Saturday, 23rd November 2024

ಭಾರತೀಯ ವಾಯುಸೇನೆಯ ಫೈಟರ್‌ ಪೈಲಟ್ ಸಾನಿಯಾ ಮಿರ್ಜಾ

ಮಿರ್ಜಾ‍ಪುರ: ಉತ್ತರ ಪ್ರದೇಶದ ಸಾನಿಯಾ ಮಿರ್ಜಾ ಎನ್ನುವ ಯುವತಿ, ಭಾರತೀಯ ವಾಯುಸೇನೆಯ ಫೈಟರ್‌ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಭಾರತೀಯ ವಾಯುಸೇನೆಯಲ್ಲಿ ಪೈಲಟ್‌ ಆಗಿ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಮಿರ್ಜಾಪುರದ ಜಸೋವರ್‌ ನಿವಾಸಿ ಸಾನಿಯಾ ಮಿರ್ಜಾ ಅವರ ತಂದೆ ಟಿವಿ ಮೆಕ್ಯಾನಿಕ್‌ ಆಗಿದ್ದಾರೆ.

ಹಿಂದಿ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ಸಾನಿಯಾ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ನಡೆಸುವ ಪರೀಕ್ಷೆ ಯಲ್ಲಿ ತೇರ್ಗಡೆಯಾಗಿ, ಇದೀಗ ವಾಯು ಪಡೆಯ ಪೈಲಟ್‌ ತರಬೇತಿಗೆ ಆಯ್ಕೆಯಾಗಿದ್ದಾರೆ. ಪುಣೆಯ ಎನ್‌ಡಿಎ ಖಡಕ್‌ವಾಸ್ಲಾಕ್ಕೆ ಅವರು ಡಿ.27 ಕ್ಕೆ ದಾಖಲಾಗಲಿದ್ದಾರೆ. ಅಲ್ಲಿ ಅವರಿಗೆ ಪೈಲಟ್‌ ತರಬೇತಿ ನಡೆಯಲಿದೆ.

2022ರ ಎನ್‌ಡಿಎ ಪರೀಕ್ಷೆಯಲ್ಲಿ, ಫೈಟರ್ ಪೈಲಟ್‌ ವಿಭಾಗದಲ್ಲಿ ಮಹಿಳೆಯರಿಗೆ ಕೇವಲ 2 ಸ್ಥಾನ ಮಾತ್ರ ಇತ್ತು. ಎರಡನೇ ಪ್ರಯತ್ನದಲ್ಲಿ ನಾನು ತೇರ್ಗಡೆಯಾದೆ’ ಎಂದು ಸಾನಿಯಾ ಹೇಳಿದ್ದಾರೆ.

Read E-Paper click here