Friday, 20th September 2024

ಐಪಿಎಲ್ ಮಿನಿ ಹರಾಜು: ಸ್ಯಾಮ್ ಕರನ್ ಖರೀದಿಗೆ ಸಿಎಸ್‌ಕೆ ಮುಂದು..?

ಕೊಚ್ಚಿ: ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಸಾಕಷ್ಟು ಬೇಡಿಕೆ ಸೃಷ್ಟಿಸಿಕೊಳ್ಳಬಹುದಾದ ಆಟಗಾರನಾಗಿದ್ದಾರೆ.

ಇಂಗ್ಲೆಂಡ್ ಬೌಲರ್ ಟಿ20 ವಿಶ್ವಕಪ್‌ನಲ್ಲಿ ಕರಾನ್ 13 ವಿಕೆಟ್‌ ಪಡೆದು ಮಿಂಚಿದ್ದರು. ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 4 ಓವರ್ ಗಳಲ್ಲಿ 12 ರನ್ ನೀಡಿ 3 ವಿಕೆಟ್ ಪಡೆದು ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದರು.

ಸ್ಯಾಮ್ ಕರಾನ್ ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರು. ಐಪಿಎಲ್ ಹರಾಜಿಗೆ ಮುನ್ನ ಅವರು ಈಗಾಗಲೇ ಡಿಜೆ ಬ್ರಾವೋ, ಆಡಮ್ ಮಿಲ್ನೆ, ಕ್ರಿಸ್‌ ಜೋರ್ಡಾನ್‌ರನ್ನು ಬಿಡುಗಡೆ ಮಾಡಿದ್ದು, ತಂಡಕ್ಕೆ ವೇಗದ ಬೌಲರ್ ಅಗತ್ಯವಿದೆ. ಸಿಎಸ್‌ಕೆ ತನ್ನ ಪರ್ಸ್‌ನಲ್ಲಿ 20.45 ಕೋಟಿ ರುಪಾಯಿ ಹೊಂದಿದ್ದು ಸ್ಯಾಮ್ ಕರನ್ ಅವರನ್ನು ಖರೀದಿಸಲೇ ಬೇಕೆನ್ನುವ ನಿರ್ಧಾರ ಮಾಡಿದೆ.

2021ರಲ್ಲಿ ಸಿಎಸ್‌ಕೆ ಐಪಿಎಲ್ ಕಪ್ ಗೆದ್ದಾಗ ಸ್ಯಾಮ್ ಕರನ್ ತಂಡದ ಪರವಾಗಿ ಆಡಿದ್ದರು. 2023ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಕಾಯುತ್ತಿರುವ ಸಿಎಸ್‌ಕೆ ಉತ್ತಮ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸಿದೆ.

ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಡಿಸೆಂಬರ್ 23 ರಂದು ನಡೆಯಲಿ ರುವ ಐಪಿಎಲ್ ಹರಾಜಿನಲ್ಲಿ ಸ್ಯಾಮ್ ಕರ್ರನ್ ಮೇಲೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಕೂಡ ನಿರ್ಧಾರ ಮಾಡಿದೆ.

2020ರಲ್ಲಿ ಸ್ಯಾಮ್‌ ಕರನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 5.5 ಕೋಟಿ ರುಪಾಯಿಗೆ ಹರಾಜಿನಲ್ಲಿ ಖರೀದಿ ಮಾಡಿತ್ತು. ಈ ಬಾರಿಯ ಹರಾಜಿನಲ್ಲಿ ಅವರು ಇದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ.

ಸಿಎಸ್‌ಕೆ ತಂಡ: ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಡೇಶ್‌ಪಾನ್, ತುಶ್‌ರಾರ್‌ ಸ್ಯಾಂಟ್ನರ್, ಚೌಧರಿ, ಮಥೀಶ ಪದಿರಾನ, ಸಿಮರ್ಜೀತ್ ಸಿಂಗ್, ದೀಪಕ್ ಚಹಾರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ.

Read E-Paper click here