Sunday, 24th November 2024

ತುಮಕೂರು ವಿವಿಯ ಅಂತರಕಾಲೇಜುಗಳ ಪುರುಷರು ಹಾಗೂ ಮಹಿಳೆಯರ ಅಥ್ಲೆಟಿಕ್ ಕ್ರೀಡಾಕೂಟ

ತಿಪಟೂರು : ನಗರದ ಕಲ್ಪತರು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಬುಧ ವಾರ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜಿನ ವತಿಯಿಂದ ತುಮಕೂರು ವಿಶ್ವವಿದ್ಯಾಲಯದ ಅಂತರಕಾಲೇಜುಗಳ ಪುರುಷರು ಹಾಗೂ ಮಹಿಳೆಯರ ಅಥ್ಲೆಟಿಕ್ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟದ ಮೊದಲನೆಯ ದಿನದಲ್ಲಿ ೨೫ ಕಾಲೇಜುಗಳು ಭಾಗವಹಿಸಿದ್ದು ಮಹಿಳೆಯರ ವಿಭಾಗದಲ್ಲಿ ೮೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಬಿ.ಕೆ.ಶಿವಲಿಂಗಮ್ಮ ತುಮಕೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿನಿ, ಲಾಂಗ್ ಜಂಪ್‌ ನಲ್ಲಿ ಎಚ್.ಸಿ.ಕವನ, ಎಸ್.ಎಸ್.ಸಿ.ಡ್ಬೂ÷್ಲ ಹೆಬ್ಬೂರು ಕಾಲೇಜಿನ ವಿದ್ಯಾರ್ಥಿನಿ, ಗುಂಡು ಎಸೆತ ಕೆ.ಸುಶೀಲ ಪ್ರಥಮ ಸ್ಥಾನ ಗುಬ್ಬಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿ, ೪*೪೦೦ ಮೀ ಮೀಟರ್ ರಿಲೇ ಓಟದಲ್ಲಿ ಕುಣಿಗಲ್‌ನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು.

೨೦೦ ಮೀ ಓಟದಲ್ಲಿ ಎಚ್.ಜಿ.ಕವನ ಎಸ್.ಎಸ್.ಸಿ.ಡ್ಬೂ÷್ಲ ತುಮಕೂರು ಕಾಲೇಜಿನ ವಿದ್ಯಾರ್ಥಿನಿ ಪ್ರಥಮ ಸ್ಥಾನ, ಜಾವಲಿನ್ ಥ್ರೋ ನಲ್ಲಿ ತೇಜರಾಜೇಶ್ವರಿ ತುಮಕೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿನಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಪುರುಷರ ವಿಭಾಗದಲ್ಲಿ ೮೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಇ.ಎಸ್.ಭರತ್ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿ, ಗುಂಡು ಎಸೆತದಲ್ಲಿ ಕೆ.ಜೆ.ರಂಗನಾಥ ಪ್ರಥಮ ಸ್ಥಾನವನ್ನು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿ, ೨೦೦ ಮೀ ಓಟದಲ್ಲಿ ಡಿ.ವೆಂಕ ಟೇಶ್ ಪ್ರಥಮ ಸ್ಥಾನ ತುಮಕೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿ, ಜಾವಲಿನ್ ಥ್ರೋನಲ್ಲಿ ಪ್ರಥಮ ಸ್ಥಾನವನ್ನು ಕೆ.ಜೆ.ರಂಗನಾಥ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿ, ೧೦ ಸಾವಿರ ಮೀ ಓಟದಲ್ಲಿ ಪ್ರಥಮ ಸ್ಥಾನ ಎಂ.ಕೆ. ಮ0ಜುನಾಥ್ ಶಿರಾದ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿ, ಬರ‍್ಡ್ ಜಂಪ್ (ತ್ರಿಪಲ್ ಜಂಪ್) ವಿ.ಎನ್.ಯಶ್ವಂತ್, ತುಮಕೂರಿನ ಯುಸಿಎಸ್ ಕಾಲೇಜಿನ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕ್ರೀಡಾಕೂಟದ ಉದ್ಘಾಟನೆಯನ್ನು ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ನಿರ್ದೇಶಕ ಡಾ.ಎ.ಎಂ.ಮ0ಜುನಾಥ್ ನೆರವೇರಿಸಿದ್ದು ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಜಿ.ಪಿ.ದೀಪಕ್, ಬಾಗೇಪಲ್ಲಿ ನಟರಾಜು, ಕಾರ್ಯದರ್ಶಿಗಳಾದ ಎಚ್.ಜಿ.ಸುಧಾಕರ್, ಎಂ.ಆರ್.ಸAಗಮೇಶ್, ಪ್ರಾಂಶುಪಾಲೆ ಡಾ.ವಿ.ಮಾಲತಿ, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಶ್ರೀನಿವಾಸ ಇದ್ದರು.