Saturday, 23rd November 2024

ಸಾಲ ಮರುಪಾವತಿ ಮಾಡದ ರಿಕ್ಷಾ ಚಾಲಕನ ಪತ್ನಿಯ ಅತ್ಯಾಚಾರ

ರಾಜ್‌ಕೋಟ್: ಗುಜರಾತ್ ನ ರಾಜ್ ಕೋಟ್ ನಲ್ಲಿ ಸಾಲ ಮರುಪಾವತಿ ಮಾಡದ ಆಟೋ ರಿಕ್ಷಾ ಚಾಲಕನ ಪತ್ನಿಯ ಮೇಲೆ ಫೈನಾನ್ಷಿಯರ್ ಅತ್ಯಾಚಾರವೆಸಗಿದ್ದಾನೆ. ಅದರ ವಿಡಿಯೋ ಮಾಡಿ 37 ವರ್ಷದ ಅತ್ಯಾಚಾರ ಸಂತ್ರಸ್ತೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ದಾಳಿಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ಮೂವರ ವಿರುದ್ಧ ದೂರು ದಾಖಲಿಸಲು ಪೊಲೀ ಸರು ಸಂತ್ರಸ್ತೆ ಬಳಿ ಮನವಿ ಮಾಡಿದ್ದಾರೆ.

ಸಂತ್ರಸ್ತೆ ತನ್ನೊಂದಿಗೆ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದು, ‘ತನ್ನ ಪತಿ ಆಟೋ ರಿಕ್ಷಾ ಓಡಿಸುತ್ತಾನೆ. ಅವರು ಈ ವರ್ಷದ ಫೆಬ್ರವರಿಯಲ್ಲಿ ಅಜಿತ್ ಸಿಂಗ್ ಚಾವ್ಡಾ ಎಂಬ ಖಾಸಗಿ ಫೈನಾನ್ಷಿಯರ್ ಮತ್ತು ವ್ಯಾಪಾರ ಪಾಲುದಾರರಿಂದ 50,000 ರೂ ಸಾಲ ಪಡೆದಿದ್ದರು. ಸಾಲ ಸಕಾಲಕ್ಕೆ ಮರುಪಾವತಿಸಲು ಸಾಧ್ಯವಾಗದಿದ್ದಾಗ ದಿನಕ್ಕೆ 1,500 ರೂ.ಗಳನ್ನು ಬಡ್ಡಿಗೆ ನೀಡುವಂತೆ ಕೇಳಿ ದರು.

ತನ್ನ ಪತಿ ಬಡ್ಡಿಯನ್ನು ಪಾವತಿಸಲು ವಿಫಲವಾದಾಗ, ಚಾವ್ಡಾ ತನ್ನ ಮೇಲೆ ಅತ್ಯಾಚಾರ ವೆಸಗಿದ್ದಾನೆ ಮತ್ತು ಅದರ ಸಂಪೂರ್ಣ ವಿಡಿಯೋವನ್ನು ಸಹ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಸಂತ್ರಸ್ತೆಯ ಪ್ರಕಾರ, ರಾಜ್‌ಕೋಟ್ ತಾಲೂಕು ಪೊಲೀಸರು ಈ ಪ್ರಕರಣದಲ್ಲಿ ತನ್ನ ದೂರನ್ನು ದಾಖಲಿಸಲು ನಿರಾಕರಿಸಿದರು. ನಂತರ ಅವರು ನ್ಯಾಯಾಲಯವನ್ನು ಸಂಪರ್ಕಿಸಿದರು. ಇದಾದ ಬಳಿಕ ಅತ್ಯಾಚಾರದ ದೂರು ದಾಖಲಿಸಲು ಪೊಲೀಸರಿಗೆ ಸೂಚಿಸಲಾಯಿತು ಎನ್ನಲಾಗಿದೆ.

Read E-Paper click here