Friday, 22nd November 2024

ಪ್ರಧಾನಿ ಕನಸು ನನಸು ಮಾಡಲು ಯುವ ಪೀಳಿಗೆ ಮುಂದಾಗಿ

ಖಾದಿ ಉತ್ಸವಕ್ಕೆ ಚಾಲನೆ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಯುವಕರಿಗೆ ಸಲಹೆ

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಮೂಲಕ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನೇ ಬಳಸುವ ಮೂಲಕ ದೇಶವನ್ನು ಆರ್ಥಿಕವಾಗಿ ಸದೃಢ ಮಾಡಬೇಕೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.

ನಗರದ ಒಕ್ಕಲಿಗರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಖಾದಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಸ್ವರಾಜ್ಯದ ಕನಸನ್ನು ಗಾಂಧೀಜಿಯವರು ಕಂಡಿದ್ದರು. ನಮ್ಮದೇ ಹತ್ತಿಯಿಂದ ತಯಾರಿಸಿದ ವಸ್ತುಗಳನ್ನು ನಮಗೇ ಮಾರಿ ಬ್ರಿಟೀಷರು ಆರ್ಥಿಕ ವಾಗಿ ಸದೃಢರಾಗುತ್ತಿದ್ದರು. ಇದನ್ನು ಅರ್ಥ ಮಾಡಿಕೊಂಡ ಗಾಂಧೀಜಿಯವರು ಸ್ವದೇಶಿ ವಸ್ತ್ರ ಚಳವಳಿ ಮೂಲಕ ದೇಶದ ಜನರಲ್ಲಿ ಅರಿವು ಮೂಡಿಸಿದರು ಎಂದರು.

ಅಹಿ೦ಸೆ ಮೂಲಕವೇ ಸ್ವಾತಂತ್ರೃ ಪಡೆಯಬೇಕು ಎಂಬುದು ಗಾಂಧೀಜಿಯವರ ಕನಸಾ ಗಿತ್ತು. ಯಾವುದೇ ರಾಷ್ಟ್ರಗಳ ಸ್ವಾತಂತ್ರೃ ವೂ ಕ್ರಾಂತಿಯಿ೦ದಲೇ ಆಗಿದೆ. ಆದರೆ ಭಾರತ ದಲ್ಲಿ ಅಹಿಂಸೆಯ ಚಳವಳಿ ಮಾಡಿದವರು ಗಾಂಧಿ. ನಾವೇ ನಮ್ಮ ಉಡುಪನ್ನು ತಯಾರಿಸ ಬೇಕು ಎಂದು ಪ್ರತಿಪಾದಿಸಿದವರು ಗಾಂಧಿ, ಸಂಪತ್ತಿನ ಸೋರಿಕೆಯನ್ನು ನಿಲ್ಲಿಸುವ ಪ್ರಯತ್ನ ಮಾಡಿದವರು ಬಾಪೂಜಿ ಎಂದು ಸಚಿವರು ಬಣ್ಣಿಸಿದರು.

ಖಾದಿ ಸರಳತೆಯ ಸಂಕೇತ: ಖಾದಿ ಸರಳತೆಯನ್ನು ಬಿಂಬಿಸುತ್ತದೆ, ದೇಸೀತನವನ್ನು ಖಾದಿ ಎತ್ತಿ ತೋರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಮೊದಲ ಕಾರ್ಯಕ್ರಮದಲ್ಲಿ ಖಾದಿ ವಿಷಯ ಪ್ರಸ್ತಾಪಿಸಿದ್ದರು. ಪ್ರಧಾನಿಯವರೂ ಕೂಡ ಖಾದಿಯನ್ನೇ ಧರಿಸುತ್ತಾರೆ. ಬಾಲಗಂಗಾಧರನಾಥ ತಿಲಕ್ ಅವರು ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಎಂದಿದ್ದರು. ಖಾದಿಯ ಗ್ರಾಮ ಸ್ವರಾಜ್ಯದ ಅಲೋಚನೆಯೂ ಕೂಡ ಸ್ವಾತಂತ್ರö್ಯ ಬರಲು ಒಂದು ಕಾರಣವಾಗಿದೆ ಎಂದು ಹೇಳಿದರು.

ಖಾದಿ ಧರಿಸುವ ಪ್ರಾಮಾಣಕ ಪ್ರಯತ್ನವನ್ನು ಎಲ್ಲರೂ ಮಾಡಬೇಕು, ಇದರಿಂದ ರೈತರಿಗೆ, ನೇಕಾರರಿಗೆ ಅನುಕೂಲವಾಗಲಿದೆ. ಎಲ್ಲವೂ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಆಗಬೇಕು ಎಂಬುದು ಪ್ರಧಾನಿಯವರ ಕನಸು. ಇದನ್ನು ನನಸು ಮಾಡಲು ಎಲ್ಲರೂ ಆದ್ಯತೆ ನೀಡಬೇಕು, ಉತ್ಸವದಲ್ಲಿ ಗುಣಮಟ್ಟದ ಸೀರೆಗಳನ್ನು ತಂದಿದ್ದಾರೆ. ನಮ್ಮದೇ ಜಿಲ್ಲೆಯ ತಾಲೂಕಿನ ಗುಡಿ ಕೈಗಾರಿಕೆಗಳಲ್ಲಿ ತಯಾರಿಸಿದ ವಸ್ತುಗಳು ಬಂದಿವೆ. ಇದಕ್ಕೆ ವಿಶೇಷ ಒತ್ತು ನೀಡಿ ಸಚಿವರು, ಅಧ್ಯಕ್ಷರು ಮುತುವರ್ಜಿ ವಹಿಸು ತ್ತಿದ್ದಾರೆ ಎಂದರು.

ಬಾಗಲಕೋಟೆ ಮತ್ತು ಹುಬ್ಬಳ್ಳಿಯ ಖಾದಿ ಕೇಂದ್ರಗಳ ರಕ್ಷಣೆಗೆ ಸರ್ಕಾರದಿಂದ ಅಗತ್ಯ ಕ್ರಮ ವಹಿಸಲಾಗುವುದು. ರಾಷ್ಟ್ರಧ್ವಜ ತಯಾರಿಸುವ ಏಕೈಕ ಕೇಂದ್ರ ತುಳಸಿಗೆರೆ ಖಾದಿ ಕೇಂದ್ರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋವಿಡ್ ಸಂದರ್ಭ ದಲ್ಲಿ ನೇಕಾರರಿಗಾಗಿಯೇ ವಿಶೇಷ ಪ್ಯಾಕೇಜ್ ನೀಡಿದ್ದರು. ನೇಕಾರರ ಸಮ್ಮಾನ್ ಯೋಜನೆ ಮೂಲಕ ೫೪,೭೮೯ ಫಲಾನುಭವಿ ಗಳಿಗೆ ತಲಾ ೨ ಸಾವಿರದಂತೆ ಪ್ರತಿ ವರ್ಷ ೧೦ ಕೋಟಿ ಸಹಾಯ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಮೋದಿಯವರು ಪ್ರಧಾನಿಯಾದ ನಂತರ ಖಾದಿ ಮಂಡಳಿ ಸಾಕಷ್ಟು ಸುಧಾರಣೆಯಾಗಿದೆ, ೨೦೧೪ ಮತ್ತು ೨೦೧೫ರಲ್ಲಿ ಶೇ.೧೭೦ ರಷ್ಟಿದ್ದ ಖಾದಿ ಮಂಡಳಿ ವಹಿವಾಟು ಇಂದು ಶೇ.೨೪೮ ಆಗಿದೆ. ಅಂದರೆ ವಹಿವಾಟಿನಲ್ಲಿ ದ್ವಿಗುಣವಾಗಿದೆ. ಜೊತೆಗೆ ೩,೫೨೮ ಕೋಟಿ ಕೋಟಿಯನ್ನು ಮಂಡಳಿ ಗಳಿಸಿದೆ ಎಂದು ಸಚಿವರು ಅಂಕಿ ಅಂಶ ಸಮೇತ ವಿವರಿಸಿದರು.

ನೀವೇ ಉದ್ಯೋಗಧಾತರಾಗಿ: ಯುವಕರು ಉದ್ಯೋಗಕ್ಕಾಗಿ ಹುಡುಕುವುದನ್ನು ಬಿಟ್ಟು ನೀವೇ ಉದ್ಯೋಗಧಾತರಾಗಿ ಎಂದು ಸಚಿವರು ಕರೆ ನೀಡಿದರು. ದೇಶದಲ್ಲಿ ಗುಡಿ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಸಬ್ಸಿಡಿ ನೀಡಲಾಗುತ್ತಿದೆ. ಈ ಸಬ್ಸಿಡಿ ಲಕ್ಷಾಂತರ ರೂಪಾಯಿಗಳ ವರೆಗೂ ಇದ್ದು, ಪ್ರಧಾನಿ ಉದ್ಯಮ ಸೃಜನ ಶೀಲತೆ ಬಗ್ಗೆ ವಿಶೇಷ ಕಾರ್ಯಕ್ರಮ ಇದೆ. ಸಂಬ0ಧಿಸಿದವರಿ0ದ ಸೂಕ್ತ ಮಾರ್ಗದರ್ಶನ ಪಡೆದು ಯುವಕರು ಮುಂದೆ ಸಾಗಬೇಕು ಎಂದು ಸಚಿವರು ಕರೆ ನೀಡಿದರು.

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಈಗಾಗಲೇ ಖಾದಿ ಉತ್ಸವ ನಡೆಸಲಾಗಿದೆ. ಚಿಕ್ಕಬಳ್ಳಾಪುರ ಐದನೇ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ೯ ದಿನಗಳ ಕಾಲ ನಡೆಯಲಿರುವ ಖಾದಿ ಉತ್ಸವವನ್ನು ನಾಗರಿಕರು ಸದುಪಯೋಗಪಡಿಸಿಕೊಂಡು ಖಾದಿ ಉದ್ಯಮದ ಅಭಿವೃದ್ಧಿಗೆ ತಮ್ಮ ಪಾಲಿನ ಸಹಕಾರ ನೀಡಬೇಕೆಂದು ಕೋರಿದರು.

ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ ಗುಡಿಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಮೂಲಕ ರೈತರಿಗೆ ನೆರವಾಗುವ ಕೆಲಸ ಮಾಡಬೇಕಿದೆ. ರೈತರು ಬೆನ್ನೆಲುಬು ಎಂದರೆ ಸಾಲದು ಅವರಿಗೆ ಬೇಕಾದ ನೆರವು ಮತ್ತು ಅವಕಾಶಗಳನ್ನು ಸಕಾಲದಲ್ಲಿ ಒದಗಿಸುವ ಕೆಲಸ ಮಾಡಬೇಕು. ಜನತೆಯೂ ಕೂಡ ರೈತರ ಉತ್ಪನ್ನಗಳನ್ನು ಖರೀದಿಸುವ ಮೂಲಕ ಆರ್ಥಿಕ ಚೈತನ್ಯ ನೀಡ ಬೇಕು.

ರಾಜ್ಯದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗವನ್ನು ನಂಬಿ ಸಾವಿರಾರು ಕುಟುಂಬಗಳು ಬದುಕು ಕಟ್ಟೊಕೊಂಡಿವೆ. ಈ ವರ್ಗಕ್ಕೆ ಸರಕಾರದಿಂದ ಬರಬೇಕಾದ ಪ್ರೋತ್ಸಾಹ ಧನ ಕೊಡಿಸುವ ಕೆಲಸವನ್ನು ಮಾಡಲಾಗುವುದು. ಈ ಬಾರಿಯ ಚಳಿಗಾಲದ ಅಧಿವೇಶ ದಲ್ಲಿ ಇದಕ್ಕೆ ಒಂದು ಸ್ಪಷ್ಟತೆ ದೊರೆಯಲಿದೆ. ಆರ್ಥಿಕ ಇಲಾಖೆ ಕೇಳಿರುವ ಎಲ್ಲಾ ಮಾಹಿತಿಯನ್ನು ಒದಗಿಸಿ ಬಾಕಿ ಇರುವ ಹಣ ಬಿಡುಗಡೆಗೆ ಕ್ರಮವಹಿಸುವೆ ಎಂದು ಭರವಸೆ ನೀಡಿದರು. ಇದೇ ವೇಳೆ ಖಾದಿ ಉತ್ಸವದ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಉತ್ತಮ ವಹಿವಾಟು ನಡೆಸುವಂತೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಪಿ.ಎನ್. ಕೇಶವರೆಡ್ಡಿ, ಮರಳುಕುಂಟೆ ಕೃಷ್ಣಮೂರ್ತಿ, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಮುನಿರಾಜು, ನಿರ್ಮಲಾಪ್ರಭು, ರಾಮಸ್ವಾಮಿ, ರಾಜಣ್ಣ ಖಾದಿ ಮಂಡಳಿ ಸಿಇಒ ಬಸವ ರಾಜು, ಅಭಿವೃದ್ಧಿ ಅಧಿಕಾರಿ ಈ ರಾಜಣ್ಣ, ಜಿಲ್ಲಾ ಖಾದಿ ಮಂಡಳಿ ಅಧಿಕಾರಿ ರಾಜಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read E-Paper click here