ಸರ್ವಧರ್ಮ ಸಮಭಾವ ಸಾರುತ್ತಿದೆ,ಪಿರಾನಿ ಪೀರ್ ಸರ್ಕಾರ್‌ದರ್ಗಾ
ಚಿಕ್ಕಬಳ್ಳಾಪುರ : ಸರ್ವಧರ್ಮ ಸಮಭಾವ ಸಾರುತ್ತಿರುವ ಪಿರಾನಿ ಪೀರ್ ಸರ್ಕಾರ್ ದರ್ಗಾದಲ್ಲಿ ಎರಡು ದಿನಗಳ ಕಾಲನಡೆದ ೪ನೇ ವರ್ಷದ ಗಂಧ ಮತ್ತು ಉರುಸ್ ಕಾರ್ಯಕ್ರಮದಲ್ಲಿ ಅಪಾರ ಜನಸಾಗರ ಭಾಗಿಯಾಗಿ ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರವಾದರು.
ನಗರದ ೨೧ನೇ ವಾರ್ಡ್ ಶಾಂತಿನಗರದಲ್ಲಿರುವ ಪಿರಾನಿ ಪೀರ್ ಸರ್ಕಾರ್ ದರ್ಗಾದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸರ್ವಧರ್ಮ ಸಮನ್ವಯತೆಯನ್ನು ಗುರಿಯಾಗಿಸಿಕೊಂಡು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿರುವ ದರ್ಗಾ ನಗರದ ಹಿಂದು ಮುಸ್ಲಿಂ ಜನಾಂಗದ ಶ್ರದ್ಧಾ ಕೇಂದ್ರವಾಗಿದೆ.
ಡಿಸೆ0ಬರ್ ೧೬ ಮತ್ತು ೧೭ ರಂದು ನಡೆದ ೪ನೇ ವರ್ಷದ ಗಂಧ ಮತ್ತು ಉರುಸ್ ಆಚರ ಣೆಯ ಜವಾಬ್ದಾರಿಯನ್ನು ಕೆಜಿಎನ್ ಸೆವೆನ್ ಸ್ಟಾರ್ ಬ್ರರ‍್ಸ್ ಹೊತ್ತಿದ್ದು, ಉರುಸ್‌ಗೆ ಕಳೆ ತುಂಬಲು ಬಾಂಬೆಯ ಹೆಸರಾಂತ ಬಾಂಬೆ ಹದೀಪ್ ನಾಝಾ ತಂಡ, ಬೆ0ಗಳೂರಿನ ಖಾದ್ರಿ ಬ್ರರ‍್ಸ್ ತಂಡಗಳ ಖವ್ವಾಲಿ ಜುಗಲ್‌ಬಂದಿ ಏರ್ಪಡಿಸಲಾಗಿತ್ತು. ಎರಡು ದಿನಗಳ ಗಂಧ ಮತ್ತು ಉರುಸ್‌ನಲ್ಲಿ ಸುಮಾರು ೫ ಸಾವಿರ ಮಂದಿ ಭಾಗವಹಿಸಿ ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದರು.
ಗಂಧ ಮತ್ತು ಉರುಸ್ ಕಾರ್ಯಕ್ರಮದ ಔಚಿತ್ಯದ ಸಂದೇಶ ನೀಡಿದ ಪಿರಾನಿ ಪೀರ್ ಸರ್ಕಾರ್ ದರ್ಗಾದ ಧರ್ಮಗುರು ಪೀರ್ ಮೊಹಮ್ಮದ್ ನೂರಾಲಿ ಷಾ ಖಾದ್ರಿ ಮಂದಿರ ಮಸೀದಿ ದರ್ಗಾಗಳು ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ ಬೆಸೆಯುವ ಬೆಸುಗೆಯ ಕೇಂದ್ರಗಳಾಗಿವೆ.ಭಕ್ತಿಗೆ ಧರ್ಮದ ಲೇಪನ ಹಚ್ಚುವುದು ತರವಲ್ಲ.
ನಮ್ಮ ದರ್ಗಾಗೆ ಹಿಂದು ಮುಸ್ಲಿಂ ಕ್ರಿಶ್ಚಿಯನ್ ಎನ್ನುವ ಬೇಧವಿಲ್ಲದೆ ಸರ್ವರೂ ಬಂದು ಹರಕೆ ಹೊತ್ತು ಪೂಜೆ ಸಲ್ಲಿಸಿ ಹೋಗು ತ್ತಿದ್ದಾರೆ. ಇಲ್ಲಿ ಜಾತಿ ಧರ್ಮ ಕುಲಗೋತ್ರಗಳ ಆಚರಣೆ ಇಲ್ಲವೇ ಇಲ್ಲ.ನಾವು ನಂಬಿರುವುದು ಭಗವಂತನನ್ನು ಮಾತ್ರ.ದೇವರ ಸೃಷ್ಟಿಯಲ್ಲಿ ಎಲ್ಲರೂ ಒಂದೇ ಆಗಿರುವಾಗ ತಾರತಮ್ಯ ಮಾಡಲು ನಮಗೆ ಹಕ್ಕಿಲ್ಲ.ಹೀಗಾಗಿ ಧರ್ಮ ಯಾವುದೇ ಆಗಿರಲಿ ನಂಬಿಕೆಯೇ ದೇವರು.ಇದಿಲ್ಲದಿದ್ದರೆ ಬರೀ ಕಲ್ಲು ಅಷ್ಟೇ.ಮಾನವರ ಶ್ರದ್ಧಾ ಭಕ್ತಿಯ ಮೇಲೆ ದೇವರು ಸತ್ಪಲ ದುಷ್ಪಲಗಳನ್ನು ಕರುಣಿಸುತ್ತಾನೆ ಎಂದರು.
೪ನೇ ವರ್ಷದ ಗಂಧ ಮತ್ತು ಉರುಸ್ ಆಚರಣೆ ಅಂಗವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿ ಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
Read E-Paper click here