Sunday, 24th November 2024

ಪ್ರೇಮಪತ್ರವನ್ನೂ ಪ್ರೂಫ್ ರೀಡ್ ಮಾಡಿ ಓದುವವರು ಪತ್ರಕರ್ತರು !

ಇದೇ ಅಂತರಂಗ ಸುದ್ದಿ

vbhat@me.com

ಪತ್ರಿಕೆಯಲ್ಲಿ ಸಣ್ಣ ಪುಟ್ಟ ತಪ್ಪುಗಳಾದರೂ, ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಪ್ರತಿದಿನ ಪತ್ರಿಕೆಯನ್ನು ಓದುವುದೆಂದರೆ, ಪ್ರೂ- ರೀಡ್ ಮಾಡುವುದಾಗಿತ್ತು. ಅಷ್ಟರಮಟ್ಟಿಗೆ ಅದು ಚಟವಾಗಿ ಪರಿಣಮಿಸಿತು. ಇದು ಪತ್ರಿಕೆ ಓದುವಾಗ ಮಾತ್ರ ಅಲ್ಲ, ರಸ್ತೆಯಲ್ಲಿ ಹೋಗುವಾಗ, ಯಾರz ಮನೆ ಹೆಸರು ನೋಡಿದಾಗ, ಅಂಗಡಿಗಳ ಬೋರ್ಡು ಓದುವ ತನಕ … ಮುಂದುವರಿದುಕೊಂಡು ಹೋಯಿತು. 

ಮೊನ್ನೆ ಸ್ನೇಹಿತರೊಬ್ಬರು ನನಗೆ ಆಮಂತ್ರಣ ಪತ್ರಿಕೆ ನೀಡಿದರು. ನಾನು ಅದನ್ನು ಸೂಕ್ಷ್ಮವಾಗಿ ಮೇಲಿಂದ ಕೆಳಕ್ಕೆ ಓದಿದೆ. ಅದರಲ್ಲಿ ಮೂರು ತಪ್ಪುಗಳು ಅಂದರೆ, ಮೂರು ಕರಡು ದೋಷಗಳು ಕಾಣಿಸಿದವು. ಅದರಲ್ಲಿನ ದೋಷಗಳನ್ನು ಆಮಂತ್ರಣ ಪತ್ರಿಕೆಯ ಮೇಲೆಯೇ, ಸ್ನೇಹಿತರ ಮುಂದೆಯೇ, ಗುರುತು ಹಾಕಿದೆ.

‘ನಿಮ್ಮ ಈ ಚಾಳಿಯನ್ನು ನೀವು ಎಲ್ಲಿ ಹೋದರೂ ಬಿಡುವುದಿಲ್ಲ ನೋಡಿ. ನಾನು ತಪ್ಪು ಮಾಡಿದೆ, ಆಮಂತ್ರಣ ಪತ್ರವನ್ನು ಮುದ್ರಣಕ್ಕೆ ಕಳಿಸುವ ಮುನ್ನ, ನಿಮಗೆ ತೋರಿಸಬೇಕಿತ್ತು’ ಎಂದರು. ಪ್ರೂಫ್ ರೀಡ್ ಮಾಡುವುದು ಪತ್ರಕರ್ತರಿಗೆ ಒಂದು ಚಟವಾಗಿ ಅಭ್ಯಾಸವಾಗಿರುತ್ತದೆ. ಅವರಿಗೆ ಯಾರಾದರೂ ಪ್ರೇಮಪತ್ರ ಬರೆದರೂ, ಅವರು ಮೊದಲು ಪ್ರೂಫ್ರೀಡ್ ಮಾಡುವ ಮನಃಸ್ಥಿತಿಯ ಓದುತ್ತಾರೆ. ನಾನು ಪತ್ರಿಕೋದ್ಯಮ ಪಾಠ ಮಾಡುತ್ತಿದ್ದ ಏಶಿಯನ್ ಕಾಲೇಜಿನ ಡೀನ್ ಮತ್ತು ಹಿರಿಯ ಪತ್ರಕರ್ತ ಜ್ಯೋತಿ ಸನ್ಯಾಲ್ ಅವರನ್ನು ಒಮ್ಮೆ ಗಣ್ಯರೊಬ್ಬರು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುತ್ತ ಆಮಂತ್ರಣ ಪತ್ರ ನೀಡಿದರು. ಜ್ಯೋತಿ ಅದನ್ನು ಮೇಲಿನಿಂದ ಕೆಳಕ್ಕೆ ಎರಡು ಸಲ ಓದಿ, ಅವರ ಮುಂದೆಯೇ ಎಡಿಟ್ ಮಾಡಲಾರಂಭಿಸಿದರು. ಕನಿಷ್ಠ ಅದರಲ್ಲಿ ಆರೇಳು ತಪ್ಪುಗಳಿದ್ದವು.

‘ನೋಡಿ, ಇಷ್ಟು ತಪ್ಪುಗಳಿರುವ ಆಮಂತ್ರಣ ಪತ್ರ ನೀಡಿದರೆ, ನಿಮ್ಮ ಬಗ್ಗೆ ಎಂಥ ಭಾವನೆ ಮೂಡಬಹುದು? ಭಾಷೆ ಅಂದರೆ ನೀರು, ಗಾಳಿ, ಪರಿಸರದಷ್ಟೇ ಪವಿತ್ರ. ಪರಿಸರವನ್ನು ಕಾಪಾಡಿದಂತೆ ಭಾಷೆಯನ್ನೂ ಕಾಪಾಡಬೇಕು. ಮಾಲಿನ್ಯ ಕೇವಲ
ಪರಿಸರಕ್ಕಷ್ಟೇ ಅಲ್ಲ, ಭಾಷೆಗೂ ಅನ್ವಯವಾಗುತ್ತದೆ’ ಎಂದು ಅವರ ಮುಖಕ್ಕೆ ಹೊಡೆಯುವಂತೆ ಹೇಳಿದ್ದರು. ಕರ್ನಾಟಕ ಹೈ ಕೋರ್ಟಿನ ನ್ಯಾಯಮೂರ್ತಿಯೊಬ್ಬರನ್ನು ಅತಿಥಿ ಉಪನ್ಯಾಸಕ್ಕೆ ಕಾಲೇಜಿಗೆ ಆಹ್ವಾನಿಸಲಾಗಿತ್ತು. ನ್ಯಾಯಮೂರ್ತಿಗಳು ಪಾಠ ಮುಗಿಸಿ ಬಂದು ಜ್ಯೋತಿ ಸನ್ಯಾಲ್ ಅವರ ಜತೆಗೆ ಲೋಕಾಭಿರಾಮ ಮಾತನಾಡುತ್ತಿದ್ದರು.

ನ್ಯಾಯಮೂರ್ತಿಗಳು ತಮ್ಮ ಮಾತಿನ ಮಧ್ಯೆ one of my friend ಎಂದು ಹೇಳಿದರು. ಅದಾದ ಬಳಿಕ ಮತ್ತೊಂದು ಸಂದರ್ಭದಲ್ಲಿ one of my book ಎಂದು ಹೇಳಿದರು. ಜ್ಯೋತಿ ಸನ್ಯಾಲ್ ಅವರಿಗೆ ಏನನಿಸಿತೋ ಏನೋ, ‘ಜಸ್ಟಿಸ್, ನೀವೇ ಈ ಥರ ಕ್ಷುಲ್ಲಕ ಪ್ರಮಾದ ಮಾಡಿದರೆ ಹೇಗೆ? one of my friend ಎಂದು ಹೇಳಬಾರದು, ಅದು ತಪ್ಪು. one of my friends ಎಂದು ಹೇಳಬೇಕು. ಹಲವು ಸ್ನೇಹಿತರ ಪೈಕಿ ಒಬ್ಬರು ಎಂದರ್ಥ. one of ಎಂಬ ಪ್ರಯೋಗ ಮಾಡಿದಾಗ ಮುಂದಿನ ಪದ ಬಹುವಚನದಲ್ಲಿರಬೇಕು’ ಎಂದು ಸಣ್ಣ ಲೆಕ್ಚರ್ ಕೊಟ್ಟರು.

ಜಡ್ಜ್ ಸಾಹೇಬರು ಏನೆಂದುಕೊಳ್ಳಬಹುದು ಎಂಬುದನ್ನೂ ಜ್ಯೋತಿ ಲೆಕ್ಕಿಸಲಿಲ್ಲ. ನ್ಯಾಯಮೂರ್ತಿಗಳ ಮುಖ ಹಳ್ಳಹುಳ್ಳ
ಗಾಗಿತ್ತು. ಪ್ರಾಯಶಃ ಅವರಿಗೆ ಯಾರೂ ಆ ರೀತಿ ಪಾಠ ಮಾಡಿರಲಿಕ್ಕಿಲ್ಲ. ಬೇರೆಯವರಾಗಿದ್ದರೆ ನ್ಯಾಯಮೂರ್ತಿಗಳ
ಜತೆ ಯಾಕೆ ವಾದ-ವಿವಾದ ಎಂದು ಯೋಚಿಸುತ್ತಿದ್ದರು. ನ್ಯಾಯಮೂರ್ತಿಗಳ ಭಾಷೆ ಬಗ್ಗೆ ಯಾಕೆ ತೀರ್ಪು ಕೊಡಬೇಕೆಂದು ಸುಮ್ಮನಾಗುತ್ತಿದ್ದರು.

ಒಂದು ವೇಳೆ ನ್ಯಾಯಮೂರ್ತಿ ಬದಲು ಮುಖ್ಯಮಂತ್ರಿ ಅಥವಾ ರಾಷ್ಟ್ರಪತಿ ಆ ತಪ್ಪು ಮಾಡಿದ್ದರೂ ಜ್ಯೋತಿ ತಪ್ಪನ್ನು ತಿದ್ದದೇ ಬಿಡುತ್ತಿರಲಿಲ್ಲ. ತನ್ನ ಈ ಸ್ವಭಾವದ ಬಗ್ಗೆ ಬೇರೆಯವರು ಏನು ತಿಳಿಯುತ್ತಾರೋ, ತನ್ನ ಪಾಠದಿಂದ ಇತರರಿಗೆ ಮುಜುಗರ ವಾಗಬಹುದು ಎಂಬುದನ್ನೂ ಅವರು ಪರಿಗಣಿಸುತ್ತಿರಲಿಲ್ಲ. ಭಾಷಾ ಶುದ್ಧಿ ಮುಂದೆ ಬೇರೆಲ್ಲವೂ ಅವರಿಗೆ ಗೌಣವಾಗಿತ್ತು. ಯಾರಾದರೂ ವಾದಕ್ಕಿಳಿದರೆ, ಜಗಳಕ್ಕೆ ನಿಂತರೆ ಅವರು ಅದಕ್ಕೂ ಸಿದ್ಧ.

ಭಾಷೆಗಾಗಿ ಅಷ್ಟೂ ಮಾಡದಿದ್ದರೆ ಹೇಗೆ ? ನನಗೆ ಎಷ್ಟೋ ಸಲ ಅನಿಸಿದ್ದಿದೆ, ಜ್ಯೋತಿ ಸನ್ಯಾಲ್ ಪ್ರಧಾನಿಯಾಗಿದ್ದರೆ, ‘ಸ್ವಚ್ಛ್ ಭಾರತ’ ಬದಲು ‘ಸ್ವಚ್ಛ್ ಭಾಷಾ’ ಅಭಿಯಾನ ಘೋಷಿಸುತ್ತಿದ್ದರೆಂದು. ಅವರು ಒಬ್ಬ ವ್ಯಕ್ತಿಯನ್ನು ಅಳೆಯುತ್ತಿದ್ದುದೇ ಅವರು ಉಪಯೋಗಿಸುವ ಭಾಷೆಯಿಂದಾಗಿತ್ತು. ಯಾರಾದರೂ ಕೆಟ್ಟ ಇಂಗ್ಲಿಷ್ ಬಳಸಿದರೆ, ಅವರ ವ್ಯಕ್ತಿತ್ವವೂ ಕೆಟ್ಟದ್ದು ಎಂದೇ ಅವರು ಭಾವಿಸುತ್ತಿದ್ದರು. ನನಗೆ ಅವರ ಈ ಭಾಷಾ ಪ್ರೇಮ ಬಹಳ ಇಷ್ಟವಾಗುತ್ತಿತ್ತು. ಆದರೆ ಕೆಟ್ಟ ಭಾಷೆ ಪ್ರಯೋಗಿಸುವವರು ಕೆಟ್ಟವರು ಎಂಬುದನ್ನು ನಾನು ಒಪ್ಪುತ್ತಿರಲಿಲ್ಲ. ಈ ವಿಷಯದ ಬಗ್ಗೆ ನನಗೆ ಅವರಿಗೆ ಆಗಾಗ ವಾದವಾಗುತ್ತಿತ್ತು. ಆದರೆ ಆ ಮನುಷ್ಯ ಈ ಜನ್ಮದಲ್ಲಿ ಬದಲಾಗುವುದಿಲ್ಲ ಎಂಬುದು ಖಾತ್ರಿಯಾದ ನಂತರ ನಾನು ಕೈಚೆಲ್ಲಿದೆ.

ಅವರನ್ನು ಬದಲು ಮಾಡುವ ಬದಲು, ನಿಧಾನವಾಗಿ ನಾನೂ ಅವರಂತೆ ಯೋಚಿಸಲಾರಂಭಿಸಿದ್ದೆ. ಪತ್ರಿಕೆಯಲ್ಲಿ ಸಣ್ಣ ಪುಟ್ಟ
ತಪ್ಪುಗಳಾದರೂ, ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಪ್ರತಿದಿನ ಪತ್ರಿಕೆಯನ್ನು ಓದುವುದೆಂದರೆ, ಪ್ರೂಫ್ ರೀಡ್ ಮಾಡುವುದಾಗಿತ್ತು.
ಅಷ್ಟರಮಟ್ಟಿಗೆ ಅದು ಚಟವಾಗಿ ಪರಿಣಮಿಸಿತು. ಇದು ಪತ್ರಿಕೆ ಓದುವಾಗ ಮಾತ್ರ ಅಲ್ಲ, ರಸ್ತೆಯಲ್ಲಿ ಹೋಗುವಾಗ, ಯಾರದ್ದೇ ಮನೆ ಹೆಸರು ನೋಡಿದಾಗ, ಅಂಗಡಿಗಳ ಬೋರ್ಡು ಓದುವ ತನಕ … ಮುಂದುವರಿದುಕೊಂಡು ಹೋಯಿತು.

ಕೆಳಸ್ತರದವರನ್ನು ನಿಭಾಯಿಸುವುದು ಕಡಿಮೆ ಸಂಬಳಕ್ಕೆ ಜನರನ್ನು ಕೆಲಸಕ್ಕಿಟ್ಟುಕೊಳ್ಳುವುದು ತಪ್ಪಲ್ಲ. ಆದರೆ ಸಂಸ್ಥೆಯ ಎಚ್. ಆರ್. ವಿಭಾಗದವರು ಅಂಥ ಕೆಲಸಗಾರರಿಗೆ ಸೂಕ್ತ ತರಬೇತಿ ಕೊಡಬೇಕು. ಹಾಗೆ ಮಾಡದೇ, ಉಳಿಸುವ ದುಡ್ಡಿನಲ್ಲಿ, ಆ ಕೆಲಸಗಾರರು ಸಂಸ್ಥೆಯ ಮಾನ ಹರಾಜಾಗುವ ಪರಿಸ್ಥಿತಿಯನ್ನು ತಂದಿಡುತ್ತಾರೆ. ಎಲ್ಲ ಆಫೀಸುಗಳಲ್ಲಿ ಸಣ್ಣಸಂಬಳದ ಅಶಿಕ್ಷಿತ ಕೆಲಸಗಾರರು ಇದ್ದೇ ಇರುತ್ತಾರೆ. ಅವರಿಂದ ಕೆಲಸ ಮಾಡಿಸುವುದರಲ್ಲಿ ತಪ್ಪೇನಿಲ್ಲ.

ಆದರೆ ಒಂದು ಮಾತು ನೆನಪಿಡಬೇಕು. ಕಂಪನಿಯ ಕೆಲಸಗಳಲ್ಲಿ ಅವರು ದಿನನಿತ್ಯ ಗ್ರಾಹಕರೊಂದಿಗೆ ಮುಖಾಮುಖಿ
ಯಾಗುತ್ತಾರೆ. ಗ್ರಾಹಕರು ಕೂಡ ದಿನನಿತ್ಯ ಅವರೊಂದಿಗೆ ವ್ಯವಹರಿಸುತ್ತಾರೆ. ಅಂಥ ಕೆಳಸ್ತರದ ಕೆಲಸಗಾರರು ಅಶಿಕ್ಷಿತರಾಗಿ
ದ್ದರೆ ಸಹಜವಾಗಿ ಅವರಲ್ಲಿ ವಿನಯ, ವಿನಮ್ರತೆ ಕಡಿಮೆ ಇರುತ್ತದೆ. ಅವರ ನಡತೆ ಒರಟಾಗಿರುತ್ತದೆ. ಅವರಿಗೆ ತಾವು ಕೆಲಸ ಮಾಡುವ ಸಂಸ್ಥೆಯ ಘನತೆ, ಸ್ಥಾನಮಾನ ಗೊತ್ತಿರುವುದಿಲ್ಲ. ಅವರು ತಮಗೆ ಗೊತ್ತಿಲ್ಲದೇ ತಾವು ಕೆಲಸ ಮಾಡುವ ಸಂಸ್ಥೆಯ ಘನತೆಗೆ ಕುಂದು ತರುವ ಕೆಲಸ ಮಾಡಿಬಿಡುತ್ತಾರೆ.

ಅದರ ಪರಿಣಾಮವನ್ನು ನೀವು ಯೋಚನೆ ಕೂಡ ಮಾಡಲಾಗುವುದಿಲ್ಲ. ಕೆಲ ವಾರಗಳ ಹಿಂದೆ, ಡೆಲಿವರಿ ಸರ್ವಿಸ್‌ನವ ರೊಂದಿಗೆ ಆದ ಅನುಭವವೊಂದನ್ನು ಪತ್ರಿಕಾ ಓದುಗರೊಬ್ಬರು ಹಂಚಿಕೊಂಡಿರು. ಡೆಲಿವರಿ ಬಾಯ್ ತುಂಬಾ ಕಟ್ಟುಮಸ್ತಾ ಗಿದ್ದ. ಆದರೆ ಅವನಿಗೆ ವ್ಯವಹಾರ ಕೌಶಲ್ಯ ಇರಲಿಲ್ಲ. ಅವನಿಗೆ ಬುದ್ಧಿವಾದ ಹೇಳಲು ಹೋದರೆ, ವಾಪಸ್ ಹೆದರಿಸುವಷ್ಟು ದಾರ್ಷ್ಟ್ಯ ಹೊಂದಿದ್ದ. ಬೆಳಗಿನ ಜಾವ ಮನೆಮನೆಗಳಿಗೆ ಹಾಲಿನ ಪ್ಯಾಕೆಟ್ ವಿತರಣೆ ಮಾಡುವ ಆತ, ಗೇಟಿನ ಬಳಿ ಇರುವ ಚೀಲದಲ್ಲಿ ಹಾಲಿನ ಪ್ಯಾಕೆಟ್ ಹಾಕುವ ಬದಲು, ರಸ್ತೆಯ ಎಸೆದು ಹೋಗಿದ್ದ.

ಆ ಬಗ್ಗೆ ಪ್ರಶ್ನಿಸಿದಾಗ, ಆತ ರಸ್ತೆಯ ರಂಪಾಟ ನಡೆಸಿಬಿಟ್ಟ. ಅದರಿಂದ ತಾವು ಆ ಕಂಪನಿ ಜತೆ ವ್ಯವಹರಿಸುವುದನ್ನೇ ಬಿಟ್ಟಿzಗಿ ಬರೆದಿದ್ದರು. ಮ್ಯಾನೇಜ್‌ಮೆಂಟ್ ಗುರು ರಘುರಾಮನ್ ತಮ್ಮದೇ ಒಂದು ಅನುಭವವನ್ನು ಹಂಚಿಕೊಂಡಿದ್ದರು. ಅವರ ಪಕ್ಕದ ಮನೆಯವರು ಇಂಟರ್‌ನೆಂಟ್‌ಗಾಗಿ ಏರ್‌ಟೆಲ್ ಆಪ್ಟಿಕ್ ಫೈಬರ್ ಸರ್ವಿಸ್ ಇನ್‌ಸ್ಟಾಲ್ ಮಾಡಿಸುತ್ತಿದ್ದರು. ಕಾಂಕ್ರೀಟಿನ ಅಡಿಯಲ್ಲಿ ಹೂತುಹೋಗಿದ್ದ ಹಳೆಯ ಕೇಬಲ್ ಹೊರತೆಗೆಯುವಷ್ಟರಲ್ಲಿ ಇಬ್ಬರು ಕೆಲಸಗಾರರು ಹೈರಾಣಾಗಿ ಹೋಗಿದ್ದರು. ಅಲ್ಲಿಗೆ ಆಪ್ಟಿಕ್ ಲೈನ್ ಹಾಕಿಸಬೇಕಿತ್ತು. ಇದು ಬಹಳ ಪ್ರಯಾಸದ ಕೆಲಸ.

ಏಕೆಂದರೆ ರಘುರಾಮನ್ ಅದೇ ಮಹಡಿಯಲ್ಲಿ ವಾಸವಾಗಿದ್ದರು. ಅವರು ಹಲವಾರು ಬಾರಿ ಅಲ್ಲಿ ಹೋಗಿ ಆಗುತ್ತಿರುವ ಕೆಲಸ ವನ್ನು ಗಮನಿಸುತ್ತಿದ್ದರು. ಸುಮಾರು ಎರಡು ಗಂಟೆ ಕಾಲ ಅವರು ಕೆಲಸದ ಜಾಗದಲ್ಲಿದ್ದರು. ಕೆಲಸಗಾರರಬ್ಬ ವ್ಯಕ್ತಿ ಮೆಟ್ಟಿಲು ಗಳ ಮೇಲೆ ಕುಳಿತು ಊಟ ಮಾಡುತ್ತಿದ್ದರೆ, ಇನ್ನೊಬ್ಬ ಮೆಟ್ಟಿಲುಗಳ ಮೇಲೆ ಕುಳಿತೇ ಕೈತೊಳೆಯುತ್ತಿದ್ದ. ಇದೊಂದು ಕೆಟ್ಟ ಪ್ರವೃತ್ತಿ. ದೊಡ್ಡ ಕಟ್ಟಡವಾದ್ದರಿಂದ ಮೆಟ್ಟಿಲು ಬಳಸುವವರು ಕಮ್ಮಿ. ಅದೂ ಅಲ್ಲದೇ ಮೆಟ್ಟಿಲುಗಳ ಮೇಲೆ ನೀರು ಚೆಲ್ಲಿದರೆ ಅದು ಒಣಗುತ್ತದೆಂಬುದು ಕೂಡ ತಪ್ಪುಕಲ್ಪನೆ.

ಕಂಪನಿಯ ಒಬ್ಬ ಉದ್ಯೋಗಿ, ಕಂಪನಿಯ ಲಾಂಛನವುಳ್ಳ ಸಮವಸ ಧರಿಸಿ ಈ ರೀತಿ ಮೆಟ್ಟಿಲುಗಳ ಮೇಲೆ ಕೈತೊಳೆದು ಕೊಂಡರೆ ನಿಮಗೆ ಏನನಿಸುತ್ತದೆ? ಸಹಜವಾಗಿ ಆ ಕಂಪನಿಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ರಘುರಾಮನ್ ಸ್ನೇಹಿತ ಆ ಇಬ್ಬರೂ ಕೆಲಸಗಾರರ ಅಸಭ್ಯ ವರ್ತನೆ ನೋಡಿ ಸಿಟ್ಟುಮಾಡಿಕೊಂಡು ಕೂಗಾಡಿಬಿಟ್ಟ. ಅವರೂ ಕ್ಷಮೆ ಕೇಳಲು ಒಪ್ಪಲಿಲ್ಲ. ‘ನೀವು ಹೀಗೆಲ್ಲ ಮಾತನಾಡಿದರೆ ನಾವು ಕೆಲಸ ಬಿಟ್ಟುಹೋಗುತ್ತೇವೆ’ ಎಂದು ಬೆದರಿಸಿದರು.

ರಘುರಾಮನ್ ಏರ್‌ಟೆಲ್ ಸಂಸ್ಥೆಯ ಉನ್ನತ ಹುದ್ದೆಯಲ್ಲಿದ್ದ ಅಂಶುಮನ್ ಚೌಧರಿಯವರಿಗೆ ಫೋನ್ ಮಾಡಿ, ‘ನಿಮ್ಮ
ಕಂಪನಿಯ ಕೆಳಸ್ತರದ ಕೆಲಸಗಾರರನ್ನು ನೀವು ಸರಿಯಾಗಿ ತರಬೇತಿ ನೀಡಿಲ್ಲ. ಹೀಗಾಗಿ ಅವರು ಮಾಡುವ ತಪ್ಪಿಗೆ ನಿಮ್ಮ
ಸಂಸ್ಥೆಗೆ ಕೆಟ್ಟ ಹೆಸರು ಬರುತ್ತದೆ’ ಎಂದು ತಿಳಿಸಿದರು. ಅದಕ್ಕೆ ಚೌಧರಿ ಮರು ಮಾತಾಡದೇ ಒಪ್ಪಿಕೊಂಡರು. ಸುಮಾರು ಒಂದು ಗಂಟೆ ಕಳೆದ ನಂತರ, ಗ್ರಾಹಕ ಸಂಪರ್ಕ ವಿಭಾಗದ ಪ್ರಮುಖರಿಂದ ದೂರವಾಣಿ ಕರೆ ಬಂತು. ಸಂಬಂಧಿ
ವ್ಯಕ್ತಿಗಳನ್ನು ಕೆಲಸದಿಂದ ತೆಗೆದುಹಾಕುವುದಾಗಿ ಅವರು ಭರವಸೆ ಕೊಟ್ಟರು.

ಅದಕ್ಕೆ ರಘುರಾಮನ್ ‘ಹಾಗೆಲ್ಲ ಮಾಡಬೇಡಿ, ಈ ದಿನಗಳಲ್ಲಿ ಕೆಲಸಗಾರರು ಸಿಗುವುದೇ ಕಷ್ಟ’ ಎಂದು ಸಮಾಧಾನದಿಂದ ಹೇಳಿದರು. ಇಲ್ಲಿ ಗಮನಿಸಬೇಕಾದ ಸಂಗತಿ ಅಂದರೆ, ಒಂದು ಸಂಸ್ಥೆಯಲ್ಲಿ ಎಲ್ಲ ಸ್ತರಗಳಲ್ಲಿ ಕೆಲಸಗಾರರೂ ಇರುತ್ತಾರೆ, ಇರಬೇಕು. ಎಲ್ಲ ಸ್ತರಗಳ ಜನರೂ ಒಂದೇ ಮನಃಸ್ಥಿತಿಯಲ್ಲಿ ಇರುವುದಿಲ್ಲ. ಉನ್ನತ ಹುದ್ದೆಯಲ್ಲಿ ಇರುವವರ ಹಾಗೆ ಕಂಪನಿಯ ಬಗ್ಗೆ ಕೆಳಸ್ತರದಲ್ಲಿರುವವರೂ ಯೋಚಿಸಬೇಕು ಮತ್ತು ಕಂಪನಿಯ ಘನತೆ ಮತ್ತು ಮರ್ಯಾದೆಯ ಬಗ್ಗೆ ಚಿಂತಿಸಬೇಕು. ಎಲ್ಲ ಕೆಲಸಗಾರರಲ್ಲೂ ಈ ಭಾವನೆ ಮೂಡಿಸಬೇಕು ಅಂದ್ರೆ ಸೂಕ್ತವಾದ ಪ್ರಶಿಕ್ಷಣ ನೀಡಬೇಕು.

ಕಾಲಕಾಲಕ್ಕೆ ಕೆಳಸ್ತರದಲ್ಲಿರುವವರನ್ನು ತರಬೇತಿಗೆ ಒಳಪಡಿಸಬೇಕು. ಅವರು ಇರುವ ಸ್ತರದಿಂದ ಮೇಲೆತ್ತುವ ಪ್ರಯತ್ನವನ್ನು ನಿರಂತರವಾಗಿ ಮಾಡಲೇಬೇಕು. ಇಲ್ಲದಿದ್ದರೆ ಅವರ ಕ್ಷುಲ್ಲಕ ವರ್ತನೆಯಿಂದ ಇಡೀ ಸಂಸ್ಥೆಯ ಘನತೆ ಮಣ್ಣುಪಾಲಾಗುತ್ತದೆ. ಸಂಸ್ಥೆಯ ಹಣ ಉಳಿಸಲು ಹೋಗಿ, ಬ್ರಾಂಡ್ ನೇಮ್‌ಗೆ ಕಪ್ಪುಚುಕ್ಕೆ ಬರಬಾರದು. ಪ್ರಕಟವಾಗದ ಪತ್ರಗಳ ಸಂಗ್ರಹ
ಕೆಲವು ಪತ್ರಿಕೆಗಳು ತಾವು ಪ್ರಕಟಿಸಿದ, ಓದುಗರ ಆಯ್ದ ಪತ್ರಗಳನ್ನು ಸಂಗ್ರಹಿಸಿ ಪ್ರಕಟಿಸಿದರೆ, ಲಂಡನ್‌ನ ‘ದಿ ಡೇಲಿ
ಟೆಲಿಗ್ರಾ-’ ಪತ್ರಿಕೆ ಹೊಸ ಸಂಪ್ರದಾಯ ಆರಂಭಿಸಿದೆ.

ತಾನು ಪ್ರಕಟಿಸದ (Unpublished Letters) ಪತ್ರಗಳನ್ನು ಸಂಗ್ರಹಿಸಿ ಪ್ರತಿ ವರ್ಷ ಪುಸ್ತಕವನ್ನು ಪ್ರಕಟಿಸುತ್ತದೆ. ಆ
ಪತ್ರಿಕೆಯ ಲೆಟರ್ಸ್ ಡೆಸ್ಕ್ ನೋಡಿಕೊಳ್ಳುವ ಸಹಾಯಕ ಸಂಪಾದಕಿ ಕೇಟ್ ಮೂರ್ ಸಂಗ್ರಹಿಸಿದ ಪತ್ರಗಳಿಗೆ ಪುಸ್ತಕ ರೂಪ
ನೀಡಲಾಗಿದೆ. ಈ ಮಾಲಿಕೆಯಲ್ಲಿ ಈಗಾಗಲೇ ಆರು ಪುಸ್ತಕಗಳು ಪ್ರಕಟವಾಗಿವೆ. ಮೊನ್ನೆ ನಾನು ಲಂಡನ್‌ಗೆ ಹೋದಾಗ ಅಲ್ಲಿನ ‘ವಾಟರ್ ಸ್ಟೋನ್’ ಎಂಬ ಪ್ರಸಿದ್ಧ ಪುಸ್ತಕದ ಅಂಗಡಿಯಲ್ಲಿ ಈ ಕೃತಿ ಕಣ್ಣಿಗೆ ಬಿತ್ತು. ನನಗೆ ಅದನ್ನು ಖರೀದಿಸದೇ ಇರಲಾಗಲಿಲ್ಲ.

ಕೆಲ ಓದುಗರು ಪ್ರತಿದಿನ ಪತ್ರಿಕೆಗಳಿಗೆ ಬರೆಯುತ್ತಾರೆ. ಅವರಿಗೆ ಅದೇನೋ ಒಂಥರಾ ಅಭ್ಯಾಸ. ಕನ್ನಡದಲ್ಲೂ ಇಂಥ
ಹಲವರಿದ್ದಾರೆ. ಸೂರ್ಯನ ಕೆಳಗಿರುವ ಎಲ್ಲ ವಿಷಯಗಳ ಬಗ್ಗೆಯೂ ಅವರು ತಮ್ಮ ಅಭಿಪ್ರಾಯವನ್ನು ಹರಿಬಿಡುತ್ತಾರೆ.
ಸಂಪಾದಕರಿಗೆ ಬರೆದು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳದಿದ್ದರೆ ಅವರಿಗೆ ಸಮಾಧಾನವಿಲ್ಲ. ಇನ್ನು ಕೆಲವರು ಕ್ರೇಜಿ ಐಡಿಯಾಗಳನ್ನು ಕೊಡುತ್ತಾರೆ.

‘ಮುಖ್ಯಮಂತ್ರಿ ಸಿಕ್ಕಿದಾಗ ಅವರಿಗೆ ಹೇಳಿ’ ಅಥವಾ ‘ನಿಮ್ಮ ಅಂಕಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ’ ಎಂದು ತಮ್ಮ
ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಬರೆದು ಕಳಿಸುತ್ತಾರೆ. ಇದಕ್ಕೆ ತಮ್ಮ ಅಮೂಲ್ಯ ಸಮಯ, ಸಂಯಮ ಮತ್ತು ಹಣವನ್ನು ವ್ಯಯಿಸುತ್ತಾರೆ. ನನಗೆ ಕೆ.ಕೆ.ಜೋರಾಪುರ ಎಂಬುವವರು ನಿತ್ಯವೂ ಕಳೆದ ಏಳೆಂಟು ವರ್ಷಗಳಿಂದ ಬರೆಯುತ್ತಿದ್ದಾರೆ. ಇವರನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂಬ ಹಂಬಲವಿದೆ.

ಅದಿನ್ನೂ ಸಾಧ್ಯವಾಗಿಲ್ಲ. ಅವರು ಅಷ್ಟು ಬರೆದರೂ ನಾನು ಅವರಿಗೆ ಐದಾರು ಸಲ ಪತ್ರ ಬರೆದಿರಬಹುದು. ನಾನು ಉತ್ತರಿಸಲಿ, ಬಿಡಲಿ ಅವರು ಮಾತ್ರ ನಿತ್ಯವೂ ಒಂದು ವ್ರತದಂತೆ ಬರೆಯುತ್ತಲೇ ಇದ್ದಾರೆ. ಅವರದು ಅಂಥ ನಿಷ್ಠೆ. ಅವರ
ಪತ್ರಗಳನ್ನು ಪ್ರಕಟಿಸಲಿ, ಬಿಡಲಿ, ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಬರೆಯುವುದಷ್ಟೇ ಮುಖ್ಯ. ಕೆಲವರು ಸುಮ್ ಸುಮ್ನೆ ಬರೆಯುವುದಿಲ್ಲ. ಅವರ ಪತ್ರಗಳಲ್ಲಿ ಏನೋ ಒಂದು ‘ಮಿಂಚು’ ಇರುತ್ತದೆ. ತರಲೆ ಐಡಿಯಾಗಳನ್ನು ಹಂಚಿಕೊಂಡಿರು ತ್ತಾರೆ.

ಯಾರದ್ದೇ ಕಾಲೆಳೆದಿರುತ್ತಾರೆ, ಚೇಷ್ಟೆ ಮಾಡಿರುತ್ತಾರೆ. ಒಟ್ಟಾರೆ ಅವರ ಪತ್ರ ಭಲೇ ಆಸಕ್ತಿದಾಯಕವಾಗಿರುತ್ತದೆ. ಲಂಡನ್‌ನ ‘ದಿ ಡೇಲಿ ಟೆಲಿಗ್ರಾ-’ ಪತ್ರಿಕೆ ಸಂಗ್ರಹಿಸಿರುವ ಪತ್ರಗಳು ಈ ವರ್ಗಕ್ಕೆ ಸೇರಿದಂಥವುಗಳು. ಹಾಗಂತ ಅವು ಆ ಪತ್ರಿಕೆಯಲ್ಲಿ ಪ್ರಕಟವಾದವುಗಳಲ್ಲ. ಅದೇ ಈ ಪುಸ್ತಕದ ವಿಶೇಷ.

ಮಹಿಳೆಯೊಬ್ಬಳು ಬರೆದಿದ್ದಳು – SIR, My husband, aged 83, regularly searches for tractors online (we already have three). Should I be concerned? ಮತ್ತೊಬ್ಬರು ಬರೆದಿದ್ದರು – SIR, Am I the only one who had to read the headline ‘Public count of walruses from space to be verified’ a couple of times? ಮಹಿಳೆಯೊಬ್ಬಳು ಬರೆದಿದ್ದಳು – SIR, My daughters, who are now in their twenties,
used to say it was not a party until the police were called.. ಸುಮಾರು ಇನ್ನೂರು ಪುಟಗಳ ಆ
ಪುಸ್ತಕ ವಿಡೀ ಇಂಥವೇ ತರಲೆಗಳು.

‘ಪತ್ರಿಕೆ ಅದರ ಓದುಗರಂತೆ. ಓದುಗರು ಇಷ್ಟು ತರಲೆ, ಕಿಲಾಡಿ ಇದ್ದರೆ ಅದಕ್ಕೆ ಕಾರಣ ಪತ್ರಿಕೆಯೇ’ ಅಂತ ಈ ಪುಸ್ತಕವನ್ನು ಸಂಪಾದಿಸಿದ ಕೇಟ್ ಮೂರ್ ಬರೆಯುತ್ತಾಳೆ. ಫಲಕ ಸಾಹಿತ್ಯ ನಾನು ವಿದೇಶಗಳಿಗೆ ಹೋದಾಗ, ಅಲ್ಲಿನ ಫಲಕಗಳನ್ನು
ಓದುವುದನ್ನು ಮರೆಯುವುದಿಲ್ಲ. ಫಲಕ ಸಾಹಿತ್ಯ ಯಾವ ವಿನೋದ ಸಾಹಿತ್ಯಕ್ಕೂ ಕಮ್ಮಿಯಿಲ್ಲ ಎಂಬುದು ಅನೇಕ ಸಲ
ಅನಿಸಿದೆ.

ಇತ್ತೀಚೆಗೆ ನಾನು ಸ್ಕಾಟ್ಲೆಂಡಿನ ಎಡಿನ್‌ಬರಕ್ಕೆ ಹೋದಾಗ ಅಲ್ಲಿನ ರೆಸ್ಟೋರೆಂಟಿನಲ್ಲಿ ಫಲಕ ನೋಡಿ, ನಿಜಕ್ಕೂ ವಾರದಲ್ಲಿ ಎಷ್ಟು ದಿನಗಳು ಎಂಬ ಬಗ್ಗೆ ಸಂದೇಹ ಕಾಡಿತು. ಆ ಫಲಕದ ಮೇಲೆ ಹೀಗೆ ಬರೆದಿತ್ತು – Open seven days a week
and weekends. ಎಡಿನ್‌ಬರದ ಟ್ರಾವೆಲ್ ಶಾಪ್ ಎದುರು ಕಂಡ ಒಂದು ಫಲಕ – I need a vacation of 6 months. Twice a year!  ಅಲ್ಲಿಯೇ ಕಂಡ ಇನ್ನೊಂದು ಬರಹ – You weren’t born to just pay bills and die.

ಅದೇ ನಗರದಲ್ಲಿ ನಾವು ಉಳಿದುಕೊಂಡ ಹಾಲಿಡೇ ಇನ್ ಹೋಟೆಲಿನ ಲಿಫ್ಟ್ ಬಳಿ ಕಂಡ ಒಂದು ಸಣ್ಣ ಫಲಕ – The lift is being fixed for the next day. During that time we regret that you will be unbearable. ಲಂಡನ್‌ನ ಬೀದಿಗಳಲ್ಲಿರುವ ಭಿಕ್ಷುಕರ ವರ್ತನೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಅವರು ತಮಗೆ ಭಿಕ್ಷೆ ಹಾಕಿ ಎಂದು
ಗೋಗರೆಯುವುದಿಲ್ಲ ಅಥವಾ ತಮ್ಮ ಕಷ್ಟಗಳನ್ನು ದಯನೀಯವಾಗಿ ನಿವೇದಿಸಿಕೊಳ್ಳುವುದಿಲ್ಲ.

ಅದರ ಬದಲು ತಮ್ಮ ಪಾಡಿಗೆ ತಾವು ಗೋಡೆಗೊರಗಿ ಕುಳಿತುಕೊಂಡಿರುತ್ತಾರೆ. ತಾವು ಹೇಳಬೇಕಾದುದನ್ನು ಬೋರ್ಡು ಅಥವಾ ಫಲಕಗಳಲ್ಲಿ ಬರೆದಿರುತ್ತಾರೆ. ಅದನ್ನು ಓದಿದವರ ಮನ ಕಲಕಿದರೆ, ಹಣ ಹಾಕಿ ಹೋಗುತ್ತಾರೆ. ಅಲ್ಲಿನ ಭಿಕ್ಷುಕನೊಬ್ಬ ಬರೆದ ಈ ಫಲಕವನ್ನು ನೋಡಿ ಆತನ ಸೃಜನಶೀಲ ಮನಸ್ಸಿಗೆ ಒಂದು ಸಣ್ಣ ಸಲಾಂ ಹಾಕಿದೆ. ಆತ ಬರೆದಿದ್ದ – The lift is being fixed for the next day. During that time we regret that you will be unbearable.

ಲಂಡನ್‌ನಲ್ಲಿ ಓಡಾಡುವಾಗ, ಸೂಟ್‌ಕೇಸ್ ಅಂಗಡಿಯ ಮುಂದೆ ಕಾಣಿಸಿದ ಫಲಕ ನೋಡಿ, ಅದನ್ನು ಬರೆದವನ ಬಗ್ಗೆ
ಮನದ ಸಣ್ಣ ಮೆಚ್ಚುಗೆ ವ್ಯಕ್ತಪಡಿಸಿದೆ. ಆ ಅಂಗಡಿಯ ಮುಂದೆ ಕಂಡ ಬರಹ – Overpack. That’s why suitcases have wheels now.

Read E-Paper click here