Saturday, 26th October 2024

ವೀರಸಾವರ್ಕರ್ ಅಪ್ರತಿಮ ಸ್ವಾತಂತ್ರ‍್ಯ ಸೇನಾನಿ: ಪೋಟೋ ರಾಜಕಾರಣ ಸಲ್ಲದು ಡಾ. ಸುಧಾಕರ್

ಚಿಕ್ಕಬಳ್ಳಾಪುರ : ವೀರಸಾವರ್ಕರ್ ಭಾರತ ಸ್ವಾತಂತ್ರ‍್ಯ ಸಂಗ್ರಾಮಕ್ಕಾಗಿ ತಮ್ಮ ಯೌವ್ವನವನ್ನೇ ಮುಡಿಪಾಗಿಟ್ಟ ಧೀರ ಸೇನಾನಿ. ಬ್ರಿಟೀಷರ ಸೆರೆಯಲ್ಲಿ ಕಠಿಣ ಕಾಲಾಪಾನಿ ಶಿಕ್ಷೆಗೆ ಗುರಿಯಾಗಿದ್ದ ಭಾರತಾಂಬೆಯ ಸುಪುತ್ರ ಎಂಬುದು ಇತಿಹಾಸದಲ್ಲಿ ದಾಖಲಾಗಿರುವ ಸತ್ಯ ಸಂಗತಿ.ಇವರ ಪೋಟೋ ಬೆಳಗಾವಿ ಸುವರ್ಣಸೌಧದಲ್ಲಿ ಹಾಕಿದರೆ ತಪ್ಪೇನು? ಇದಕ್ಕೆ ಕಾಂಗ್ರೆಸ್ ಪಕ್ಷದ ಅನುಮತಿ ಪಡೆಯಬೇಕಿತ್ತೇನು? ಎಂದು ಸುದ್ದಿಗಾರರನ್ನು ಪ್ರಶ್ನಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪೋಟೋ ರಾಜಕಾರಣ ಫಲ ನೀಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರ ಕಾಲೆಳೆದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಸೋಮವಾರ ಪತ್ರಕರ್ತರ ಜತೆ ಮಾತನಾಡುತ್ತಾ ಹೀಗೆ ಹೇಳಿದರು. ಅಧಿಕಾರ ದಿಂದ ದೂರವಾಗಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಎಲ್ಲವನೂ ರಾಜಕಾರಣದ ಉದ್ದೇಶದಿಂದ ನೋಡುವುದು ಚಾಳಿಯಾಗಿ ಬಿಟ್ಟಿದೆ.ಸದನದಲ್ಲಿ ಜನಪರವಾದ ವಿಷಯಗಳನ್ನು ಚರ್ಚಿಸಲು ಅವರ ಬಳಿ ಮೌಲಿಕ ಪ್ರಶ್ನೆಗಳೇ ಇಲ್ಲ. ಅಧಿವೇಶನ ಎನ್ನುವುದು ಜನರ ಕಷ್ಟ ಸಂಕಷ್ಟಗಳಿಗೆ ಪರಿಹಾರೋಪಾಯಗಳನ್ನು ಕಂಡು ಹಿಡಿಯುವ ಉತ್ತಮ ವೇದಿಕೆ ಎಂಬುದನ್ನು ಅವರು ಮರೆತೇ ಹೋಗಿದ್ದಾರೆ. ವಿಷಯಾಂತರ ಮಾಡಲು ಪೋಟೋ ವಿಚಾರ ಮುನ್ನೆಲೆಗೆ ತಂದು ಪರೋಕ್ಷವಾಗಿ ಜನತೆಗೆ ಅಪಮಾನ ಮಾಡು ತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಿದ್ಧರಾಮಯ್ಯ ಅವರು ವಿಪಕ್ಷಗಳ ಜತೆ ಚರ್ಚೆಮಾಡಿಕೊಂಡೇ ಎಲ್ಲಾ ಮಾಡುತ್ತಿದ್ದರಾ? ಎಂದು ಪ್ರಶ್ನಿಸಿದ ಸಚಿವರು ಇದು ಇವರ ಡಬಲ್ ಸ್ಟಾö್ಯಂಡರ್ಡ್ ನಿಲುವಿಗೆ ಸಾಕ್ಷಿಯಾಗಿದೆ.ಜನತೆ ಎಲ್ಲವನ್ನೂ ನೋಡು ತ್ತಿದ್ದಾರೆ. ಯಾವಾಗಲೂ ದಸರಾ ಮಾಡೋಕೆ ಆಗಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

 
Read E-Paper click here