ನೀರಿನ ಬಾಟಲ್ಗೆ 15 ರೂ. ಇದ್ದು, ಗುತ್ತಿಗೆದಾರ 20 ರೂ. ಪಡೆದಿದ್ದಾನೆ ಎಂದು ರೈಲು ಪ್ರಯಾಣಿಕ ದೂರು ನೀಡಿದ್ದರು. ಇದರ ಆಧಾರದ ಮೇಲೆ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಶಿವಂ ಭಟ್ ಎಂದು ಗುರುತಿಸಲಾದ ಪ್ರಯಾಣಿಕರೊಬ್ಬರು ಟ್ವಿಟ್ಟರ್ನಲ್ಲಿ ವೀಡಿಯೊ ವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ದಿನೇಶ್ ಎಂಬ ವ್ಯಕ್ತಿಯಿಂದ ನೀರಿನ ಬಾಟಲಿಗೆ 5 ರೂ. ಪಡೆದಿದ್ದಾರೆ. ಅದರ ಬೆಲೆ 15 ರೂ ಎಂಆರ್ಪಿ ಇದ್ದರೂ ನೀರಿನ ಬಾಟಲಿ ಯನ್ನು 20 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಪ್ರಯಾಣಿಕನು ರೈಲಿನಲ್ಲಿ ಚಂಡೀಗಢದಿಂದ ಶಹಜಹಾನ್ಪುರಕ್ಕೆ ಪ್ರಯಾಣಿಸುತ್ತಿದ್ದನು.
ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹರಿ ಮೋಹನ್, ‘ಐಆರ್ಸಿಟಿಸಿಯ ಪ್ರಾದೇಶಿಕ ವ್ಯವಸ್ಥಾಪಕರನ್ನು (ಆರ್ಎಂ) ಅಂಬಾಲಾಗೆ ಕರೆಸಿ ಪ್ರಕರಣದ ಬಗ್ಗೆ ಮಾಹಿತಿ ನೀಡಲಾಯಿತು. ರೈಲು ಬದಿಯ ಮಾರಾಟ ಮತ್ತು ಅಧಿಕ ಶುಲ್ಕದ ದೂರುಗಳನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಚರ್ಚಿಸಲಾಯಿತು.
ಮಂಜೂರಾತಿ ಪಡೆದು ಪರವಾನಗಿ ದಾಖಲೆಗಳನ್ನು ಪರಿಶೀಲಿಸಿದ ನಂತರ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ IRCTC ಆರ್ಎಂಗೆ ತಿಳಿಸಲಾಗಿದೆ ಎಂದು ಡಿಆರ್ಎಂ ಭಾಟಿಯಾ ತಿಳಿಸಿದ್ದಾರೆ.