Thursday, 19th September 2024

ಜಿಲ್ಲೆಯ ೫ ವಿಧಾನ ಸಭಾ ಕ್ಷೇತ್ರಗಳಿಗೆ ಜೆಡಿಎಸ್ ಪಟ್ಟಿ ಪ್ರಕಟ

ಚಿಕ್ಕಬಳ್ಳಾಪುರ: ಜೆಡಿಎಸ್ ಪಕ್ಷವು ೨೦೨೩ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ೯೩ ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ನಿರೀಕ್ಷಿತ ಅಭ್ಯರ್ಥಿಗಳಿಗೇ ಟಿಕೆಟ್ ನೀಡಲಾಗಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕೆ.ಪಿ.ಬಚ್ಚೇಗೌಡ, ಗೌರಿಬಿದನೂರು ಕ್ಷೇತ್ರದಿಂದ ನರಸಿಂಹ ಮೂರ್ತಿ, ಬಾಗೇಪಲ್ಲಿ ಕ್ಷೇತ್ರದಿಂದ ಡಿ.ಜೆ.ನಾಗರಾಜರೆಡ್ಡಿ, ಶಿಡ್ಲಘಟ್ಟದಿಂದ ರವಿಕುಮಾರ್, ಚಿಂತಾಮಣಿ ಕ್ಷೇತ್ರದಿಂದ ಶಾಸಕ ಎಂ.ಕೃಷ್ಣಾರೆಡ್ಡಿ ಜೆಡಿಎಸ್ ಅಭ್ಯರ್ಥಿ ಗಳಾಗಿದ್ದಾರೆ.

ಕೆಲವು ತಿಂಗಳ ಹಿಂದೆಯೇ ಈ ಐದು ಮಂದಿಗೆ ಆಯಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟಿಸು ವ0ತೆ ಎಚ್.ಡಿ.ಕುಮಾರಸ್ವಾಮಿ ಸೂಚಿಸಿ ದ್ದರು. ಇವರೇ ಜೆಡಿಎಸ್ ಅಭ್ಯರ್ಥಿ ಎಂದು ಜಿಲ್ಲಾ ಘಟಕವೂ ಒತ್ತಿ ಹೇಳಿತ್ತು. ಈಗ ಅಕೃತವಾಗಿ ಪ್ರಕಟಣೆ ಹೊರ ಬಿದ್ದಿದೆ.

ಬಾಗೇಪಲ್ಲಿ ಕ್ಷೇತ್ರದಲ್ಲಿ ಡಿ.ಜೆ.ನಾಗರಾಜ ರೆಡ್ಡಿ ಅವರ ಟಿಕೆಟ್ ಬದಲಾಗುತ್ತದೆ ಎನ್ನುವ ಅಂತೆ ಕಂತೆಗಳ ಸುದ್ದಿ ಹರಡಿತ್ತು.

ಪಂಚರತ್ನ ರಥಯಾತ್ರೆಯ ವೇಳೆ ಪಕ್ಷದಲ್ಲಿ ಒಡಕು ಸಹ ಮೂಡಿತ್ತು. ಇತ್ತೀಚೆಗೆ ಬಾಗೇಪಲ್ಲಿಯ ಜೆಡಿಎಸ್‌ನ ಕೆಲವು ಮುಖಂಡರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಭ್ಯರ್ಥಿ ಬದಲಿಸುವಂತೆ ಕೋರಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಡಿ.ಜೆ. ನಾಗರಾಜ ರೆಡ್ಡಿ ಸ್ಪರ್ಧೆಗೆ ಜೆಡಿಎಸ್ ವರಿಷ್ಠರು ಹಸಿರು ನಿಶಾನೆ ತೋರಿದ್ದಾರೆ.

ಇದರ ನಡುವೆ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡ ಇದೇ ಅಂತಿಮಪಟ್ಟಯಲ್ಲ ಎಂದಿರುವುದು ಪಕ್ಷದ ವಲಯದಲ್ಲಿ ಅಷ್ಟೇ ಅಲ್ಲದೆ ಘೋಷಿತ ಅಭ್ಯರ್ಥಿಗಳ ಅಂಗಳ ದಲ್ಲಿಯೂ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

 
Read E-Paper click here