೋಪದಲ್ಲಿರಬಹುದು, ಆದರೆ ಶಿಕ್ಷಕ ಮಾತ್ರ
ನೈತಿಕ ಅಧಃಪತನವನ್ನು ಕಾಣಬಾರದೆಂಬ ಅಲಿಖಿತ ಮೂರ್ತ ಸ್ವರೂಪದ ಆಗ್ರಹ ಸಮಾಜದಲ್ಲಿದೆ. ಒಬ್ಬ ಶಿಕ್ಷಕ
ತಪ್ಪಿದರೆ ಇಡಿಯ ಶಿಕ್ಷಕ ಸಮೂಹವೇ ಸರಿಯಿಲ್ಲವೆಂದು ತೀರ್ಮಾನಿಸುವವರು ಚಿಂತಿಸಬೇಕಾದ್ದು ಬಹಳಷ್ಟಿವೆ. ಹಾಗೆ
ನೋಡಿದರೆ ಶಿಕ್ಷಕರನ್ನು ನೋಡುವ ದೃಷ್ಟಿಕೋನದಲ್ಲಿ ಹಿಂದಿನ ಮೌಲ್ಯಗಳೇ ಘನತೆಯುಳ್ಳದ್ದಾಗಿತ್ತು. ಹಾಗಂತ ಅಂದಿನ ಶಿಕ್ಷಕರಲ್ಲೂ ಜೀವನಮೌಲ್ಯಗಳಿತ್ತೇ ವಿನಾ ದುರಭ್ಯಾಸ ದುಶ್ಚಟಗಳು ಇರಲಿಲ್ಲವೆಂದಲ್ಲ.

ಕುಡಿಯುವ, ಬೀಡಿ, ಸಿಗರೇಟನ್ನು ಸೇದುವ, ಎಲೆ ಅಡಿಕೆ ತಂಬಾಕನ್ನು ಅಗೆಯುವ ಶಿಕ್ಷಕರಿಲ್ಲವಾಗಿತ್ತೆೆ? ಹಾಗಂತ ಇದನ್ನೇ
ನೆಪವಾಗಿಟ್ಟುಕೊಂಡು ಅವರನ್ನು ಅಗೌರವದಿಂದ ಕಂಡಿದ್ದೇವೆಯೇ? ನೋ ಚಾನ್‌ಸ್‌. ಕಾರಣ ಅವರಲ್ಲಿ ಹೃದಯವಂತಿಕೆಯಿತ್ತು. ಕಷ್ಟಕ್ಕೊದಗುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಸ್ವಲ್ಪಮಟ್ಟಿಗಾದರೂ ಆ ಮೌಲ್ಯಗಳಿವೆ ಯೆನ್ನಬೇಕು. ಶಿಕ್ಷಕರಿಗಲ್ಲಿ ಘನತೆಯಿದೆ. ಶಿಕ್ಷಕರೂ ಹಾಗೆಯೇ ಇದ್ದಾರೆ. ತಮ್ಮೂರಿನ ಮಕ್ಕಳಿಗೆ ಇವರು ಕಲಿಸುವವರೆಂಬ ಎತ್ತರದ ಭಾವ ಹಳ್ಳಿಗರಲ್ಲಿರುತ್ತದೆ.

ಹಿಂದೆಲ್ಲ, ಆಯಾ ಊರಿನ ಮಕ್ಕಳಿಗೆ ಅದೇ ಊರಿನ ಶಿಕ್ಷಕರು ಕಲಿಸುತ್ತಿದ್ದರು. ಅಂದರೆ ಅಕೆಡಮಿಕ್ ಕಲಿಕೆಗಿಂತ ಹೆಚ್ಚಾಗಿ
ಜೀವನಮೌಲ್ಯಗಳ ಕಲಿಕೆ ಶಾಲೆಯ ಹೊರಗೂ ಆಗುತ್ತಿತ್ತು. ಆದ್ದರಿಂದ ಶಿಕ್ಷಕರ ಮೇಲೆ ಒಂದು ಭಯಮಿಶ್ರಿತದ ಗೌರವ,
ಪ್ರೀತಿಯಿತ್ತು. ದಾರಿಯಲ್ಲಿ ಅವರೆದುರು ಸಿಕ್ಕಿಹಾಕಿಕೊಳ್ಳದಂತೆ ಅವರ ಕಣ್ಣು ತಪ್ಪಿಸಿ ಓಡಿಹೋಗುವ ಬುದ್ಧಿ ಚುರುಕಾಗಿತ್ತು. ಯಾಕೆಂದರೆ, ನಮ್ಮ ವರ್ತನೆ ಅವರ ನಿಯಂತ್ರಣದಿಂದ ಹೊರಗಿರಲೆಂಬ ವಯೋಸಹಜ ಬುದ್ಧಿಯಿಂದ. ಅವರಿಗೆ ಊರಿನ ಒಡನಾಟ ಇರುತ್ತಿದ್ದರಿಂದ ನಾವೇನೇ ಮಾಡಿದರೂ ಅದು ಇಡೀ ಊರಿಗೆ ಗೊತ್ತಾಗುತ್ತಿತ್ತು.

ಇಂಥ ವಾತಾವರಣದಲ್ಲಿ ದಾರಿತಪ್ಪುವ ಸಾಧ್ಯತೆಗಳು ಕಡಿಮೆಯಿದ್ದವು. ಆದರೆ ಈಗ ಶೈಕ್ಷಣಿಕ ವ್ಯವಸ್ಥೆೆ ಮತ್ತು ಶೈಕ್ಷಣಿಕ ನೀತಿಗಳು ಹಾಗಿಲ್ಲವಾದ್ದರಿಂದ ಈಗ ಅಂಥ ಭಯವೂ ಇಲ್ಲ, ಪ್ರೀತಿಯೂ ಕಾಣುವುದಿಲ್ಲ. ಎಲ್ಲವೂ ಶುದ್ಧಾತಿಶುದ್ಧ ವ್ಯವಹಾರವಾಗಿಬಿಟ್ಟಿದೆ. ಸಮಾಜವೇ ಸಮಷ್ಟಿ ಬದುಕಿಗೆ ಎರವಾಗಿರುವಂಥ ಕಾಲದ ಹಳ್ಳಿಿಗಳಿಲ್ಲ. ಇದ್ದರೂ ಬೆರಳಣಿಕೆಯಷ್ಟು! ಆಧುನಿಕತೆ ಹಳ್ಳಿಗಳನ್ನು ಬರ್ಬಾದುಗೊಳಿಸಿದೆ. ಹಳ್ಳಿಗಳು ಸಹಜ ಸೌಂದರ್ಯವನ್ನು ಕಳೆದುಕೊಂಡಿವೆ. ಸಹಜತೆ, ವಿಶ್ವಾಸ, ಭರವಸೆ, ನಂಬಿಕೆ, ಮುಗ್ಧತೆಗಳಿಗೆ ಆಗರವಾದ ಹಳ್ಳಿಗಳಿಂದು ಇಂಥ ಮೌಲ್ಯಗಳನ್ನು ಉಳಿಸಿಕೊಳ್ಳದೇ ಬದುಕುತ್ತಿವೆ.

ಗಡಿಯಲ್ಲಿ ಶತ್ರುಗಳು ದುರಾಕ್ರಮಣದಿಂದ ನಮ್ಮ ಒಬ್ಬ ಯೋಧನನ್ನು ಕೊಂದರೆ, ಚೀನಾ ಜಪಾನ್ ಮೇಲೆ ಅತಿಕ್ರಮಣ ಮಾಡಿದರೆ, ಯಾವುದೋ ರಾಜಕಾರಣಿಯೊಬ್ಬನನ್ನು ಲೈಂಗಿಕ ಹಗರಣ, ಲಂಚ, ಭೂಕಬಳಿಕೆಯ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾದರೆ -ಇಂಥವುಗಳ ಪ್ರಭಾವ ಹಳ್ಳಿಗಳ ಮೇಲಾಗುವುದಿಲ್ಲವೆ? ಒಬ್ಬ ಶಿಕ್ಷಕನ ದುರ್ವರ್ತನೆಯಿಂದ ಶಿಕ್ಷಕ ಸಮೂಹವೇ ಸರಿಯಿಲ್ಲವೆಂದು ಆರೋಪಿಸುವ, ಆಕ್ಷೇಪಿಸುವ ಆಧುನಿಕ ಸಮಾಜಕ್ಕೆೆ ಒಳ್ಳೆಯ ಶಿಕ್ಷಕರನ್ನು ತಾವೆಷ್ಟು ಗೌರವಭಾವದಿಂದ ಕಾಣುತ್ತಿದ್ದೇವೆಂಬ ಅರಿವು ಇರಬೇಕಾಗುತ್ತದೆ. ಹೊಲಸು ರಾಜಕೀಯ ಹಳ್ಳಿಗಳನ್ನೂ ಬಿಡಲಿಲ್ಲ!

ಯಾವ ಶಿಕ್ಷಕನೂ ಪಾಠ ಮಾಡದಿರಲಾರ. ಜೀವನಮೌಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಹೇಳದಿರಲಾರ. ಬೋಧನಾ ಕೌಶಲಗಳು ಚೆನ್ನಾಗಿಲ್ಲದಿರ ಬಹುದು. ಕೆಟ್ಟ ಬೋಧನಾ ಕೌಶಲಗಳಂತೂ ಇರಲಾರದು. ಫೀಸು ಕಟ್ಟುವುದಿಲ್ಲ ಎಂಬ ಪೋಷಕರಿಗೂ, ನೀರಿಲ್ಲದ ಜಾಗಕ್ಕೆೆ ವರ್ಗಾಯಿಸಿ ಬಿಡುತ್ತೇನೆಂದ ಮೇಲಧಿಕಾರಿಗೂ, ಲೋಪವಿಲ್ಲದೆ ಕರ್ತವ್ಯ ನಿರ್ವಹಿಸುವ, ವೃತ್ತಿಬದ್ಧತೆಯನ್ನು ಕಾಪಾಡಿಕೊಂಡಿರುವ, ಯಾವ ಶಿಕ್ಷಕನೂ ಯಾವ ಮರ್ಜಿಗೂ ಬೀಳಲಾರ. ನಿಯಮ ಪಾಲನೆ ಮತ್ತು
ನೀತಿಸಂಹಿತೆಯನ್ನು ಉಲ್ಲಂಘನೆ ಮಾಡದ ಶಿಕ್ಷಕ ಅತ್ಮಸಮ್ಮಾನ ಉಳಿಸಿಕೊಂಡೇ ವೃತ್ತಿಜೀವನವನ್ನು ಸೇವಾಭಾವದಲ್ಲಿ ದುಡಿಯುತ್ತಾನೆ.

ಶಿಕ್ಷಕರಿಗೆ ಕಲಿಸುವುದು ಗೊತ್ತು, ಕಲಿಯುವುದೂ ಗೊತ್ತು, ಕಲಿಕೆಗೆ ತೊಡಗಿಸುವುದೂ ಗೊತ್ತು. ಒಂದು ಜನಾಂಗವನ್ನೇ ಗುಡಿಸಿ ಗುಂಡಾಂತರ ಮಾಡಿಬಿಡುವ ಶಿಕ್ಷಣ ನೀತಿಗಳನ್ನು ರಚಿಸುವ ಸಾಮರ್ಥ್ಯ ಸರಕಾರಕ್ಕೆೆ ಇರುವಂತೆ, ಶಿಕ್ಷಕನಿಗೂ ಒಂದು ತಲೆಮಾರನ್ನೇ ದಾರಿತಪ್ಪಿಸುವ ಸಾಮರ್ಥ್ಯವೂ ಇರುತ್ತದೆಂಬಲ್ಲಿಗೆ ಸಮಾಜ ಅವರನ್ನು ನೋಡಿಕೊಳ್ಳಬೇಕಾದ ರೀತಿಯಲ್ಲಿ ಆದರ್ಶದ ಸೋಗಿನ ಹಂಗನ್ನು ಅವರಿಗೆ ಮಾತ್ರ ತೊಡಿಸಬಾರದು.

ತಮ್ಮ ಮಕ್ಕಳ ಕಲಿಕಾ ಸಹಾಯಕರು ಎಂಬ ನೆಲೆಯಲ್ಲಿ ಬೋಧನೆ ಮತ್ತು ಕಲಿಕೆ ಸುಗಮವಾಗುವಂತೆ ಶಾಲೆಗಳನ್ನು ಸಮಾಜವೇ ನಡೆಸಬೇಕು. ಈಗಲೂ ಹಳ್ಳಿಗಳಲ್ಲಿ ಸ್ವಲ್ಪಮಟ್ಟಿಗಿದು ಸಾಧ್ಯವಾಗುತ್ತಿದೆ