Friday, 20th September 2024

ಜ. 5ವರೆಗೆ ಉಜ್ಜೈನಿಯ ಮಹಾಕಾಲೇಶ್ವರ ಗರ್ಭಗುಡಿಗೆ ಪ್ರವೇಶ ನಿರ್ಬಂಧ

ಉಜ್ಜೈನಿ : ಕ್ರಿಸ್‌ಮಸ್‌, ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಜ. 5ವರೆಗೆ ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಲೇಶ್ವರ ಗರ್ಭಗುಡಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಹೇರಲಾಗಿದೆ.

ದೇಶದಲ್ಲಿರುವ 12 ಜ್ಯೋರ್ತಿಲಿಂಗಳ ಪೈಕಿ ಮಹಾಕಾಲೇಶ್ವರ ಕೂಡಾ ಒಂದಾಗಿದೆ. ಆ ನಿಟ್ಟಿನಲ್ಲಿ, ಕ್ರಿಸ್‌ಮಸ್‌, ಹೊಸ ವರ್ಷ ಆಚರಣೆ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ಜ. 5ವರೆಗೆ 10 ದಿನಗಳ ಕಾಲ ದೇವಸ್ಥಾನಕ್ಕೆ ಭಕ್ತರ ಜನದಟ್ಟನೆ ಹೆಚ್ಚಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದರ್ಶನಕ್ಕಾಗಿ ಎಲ್ಲಾ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ದೇವಾಲಯದ ಒಳಾಂಗಣಕ್ಕೆ ಮೊಬೈಲ್‌ ಪೋನ್‌ ಬಳಕೆಗೆ ಅವಕಾಶವಿಲ್ಲ.