Saturday, 23rd November 2024

ಹರಿಣಗಳಿಗೆ ಇನಿಂಗ್ಸ್, 182 ರನ್‌ ಸೋಲು

ಮೆಲ್ಬೋರ್ನ್‌: ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಇನಿಂಗ್ಸ್ ಮತ್ತು 182 ರನ್‌ಗಳಿಂದ ಸೋಲಿಸಿರುವ ಆಸ್ಟ್ರೇಲಿಯಾ ತಂಡ 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ.

ಇದರೊಂದಿಗೆ ಸರಣಿಯನ್ನು ಕೈವಶ ಮಾಡಿಕೊಂಡಿರುವ ಪ್ಯಾಟ್ ಕಮ್ಮಿನ್ಸ್ ತಂಡ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಸಾಧನೆ ಮಾಡಿದೆ. ಮೊದಲನೆಯದ್ದು, 16 ವರ್ಷಗಳ ಬಳಿಕ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ದಾಖಲೆ ಮಾಡಿದರೆ, ಎರಡನೇಯ ದಾಗಿ ಈ ಗೆಲುವಿನ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್​ಗೆ ಟಿಕೆಟ್ ಅನ್ನು ಬಹುತೇಕ ಖಚಿತಪಡಿಸಿ ಕೊಂಡಿದೆ.

ಈ ಗೆಲುವಿನಿಂದ ಆಸ್ಟ್ರೇಲಿಯಾ 12 ಅಂಕಗಳನ್ನು ಪಡೆದುಕೊಂಡಿದೆ. ಇದರೊಂದಿಗೆ 14 ಪಂದ್ಯಗಳಲ್ಲಿ ಒಟ್ಟು 132 ಅಂಕ ಗಳಿಸಿದೆ. ಆಸ್ಟ್ರೇಲಿಯಾ ಮುಂದಿನ ವರ್ಷ ಓವಲ್‌ ನಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸುತ್ತಿದೆ.

ಆಸ್ಟ್ರೇಲಿಯ ನಂತರ ಭಾರತ ತಂಡ ಎರಡನೇ ಸ್ಥಾನದಲ್ಲಿದ್ದು, ಸತತ 2ನೇ ಬಾರಿ ಫೈನಲ್‌ ಪ್ರವೇಶಿಸುವ ನಿರೀಕ್ಷೆಯಲ್ಲಿದೆ.

 
Read E-Paper click here