Friday, 22nd November 2024

ತಾಜ್‌ಮಹಲ್‌ಗೆ ಮನೆ ತೆರಿಗೆ ಪಾವತಿಸುವಂತೆ ನೋಟಿಸ್…?

ಆಗ್ರಾ: ತಾಜ್‌ಮಹಲ್‌ಗೆ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಮನೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ.

1.9 ಕೋಟಿ ನೀರಿನ ತೆರಿಗೆ, ರೂ.1.5 ಲಕ್ಷ ಆಸ್ತಿ ತೆರಿಗೆ ಬಿಲ್ ಪಾವತಿಸುವಂತೆ ಆಗ್ರಾ ಪುರಸಭೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಬಾಕಿ ಪಾವತಿಸದಿದ್ದರೆ ತಾಜ್ ಮಹಲ್ ಸೀಜ್‌ ಮಾಡುವುದಾಗಿ ಪುರಸಭೆ ಅಧಿಕಾರಿಗಳು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಈ ನೋಟಿಸ್ ನೋಡಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ತಾಜ್ ಮಹಲ್ ಕಲಾತ್ಮಕ ಹಾಗೂ ಐತಿಹಾಸಿಕ ಕಟ್ಟಡವಾಗಿದ್ದು, ಇದಕ್ಕೆ ಮನೆ ತೆರಿಗೆ ಕಟ್ಟು ವುದೇನು ಎಂದು ಅಚ್ಚರಿ ವ್ಯಕ್ತಪಡಿಸಿದರು. ಈ ರೀತಿಯ ನೋಟಿಸ್ ಬರುತ್ತಿರುವುದು ಇದೇ ಮೊದಲು ಅಂತಿದಾರೆ.

ಎಎಸ್‌ಐ ಸೂಪರಿಂಟೆಂಡೆಂಟ್ ರಾಜ್‌ಕುಮಾರ್ ಪಟೇಲ್ ಮಾತನಾಡಿ, ತಾಜ್ ಮಹಲ್‌ಗೆ ಎರಡು ನೋಟೀಸ್ ಬಂದಿದ್ದು, ಒಂದು ನೀರಿನ ತೆರಿಗೆ ಮತ್ತು ಎರಡು ಆಸ್ತಿ ತೆರಿಗೆ ಬಗ್ಗೆ. ನೋಟಿಸ್ ಗಳಲ್ಲಿ ಒಟ್ಟು 1.9 ಕೋಟಿ ರೂ.ನೀರಿನ ತೆರಿಗೆ ಹಾಗೂ 1.5 ಲಕ್ಷ ಆಸ್ತಿ ತೆರಿಗೆ ಪಾವತಿಸಬೇಕಿದೆ ಎಂದು ತಿಳಿಸಿದ್ದಾರೆ.

ಪ್ರಕರಣದಲ್ಲಿ ಕಾರ್ಪೊರೇಷನ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ವಿವರಿಸಿದರು. ರಾಜ್ಯದಲ್ಲಾಗಲೀ, ದೇಶದಲ್ಲಾಗಲೀ ಯಾವುದೇ ಸ್ಮಾರಕಗಳಿಗೆ ತೆರಿಗೆ ಇಲ್ಲ. ಇದು ಅಧಿಕಾರಿಗಳ ತಪ್ಪಿನಿಂದಾಗಿದೆ ಎಂದರು.

Read E-Paper click here