Saturday, 26th October 2024

ಸಂಚಾರಿ ನಿಯಮ ಪಾಲಿಸಿ ಸುರಕ್ಷಿತವಾಗಿರಿ : ಎಸ್.ಪಿ. ನಾಗೇಶ್

ಚಿಕ್ಕಬಳ್ಳಾಪುರ: ಸಂಚಾರ ನಿಯಮಗಳ ಪಾಲನೆ ವಿಚಾರವಾಗಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಿ.ಎಲ್.ನಾಗೇಶ್ ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಚಿಕ್ಕಬಳ್ಳಾಪುರ ಸಂಚಾರ ಪೊಲೀಸರು ಹಮ್ಮಿ ಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ದರು.

ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇಲಾಖೆಯಿಂದಲೂ ಜಾಗೃತಿ ಕಾರ್ಯಕ್ರಮ ಗಳು ನಡೆಯುತ್ತವೆ. ಇದರ ಜೊತೆಗೆ ಸಾರ್ವಜನಿಕರಲ್ಲಿ ನಿಯಮಗಳ ಪಾಲನೆಯ ಬಗ್ಗೆ ತಿಳಿವಳಿಕೆ ಮೂಡಬೇಕು ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚಾರ ಸಮಸ್ಯೆಗಳಿವೆ ಎಂದು ಸಾರ್ವ ಜನಿಕರಿಂದ ದೂರುಗಳು ಸಹ ಬರುತ್ತಿವೆ. ನಗರದಲ್ಲಿ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಗಳನ್ನು ಕೈಗೊಳ್ಳಲು ನಗರಸಭೆಯ ಜತೆ ಮಾತುಕತೆ ಸಹ ನಡೆಸಿದ್ದೇವೆ ಎಂದರು.

ಯಾವುದೇ ಕಾರಣಕ್ಕೂ ಮದ್ಯ ಸೇವಿಸಿ ವಾಹನಗಳನ್ನು ಚಲಾಯಿಸಬಾರದು. ಇದರಿಂದ ವಾಹನ ಚಾಲಕರು ಮತ್ತು ಅಮಾಯ ಕರೂ ಸಹ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಪ್ರಾಣ ಹಾನಿಯಿಂದ ನಿಮ್ಮ ಕುಟುಂಬಗಳು ಸಹ ಸಮಸ್ಯೆಗೆ ಸಿಲುಕುತ್ತ ವದೆ ಎಂದು ಹೇಳಿದರು.

ಸಂಚಾರ ನಿಯಮಗಳನ್ನು ಪಾಲಿಸುವಂತೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಗರದ ವಿವಿಧ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ರಸ್ತೆ ನಿಯಮಗಳನ್ನು ಪಾಲಿಸುವಂತೆ ಘೋಷಣೆಗಳನ್ನು ಕೂಗಿದರು.

ಡಿವೈಎಸ್‌ಪಿ ವಿ.ಕೆ.ವಾಸುದೇವ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಸಂಚಾರ ಠಾಣೆ ಸಬ್‌ಇನ್ಸ್ಸ್ಪೆಕ್ಟರ್ ವೇಣು ಗೋಪಾಲ್, ಎಎಸ್ಪಿ ಚಂದ್ರು, ನಗರಸಭೆ ಕಮಿಷನರ್ ಪೌರಾಯುಕ್ತ ಪಿ.ಉಮಾಶಂಕರ್, ಕ್ಷೇತ್ರ ಶಿಕ್ಷಣಾಕಾರಿ ಶೋಭಾ, ಮುಖಂಡ ಮೊಬೈಲ್ ಬಾಬು ಇತರರು ಇದ್ದರು.

Read E-Paper click here