Thursday, 19th September 2024

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಅಧಿಕಾರ ಸ್ವೀಕಾರ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಚಿಕ್ಕಕಾಡಿಗೇನಹಳ್ಳಿ ಕೃಷ್ಣಮೂರ್ತಿ ಉಪವಿಭಾಗಾ ಧಿಕಾರಿ ಸಂತೋಷ್ ಅವರಿಂದ  ಅಧಿಕಾರ ಸ್ವೀಕರಿಸಿದರು.

ನಗರದ ಎಪಿಎಂಸಿ ಆವರಣದ ಎದುರಿಗಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ  ಸೋಮವಾರ ಅಪಾರ ಬೆಂಬಲಿಗರ ಸಮ್ಮುಖದಲ್ಲಿ ಅಧ್ಯಕ್ಷರ ಕಚೇರಿಗೆ ಪೂಜೆ ಸಲ್ಲಿಸಿ ಹಿರಿಯರಿಂದ ಆಶೀರ್ವಾದ ಪಡೆದು ವಿದ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ತಮ್ಮ ಅಪಾರ ಬೆಂಬಲಿಗರು ಪಕ್ಷದ ಮುಖಂಡರಿ0ದ ಗೌರವ ನಮನ, ಸನ್ಮಾನ ಸ್ವೀಕರಿಸಿದ ನಂತರ ಮಾಧ್ಯಮದವ ರೊಂದಿಗೆ ಮನಬಿಚ್ಚಿ ಮಾತನಾಡಿದರು.

ಬೆಂಗಳೂರು ನಗರಕ್ಕೆ ಸಮೀಪವಿರುವ ಚಿಕ್ಕಬಳ್ಳಾಪುರವನ್ನು ಆಧುನಿಕ ರೀತಿಯಲ್ಲಿ ಕಟ್ಟಲು ಬೆಂಗಳೂರಿನ ಉಪನಗರ ಮಾಡಲು ಸಚಿವ ಸುಧಾಕರ್ ಹಗಲಿರುಳು ಶ್ರಮಿಸು ತ್ತಿದ್ದಾರೆ. ಇದಕ್ಕೆ ಬಲ ತುಂಬಲು ಪ್ರಾಧಿಕಾರದ ವತಿಯಿಂದ ಏನೇನು ಮಾಡಲು ಸಾಧ್ಯ ವಿದೆಯೋ ಅದನ್ನು ಮಾಡಲಾಗುವುದು.ಮೊದಲಿಗೆ ನಗರದ ನಾಲ್ಕು ದಿಕ್ಕುಗಳಲ್ಲಿ ಚಿಕ್ಕಬಳ್ಳಾಪುರ ನಗರಕ್ಕೆ ಸ್ವಾಗತ , ನಗರಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು ಎಂಬ ಕಮಾನು ನಿರ್ಮಿಸುವುದಕ್ಕೆ ಮೊದಲ ಆಧ್ಯತೆ ನೀಡಲಾಗುವುದು.

ನಮ್ಮ ನಾಯಕರಾದ ಜನಪ್ರಿಯ ಶಾಸಕ, ಸಚಿವ ಸುಧಾಕರ್ ಅವರ ಮಾರ್ಗದರ್ಶನದಲ್ಲಿ ಜನರ ಆಶೋತ್ತರಗಳಿಗೆ ತಕ್ಕಂತೆ ಸಾರ್ವಜನಿಕರು ಎದುರಿಸುತ್ತಿರುವ ನಿವೇಶನ ಸಮಸ್ಯೆ, ಬಡಾವಣೆಗೆ ಸಂಬ0ಧಿಸಿದ ಖಾತೆಗಳ ವಿಚಾರದ ಸೇರಿದಂತೆ ಉಳಿದ ಸಮಸ್ಯೆಗಳನ್ನು ಕಾನೂನಿನ ಇತಿಮಿತಿಯಲ್ಲಿ ಪರಿಸುವ ಮೂಲಕ ಪಾರದರ್ಶಕ ಆಡಳಿತ ನೀಡಲು ಮೊದಲ ಆಧ್ಯತೆ ನೀಡಲಾ ಗುವುದು ಎಂದರು.

ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಸಾರ್ವಜನಿಕರ ದೂರಿದೆ.ಇದನ್ನು ಹೇಗೆ ನಿವಾರಿಸುವಿರಿ ಎಂಬ ಮಾಧ್ಯಮ ದವರ ಪ್ರಶ್ನೆಗೆ ಉತ್ತರಿಸಿದ ಅವರು ನನ್ನ ಗಮನಕ್ಕೂ ಈ ವಿಚಾರ ಬಂದಿದೆ ಮುಂದಿನ ದಿನಗಳಲ್ಲಿ ಇದಕ್ಕೆ ಸಂಪೂರ್ಣ ಕಡಿವಾಣ ಹಾಕಿ ನಮ್ಮ ನಾಯಕರ ನಂಬಿಕೆ ಉಳಿಸಿಕೊಂಡು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತೇನೆ.

ನನಗೆ ಅಧಿಕಾರ, ಅಧ್ಯಕ್ಷಗಾದಿ ಹೊಸದೇನಲ್ಲ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿ ಉತ್ತಮವಾಗಿ ಸೇವೆ ಸಲ್ಲಿಸಿರುವ ಅನುಭವ ಇದೆ.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿಯೂ ಸಮರ್ಥವಾಗಿ ಕರ್ತವ್ಯ ನಿರ್ವಹಿಸುವ ವಿಶ್ವಾಸ ನನಗಿದೆ.ಅಧಿಕಾರ ಅಂದ ಮೇಲೆ ರಾಜಕೀಯ ಒತ್ತಡಗಳು , ಶಿಫಾರಸ್ಸುಗಳು, ಸಮಸ್ಯೆಗಳು ಬರುವುದು ಸಹಜ. ಏನೇ ಬರಲಿ ಅವುಗಳನ್ನು ಸಮರ್ಥವಾಗಿ ಎದುರಿಸಿಕೊಂಡು ಹೋಗುವ ಶಕ್ತಿ ನನಗಿದೆ. ಕರ್ತವ್ಯಕ್ಕೆ ಮೊದಲ ಆಧ್ಯತೆ ನೀಡಿ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಜನಸೇವೆ ಮಾಡುವೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.

ಈ ವೇಳೆ ಜಿಲ್ಲಾ ಉಪವಿಭಾಗಾಧಿಕಾರಿ ಡಾ. ಸಂತೋಷ್‌ಕುಮಾರ್, ಮಾಜಿ ಜಿಲ್ಲಾಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ದಲಿತ ಸಂಘರ್ಷ ಸಮಿತಿಯ ಬಾಲಕುಂಟಹಳ್ಳಿ ಗಂಗಾಧರ್,ಮಾಜಿ ಟಿಪಿಎಸ್ ಅಧ್ಯಕ್ಷ ರಾಮಸ್ವಾಮಿ,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್,ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ತಿರುಮಳಪ್ಪ, ವಕೀಲ ಶೆಟ್ಟಿಗೆರೆ ದೇವದಾಸ್,ಮುಖಂಡ ಶ್ರೀರಾಮ್, ನರಸಿಂಹಪ್ಪ, ದಸಂಸ ವೇಣು, ನಾರಾಯಣಸ್ವಾಮಿ ಶ್ರೀನಿವಾಸ್,ಸಮುದಾಯದ ಇತರೆ ಮುಖಂಡರು ಹಾಜರಿದ್ದರು.

Read E-Paper click here