Thursday, 19th September 2024

ಮೌನವಾಗಿರಲು ಬೇಕು ಭಾರಿ ಜಾಣ್ಮೆೆ ಮತ್ತು ತಾಳ್ಮೆೆ

ಡಾ.ಕೆ.ಪಿ. ಪುತ್ತೂರಾಯ

ಮನುಷ್ಯನ ನಾಲಿಗೆಗೆ ಎರಡು ಚಪಲಗಳು – ಒಂದು ತಿನ್ನುವ ಚಪಲ; ಇನ್ನೊೊಂದು ಮಾತನಾಡುವ ಚಪಲ. ಈ ಎರಡೂ ಚಪಲಗಳನ್ನು ಇತಿಮಿತಿ ಇಲ್ಲದೆ, ಬೆಳೆಯ ಬಿಟ್ಟರೆ, ಅಪಾಯ ತಪ್ಪಿದ್ದಲ್ಲ. ಆದುದರಿಂದಲೇ ಊಟ ಬಲ್ಲವನಿಗೆ ರೋಗವಿಲ್ಲ
ಮಾತು ಬಲ್ಲವಗೆ ಜಗಳವಿಲ್ಲ ಎಂಬ ಗಾದೆ ಸರ್ವಕಾಲಿಕ ಸತ್ಯವಾಯಿತು. ಈ ಎರಡೂ ಚಪಲಗಳಿಗೂ ಆಗಾಗ ನಿರ್ಬಂಧ ಹೇರ ಬೇಕಾದುದು ಅತ್ಯಾವಶ್ಯಕ.

ತಿನ್ನುವ ಚಪಲವನ್ನು ಉಪವಾಸ ವ್ರತದಿಂದಲೂ ಮಾತನಾಡುವ ಚಪಲವನ್ನು ಮೌನವಾಗಿರೋದರಿಂದಲೂ ತಡೆಹಿಡಿಯ ಬಹುದು. ಆದುದರಿಂದಲೇ ಮಾತು ಬೆಳ್ಳಿ, ಮೌನ ಬಂಗಾರವೆಂಬ ಮಾತು ಪ್ರಚಲಿತವಾಯಿತು. (ಆದರೆ ಕೆಲವು ಹೆಂಗಸರು ಮಾತ್ರ ಬೆಳ್ಳಿಗೆ ಮೌನ; ಬಂಗಾರದ ವಿಚಾರ ಬಂದಾಗ ಅವರದು ಮಾತೇ ಮಾತು!) “ A Seed grows with no soured, but a tree falls with huge noise, indicating, destruction has noise, while creation is quite ಎಂಬ ಮಾತಿನಂತೆ ಒಂದು ಬೀಜ ಮೊಳಕೆ ಯೊಗೆವಾಗ ಸದ್ದಿಲ್ಲ.

ಆದರೆ ಮರ ಧರೆಗುರುಳಿದಾಗ ಮಾತ್ರ ಭಾರೀ ಸದ್ದು. ಅಂದರೆ ನಾಶದ ಕಾಲದಲ್ಲಿ ಸದ್ದು. ಸೃಷ್ಟಿಯ ಕಾಲದಲ್ಲಿ ಮೌನ. ಇದು ಮೌನದ ಶಕ್ತಿ ಸಾಮರ್ಥ್ಯ. ಜೀವನದಲ್ಲಿ, ಆಗೊಮ್ಮೆ ಈಗೊಮ್ಮೆ ಮೌನಿಗಳಾಗಬೇಕಾದ ಅವಶ್ಯಕತೆಯನ್ನು ಡಿ.ವಿ.ಜಿಯವರು
ಹೀಗೆ ಸುಂದರವಾಗಿ ತಿಳಿಹೇಳಿದ್ದಾರೆ. ಎರಡು ಕೋಣೆಗಳ ನೀಂ ಮಾಡು ಮನದಾಲಯದಿ, ಹೊರಕೋಣೆಯಲಿ ಲೋಗರಾಟ ಗಳನಾಡು ರುಸೊಬ್ಬನೆ ಮೌನದೊಳ ಮನೆಯ ಶಾಂತಿಯಲಿ, ವರಯೋಗ ಸೂತ್ರದು ಮಂಕುತಿಮ್ಮ ಹೀಗೆ ಅನೇಕ ಸಂದರ್ಭ ಸನ್ನಿವೇಶಗಳಲ್ಲಿ ನಾವು ಮೌನವಾಗಿರಬೇಕಾದುದು ಅತ್ಯಂತ ಉಚಿತ ಹಾಗೂ ಅಪೇಕ್ಷಣೀಯ.

ಅಂದ ಮೇಲೆ ಯಾವ ಯಾವ ಸಂದರ್ಭಗಳಲ್ಲಿ ನಾವು ಮೌನವಾಗಿರಬೇಕೆಂಬುದರ ಬಗ್ಗೆೆ ಒಂದು ವಿಶ್ಲೇಷಣೆ.

*ನಿಯಂತ್ರಿಸಿ ಕೊಳ್ಳಲಾರದಷ್ಟು ಕೋಪ – ತಾಪ, ಕ್ರೋಧ, ಸಿಟ್ಟುಗಳಿಗೆ ಒಳಗಾದಾಗ ನಾವು ಮೌನವಾಗಿರಬೇಕು. ಕಾರಣ ಈ ಮನೋಸ್ಥಿತಿಯಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು, ಆಡುವ ಮಾತುಗಳು, ಗೈಯ್ಯುವ ಕೃತ್ಯಗಳು ಅಪಾಯಕಾರಿ ಯಾಗಬಲ್ಲವು ಹಾಗೂ ಮುಂದೆ ನಿರಂತರವಾಗಿ ಪರಿತಪಿಸಬೇಕಾದ ಅಚಾತುರ್ಯ, ಅನಾಹುತಗಳಿಗೆ ಕಾರಣವಾಗಬಲ್ಲುದು “Anger is a condition when tongue works faster than the mind” ಎನ್ನಲಾಗಿದೆ. ಇಂತಹ ಸ್ಥಿತಿಗೆ ಕಡಿವಾಣ ಹಾಕಲು ಮೌನ ವೊಂದೇ ಸಹಕಾರಿ. ಈ ಕ್ಷಣದಲ್ಲಿನ ಮೌನ, ವಿವೇಕ, ವಿವೇಚನೆಗಳಿಗೆ ಸಮಯಾವಕಾಶವನ್ನು ಒದಗಿಸಿಕೊಡುತ್ತದೆ. ಮಾತು ಖಡ್ಗವಾದಾಗ, ಮೌನ ಗುರಾಣಿಯಂತೆ ಕೆಲಸ ಮಾಡುತ್ತದೆ. ಸಿಟ್ಟಿಗೆದ್ದವರೆಲ್ಲ; ಸಿಟ್ಟನ್ನು ಗೆದ್ದವರು ನಾವಾಗಬೇಕಾದರೆ, ಮೌನ ವೊಂದೇ ಸಹಕಾರಿ.

*ನಮ್ಮಲ್ಲಿ ನಿಜಾಂಶಗಳು ಇಲ್ಲದ ಹೊತ್ತಿನಲ್ಲೂ ನಾವು ಮೌನಿಗಳಾಗಿರಬೇಕು. ಆಧಾರವಿಲ್ಲದ ಅನಧಿಕೃತವಲ್ಲದ, ಮಾಹಿತಿ ಗಳನ್ನು ಯಾರೂ ಒಪ್ಪಿಕೊಳ್ಳೋದಿಲ್ಲ ಹಾಗೂ ಮೆಚ್ಚಿಕೊಳ್ಳೋದಿಲ್ಲ. “Wise people talk, because they have something to say; Fools also talk as they too wants to say something”  ಎಂಬಂತೆ ತಾನು ಏನನ್ನಾದರೂ ಮಾತನಾಡಿಬಿಡಬೇಕು ಎಂಬ  ಚಪಲಕ್ಕೆೆ ತುತ್ತಾಗಿ ಮಾತನಾಡಬಾರದು.

*ಸತ್ಯಾಾಂಶಗಳನ್ನು ಪರಿಶೀಲನೆ ಮಾಡದ ಸಂಧರ್ಭಗಳಲ್ಲೂ ಮಾತನಾಡಬಾರದು, ಪರಾಮರ್ಶಿಸದೆ ಆಡಿದ ಮಾತುಗಳು ಅಪೂರ್ಣ ಹಾಗೂ ಅನಧಿಕೃತ.

*ನಮ್ಮ ಮಾತುಗಳಿಂದ ಯಾರಿಗಾದರೂ ನೋವಾಗುವಂತಿದ್ದರೆ ಮೌನವಾಗಿರೋದೇ ಲೇಸು. ಇದು ಒಂದು ಸಭ್ಯತೆ ಹಾಗೂ ಸೌಜನ್ಯತೆಯೂ ಹೌದು. ಮುಳ್ಳು ಚುಚ್ಚಿದರೆ ಕಿತ್ತು ತೆಗೀಬಹುದು; ಮನ ಚುಚ್ಚಿದರೆ ಏನು ಮಾಡಬಹುದು? ಶರೀರದ ಮೇಲಾದ ಗಾಯ ಬೇಗ ಗುಣವಾಗುತ್ತದೆ, ಮನಸ್ಸಿನ ಮೇಲಾದ ಗಾಯ ಬೇಗ ಒಣಗದು.

*ಇತರರ ಮೇಲೆ, ಅವರಿಗೆ ನೋವಾಗುವಂಥ ಹಾಸ್ಯ ಚಟಾಕಿ ಹಾರಿಸುವ ಪ್ರಚೋದನೆ ಬಂದಾಗಲೂ ಮೌನವಾಗಿರಬೇಕು! ಹಾಗೆ ಮಾಡಿದರೆ ಅದು ಯಾರೂ ಕ್ಷಮಿಸಲಾರದ ಅಪಹಾಸ್ಯವೆಂದೆನಿಸಿಕೊಳ್ಳುತ್ತದೆ. ಅಪಹಾಸ್ಯ ಆರೋಗ್ಯಕರ ಹಾಸ್ಯವಲ್ಲ. ಇದು ಹಾಸ್ಯಕ್ಕೆೆ ಒಳಗಾದವರ ಮನಸ್ಸಿನಲ್ಲಿ ದ್ವೇಷವನ್ನು ಕ್ರೋಧವನ್ನು ಹುಟ್ಟುಹಾಕುತ್ತದೆ. ಮಹಾಭಾರತದಲ್ಲಿ ದ್ರೌಪದಿ ಮಾಡಿದ ಅಪಹಾಸ್ಯ ಕೌರವನ ಮನಸ್ಸಿನಲ್ಲಿ ಪ್ರತೀಕಾರದ ಜ್ವಾಲೆಗೆ ಕಾರಣವಾಯಿತು.

*ನಾವು ಇತರರನ್ನು ಕೇಳಿಸಿಕೊಳ್ಳಬೇಕಾದ ಸಂದರ್ಭದಲ್ಲೂ ಮೌನವಾಗಿರಬೇಕು. ಇದು ಕೂಡಾ ಒಂದು ಶಿಷ್ಟಾಚಾರ. ಕೆಲವ ರಿರುತ್ತಾರೆ; ತಮ್ಮ ಬಗ್ಗೆೆ ಮಾತ್ರ ಹೇಳುತ್ತಿರುತ್ತಾರೆ. ಇತರರನ್ನೂ ಕೇಳಿಸಿಕೊಳ್ಳ ಬೇಕೆನ್ನುವ ವ್ಯವಧಾನ ಅವರಿಗಿರೋದಿಲ್ಲ. ಇದು ಉತ್ತಮ ಸಂವಹನವೆನಿಸಲಾರದು. ಬೇರೆಯವರು ತಮ್ಮನ್ನು ಕೇಳಿಸಿಕೊಳ್ಳಬೇಕೆಂದು ಬಯಸುವವರು, ತಾವೂ ಕೂಡಾ
ಇತರರನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಕೇಳೋದು ಕಡಿಮೆಯಾಗಬಾರದು; ಹೇಳೋದು ಜಾಸ್ತಿಯಾಗಬಾರದು.
ಹೀಗಾಗಲು ಮೌನವೊಂದೇ ಸಹಕಾರಿ.

ನಾವಾಡಿದ ಮಾತುಗಳಿಂದ, ಮುಂದೆ ನಮಗೇ ನಾಚಿಕೆ ಮುಜುಗರಪಟ್ಟುಕೊಳ್ಳುವಂತಾದರೆ, ಅಂಥ ಸಂದರ್ಭಗಳಲ್ಲೂ ಮೌನ ವಾಗಿರಬೇಕು. ಕಾರಣ, ನಾವು ಆಡದ ಮಾತು ನಮ್ಮ ಸೇವಕ, ಆಡಿದ ಮಾತು ನಮ್ಮ ಮೂಲಕ ಕಾಲು ಎಡವಿದರೆ ಆಗುವ ಅಪಾಯಕ್ಕಿಿಂತ, ನಾಲಿಗೆ ಎಡವಿದರೆ ಆಗುವ ಅಪಾಯ ದೊಡ್ಡದು.

*ನಾವಾಡುವ ಮಾತುಗಳು ತಪ್ಪು ಮಾಹಿತಿ! ಸಂದೇಶಗಳನ್ನು ರವಾನೆ ಮಾಡುವಂತಿದ್ದರೂ, ಮೌನವಾಗಿರಬೇಕು. ಕಾರಣ, ಒಂದು ಕಿಡಿ ಕಾಡನ್ನೇ ಸುಡಬಲ್ಲುದು: ಆದರೆ ಒಂದು ಕೆಟ್ಟ ನುಡಿ, ಕಾಡನ್ನೂ ನಾಡನ್ನೂ ಎರಡನ್ನೂ ಸುಡಬಲ್ಲುದು.

*ನಮಗೆ ಅನ್ವಯವಲ್ಲದ, ಸಂಬಂಧವಿಲ್ಲದ ವಿಚಾರಗಳು ಬಂದಾಗಲೂ, ಚರ್ಚೆಯಾದಾಗಲೂ, ಸುಮ್ಮನಿರಬೇಕು. ಇಲ್ಲಿ ಮಾತನಾಡಿದರೆ ಅದು ‘ಅಧಿಕ ಪ್ರಸಂಗಿತನ’ ಹಸ್ತಕ್ಷೇಪವೆಂದೆನಿಸಿಕೊಳ್ಳುತ್ತದೆ. ಇದನ್ನು ಯಾರು ಮೆಟ್ಟಿಕೊಳ್ಳದೇ, ಅಂತಹವರ ತಲೆಗೆ ‘ತಲೆಹರಟೆ’ ಎಂಬ ಪಟ್ಟಿಯನ್ನು ಕಟ್ಟುತ್ತಾರೆ.

* ಒಂದು ದೊಡ್ಡ ಸುಳ್ಳನ್ನೇ ಹೇಳಬೇಕಾದ ಪ್ರಚೋದನೆ ಪ್ರಲೋಭಗಳುಂಟಾದಾಗಲೂ ಮೌನವಾಗಿರಬೇಕು. ಎಷ್ಟಾದರೂ ಸತ್ಯವನ್ನೇ ನುಡಿಯುವ, ಧರ್ಮದಂತೆ ನಡೆಯುವ ಪರಂಪರೆಗೆ ಸೇರಿದವರು ನಾವಲ್ಲವೇ!

*ನಮ್ಮ ಮಾತುಗಳಿಂದ, ಯಾರದಾದರೂ ಘನತೆ – ಗೌರವ ಪ್ರತಿಷ್ಠೆೆಗಳಿಗೆ ಹಾನಿಯುಂಟಾಗುವ ಸಂಭವವಿದೆ ಎಂದಾದರೆ, ಆಗಲೂ ಮೌನವಾಗಿರಬೇಕು. ಈ ಸತ್ಯವನ್ನರಿತೇ ಹಿರಿಯರು ಹೇಳಿದರು. ಯಾರ ಬಗ್ಗೆೆಯಾದರೂ ಒಳ್ಳೆಯದು ಮಾತನಾಡುವ ಅವಕಾಶ ಬಂದಾಗ, ನಾಲ್ಕು ಮಾತು ಜಾಸ್ತಿ ಆಡಿಬಿಡು, ಆದರೆ ಕೆಟ್ಟದ್ದು ಮಾತನಾಡಲೇ ಬೇಕಾದ ಅನಿವಾರ್ಯತೆ ಬಂದಾಗ ನಾಲ್ಕು ಮಾತುಕಡಿಮೆ ಆಡಿಬಿಡು, ಇಲ್ಲವೇ ಸುಮ್ಮನಿದ್ದು ಬಿಡು’

*ನಮ್ಮ ಮಾತುಗಳು, ಗೆಳೆತನವನ್ನು ನಾಶಮಾಡುವಂತಿದ್ದರೂ ಹಾಗೂ ಖಡಾಖಂಡಿತವಾಗಿ ಮಾತನಾಡುವ ಸಂದರ್ಭ ಬಂದಾಗಲೂ, ಮೌನವಾಗಿರೋದೇ ಕ್ಷೇಮ.

*ಕಿರುಚಿ, ಕೂಗಾಡಿ ಹೇಳದೆ ಸಾಧ್ಯವೇ ಇಲ್ಲ ಎಂಬ ಸನ್ನಿವೇಶ ಉಂಟಾದಾಗಲೂ, ಮೌನವಾಗಿರೋದೇ ಸಭ್ಯತೆ. ಮೌನವೇ ಮೂರ್ಖರಿಗೆ ನೀಡಬಹುದಾದ ಒಳ್ಳೆಯ ಉತ್ತರ. ಚಿಲ್ಲರೆ ನಾಣ್ಯಗಳೇ ಹೆಚ್ಚು ಸದ್ದು ಮಾಡುತ್ತವೆ ಹೊರತು, ಬೆಲೆ ಬಾಳುವ ನೋಟುಗಳಲ್ಲ! ತುಳುಕುವುದೇ ತುಂಬಿದ ಕೊಡ; ತುಂಬದ ಕೊಡಗಳಲ್ಲ. !

*ನಮ್ಮ ಮಾತುಗಳು, ಪರೋಕ್ಷವಾಗಿ, ನಮ್ಮ ಹೆತ್ತವರ ಮತ್ತು ಮಿತ್ರರ ಪರಿಚಯವನ್ನು ಕೆಟ್ಟದ್ದಾಗಿ ಬಿಂಬಿಸುವಂತಿದ್ದರೆ, ಅಂತಹ ವೇಳೆ ಮಾತನಾಡಲೇಬಾರದು. ಜನ ನಮ್ಮನ್ನು ಮೊದಲು ಅಳೆಯುವುದು ನಾವು ಉಡುವ ಬಟ್ಟೆೆಗಳಿಂದ ಮತ್ತು ನಾವಾಡುವ ಮಾತುಗಳಿಂದ.

*ನಾವಾಡಿಬಿಟ್ಟ ಮಾತುಗಳನ್ನು ಮುಂದೆ ನಾವೇ ನುಂಗಿ ಬಿಡಬೇಕಾದ, ಇಲ್ಲವೇ ವಾಪಸು ಪಡೆದುಕೊಳ್ಳಬೇಕಾದ ಸನ್ನಿವೇಶ ಉಂಟಾಗುವುದಕ್ಕೆೆ ಮೊದಲೇ ಸುಮ್ಮನಾಗಿರುವ ಒಳಿತು. ಕಾರಣ ಆಡಿದ ಮಾತು, ಒಡೆದ ಕನ್ನಡಿ, ಹಾಗೂ ಕಳೆದುಹೋದ ಸಮಯ ಮರಳಿ ಬಾರದು.

*ನೀವೂ ಈ ಮೊದಲೇ, ಅದೇ ಮಾತುಗಳನ್ನು ಬಹಳ ಸಲ ಹೇಳಿದ್ದಲ್ಲಿ, ಮತ್ತೆೆ ಅದನ್ನೇ ಪುನರುಚ್ಚರಿಸದೆ, ಮೌನವಾಗಿರಬೇಕು.

*ದುಷ್ಟರನ್ನು ದುರುಳರನ್ನು, ಭ್ರಷ್ಟರನ್ನು ಹೊಗಳಲೇ ಬೇಕಾದ ಒತ್ತಾಯ, ಒತ್ತಡ ಬಂದಾಗಲೂ, ಮೌನಿಯಾಗಿರಬೇಕು. ಹಾಗೇನಾದರೂ ಹೊಗಳಿದರೆ, ಅದು ಸುಳ್ಳು ಹೇಳಿದಂತೆ ಹಾಗೂ ನಮಗೆ ನಾವೇ ಮಾಡಿಕೊಂಡ ಆತ್ಮದ್ರೋಹವೆಂದೆನಿಸುತ್ತದೆ.

* ಮಾತನಾಡುವ ಸಮಯವಲ್ಲದ, ಕೆಲಸಮಾಡುವ ಸಮಯದಲ್ಲೂ ಮಾತುಗಳು ಸಲ್ಲ.

*ಎಲ್ಲಿ ನಾವಾಡಿದ ಮಾತುಗಳಿಗೆ ಬೆಲೆ ಇಲ್ಲವೋ ಅಲ್ಲಿ ಮೌನವೇ ಲೇಸು.

*ತರಲೆ ಮಾತುಗಳಿಗೆ, ತಲೆ ತಿನ್ನುವ ಮಾತುಗಳಿಗೆ, ಮೌನವೇ ತಕ್ಕುದಾದ ಉತ್ತರ.

*ದ್ವೇಷಗಳನ್ನು ನಿಭಾಯಿಸುವಲ್ಲಿ ನಗು ಸಾಧನವಾದರೆ, ವಾಗ್ವಾದಗಳನ್ನು ನಿಭಾಯಿಸುವಲ್ಲಿ ಮೌನ ಸಹಕಾರಿ.

*ನಮ್ಮ ಮಾತುಗಳಿಂದ ನಮಗಾಗಲೀ, ಇತರರಿಗಾಗಲೀ, ಏನೂ ಪ್ರಯೋಜನವಿಲ್ಲವೆಂದಾದರೆ,ಮಾತನಾಡಲೇಬಾರದು.
ನೆನಪಿರಲಿ, ಯಾರಾದರೂ ಕಣ್ಣೀರು ಸುರಿಸುತ್ತಿಲ್ಲವೆಂದ ಮಾತ್ರಕ್ಕೆೆ ಅವರ ಮನಸ್ಸಿನೊಳಗೆ ದುಃಖಗಳೇ ಇಲ್ಲವೆಂಬ ಅರ್ಥವಲ್ಲ. ಅಂತೆಯೇ ಯಾರಾದರೂ, ಮೌನವಾಗಿದ್ದಾರೆ ಎಂದ ಮಾತ್ರಕ್ಕೆೆ ಅವರಿಗೆ ಮಾತನಾಡಲೇ ಬರುತ್ತಿಲ್ಲವೆಂಬ ಅರ್ಥವಲ್ಲ. ಮೌನವಾಗಿರಲು ಬೇಕು ಭಾರೀ ಜಾಣ್ಮೆೆ ಮತ್ತು ತಾಳ್ಮೆೆ.