ಚಿಕ್ಕಬಳ್ಳಾಪುರ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೪೪ರಲ್ಲಿರುವ ಕೀರ್ತಿ ಡಾಬಾ ಬಳಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣಕ್ಕೆ ಸಂಬ0ಧಿಸಿದ0ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ನಾಳ ಗ್ರಾಮದ ಗಂಗಾಧರ್ (೩೧), ಬೆಂಗಳೂರಿನ ಎಸ್‌ಹೆಚ್‌ಆರ್ ಲೇಔಟ್‌ನ ರತೀಶ್ ಕುಮಾರ್ (೨೭) ಮತ್ತು ಮುಳಬಾಗಿಲು ತಾಲ್ಲೂಕು ಹೆಬ್ಬಣಿ ಗ್ರಾಮದ ಅರುಣ್ ಕುಮಾರ್ (೨೯) ಬಂಧಿತರು. ಮತ್ತೊಬ್ಬ ಆರೋಪಿ ವಿಜಿ ತಲೆ ಮರೆಸಿಕೊಂಡಿದ್ದು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣದ ಹಿನ್ನೆಲೆ: ಬೆಂಗಳೂರುಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೀರ್ತಿ ಡಾಬಾ ಬಳಿ ಕಾರು ನಿಲ್ಲಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದ ಹೈದರಾಬಾದ್‌ನ ಶಂಕರ ದತ್ತ ಮತ್ತು ಮುರುಳಿ ಶರ್ಮ ಎಂಬುವವರನ್ನು ಆರೋಪಿಗಳು ಬೆದರಿಸಿ ಹಣ, ಚಿನ್ನಾ ಭರಣ ದೋಚಿದ್ದರು. ಈ ಬಗ್ಗೆ ನಂದಿ ಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳಿಂದ ೧.೫ ಲಕ್ಷ ಮೌಲ್ಯದ ಎರಡು ಚಿನ್ನದ ಸರಗಳು, ಮಾರುತಿ ಸ್ವಿಪ್ಟ್ ಕಾರು, ಎರಡು ಚಾಕುಗಳು ಮತ್ತು ಆರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಂಗಾಧರ್ ವಿರುದ್ಧ ಆಂಧ್ರಪ್ರದೇಶದ ಮದನಪಲ್ಲಿ, ಚಾಮರಾಜನಗರ, ಉಡುಪಿ, ದೊಡ್ಡಬಳ್ಳಾಪುರ, ಬಳ್ಳಾರಿ, ಚಿಕ್ಕಬಳ್ಳಾಪುರ, ಉಡುಪಿ, ಶಿವಮೊಗ್ಗ, ಬೆಂಗಳೂರಿನಲ್ಲಿ ಕಳ್ಳತನ ಸುಲಿಗೆಗೆ ಸಂಬ0ಧಿಸಿದ0ತೆ ೧೯ ಪ್ರಕರಣಗಳು ದಾಖಲಾಗಿವೆ. ಈತ ತಾನು ಪೊಲೀಸ್ ಮಾಹಿತಿದಾರ ಎಂದು ಹೇಳಿಕೊಂಡು ಕಳ್ಳತನ ಎಸಗುತ್ತಿದ್ದ.
ರತೀಶ್ ಕುಮಾರ್ ವಿರುದ್ಧ ಆಂಧ್ರಪ್ರದೇಶದ ಪುಂಗನೂರು, ಕೋಲಾರ, ಶ್ರೀರಂಗಪಟ್ಟಣ, ಮಂಡ್ಯದಲ್ಲಿ ಡಕಾಯಿತಿ ಮತ್ತು ಸುಲಿಗೆಗೆ ಸಂಬ0ಧಿಸಿದ0ತೆ ಐದು ಪ್ರಕರಣಗಳು ದಾಖಲಾಗಿವೆ.
ಅರುಣ್ ಕುಮಾರ್ ವಿರುದ್ಧ ಬೆಂಗಳೂರಿನ ಸೂರ್ಯನಗರ, ಬೇಗೂರು, ಕೋಲಾರ, ಮಾಲೂರು, ಆನೇಕಲ್ ಮತ್ತು ನಾಗಮಂಗಲ ದಲ್ಲಿ ಕೊಲೆ, ಸುಲಿಗೆ, ಡಕಾಯಿತಿಯ ೯ ಪ್ರಕರಣಗಳು ದಾಖಲಾಗಿವೆ.
ಆರೋಪಿಗಳ ಪತ್ತೆಗೆ ಎಸ್ಪಿ ಡಿ.ಎಲ್.ನಾಗೇಶ್, ಡಿವೈಎಸ್‌ಪಿ ವಿ.ಕೆ.ನಾಗೇಶ್ ಮಾರ್ಗದರ್ಶನದಲ್ಲಿ ಸಿಪಿಐ ಬಿ.ರಾಜ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪಿಎಸ್‌ಐ ಸುನೀಲ್ ಕುಮಾರ್, ಸಿಬ್ಬಂದಿ ಸಂಪ0ಗಿರಾಮಯ್ಯ, ರವಿಕುಮಾರ್, ನವೀನ್ ಬಾಬು, ವೆಂಕಟೇಶ್ ಮೂರ್ತಿ, ಮಧುಸೂದನ್, ವಿಜಯ್ ಕುಮಾರ್, ರಾಮಲಕ್ಷ್ಮಣ್, ಫಾರೂಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿ ದ್ದರು.
Read E-Paper click here