Thursday, 21st November 2024

ಸಚಿವ ಆರ್.ಅಶೋಕ್‍’ಗೆ ಸ್ಪೀಕರ್ ಕಾಗೇರಿ ತರಾಟೆ

ಬೆಳಗಾವಿ: 2022-23ನೆ ಸಾಲಿನ ಪೂರಕ ಅಂದಾಜುಗಳ ಎರಡನೆ ಬೇಡಿಕೆಗಳ ಮೇಲಿನ ಪ್ರಸ್ತಾವನೆಗಳ ಮೇಲೆ ಚರ್ಚೆ ನಡೆಯು ತ್ತಿದ್ದ ಸಂದರ್ಭ ಕಂದಾಯ ಸಚಿವ ಆರ್.ಅಶೋಕ್‍ ರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.

ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಕೃಷ್ಣಭೈರೇಗೌಡ ಮಾತನಾಡುತ್ತಿದ್ದಾಗ, ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು.ಈ ವೇಳೆ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಆರ್.ಅಶೋಕ್, ಚರ್ಚೆ ವೇಳೆ ಕೇವಲ ವಿಪಕ್ಷಗಳ ಸದಸ್ಯರಿಗೆ ಮಾತ್ರ ಮಾತನಾಡಲು ಅವಕಾಶ ಕೊಡುತ್ತಿದ್ದೀರಾ. ಆಡಳಿತ ಪಕ್ಷದ ಸದಸ್ಯರಿಗೂ ಅವಕಾಶ ನೀಡಿ ಎಂದರು.

ಈ ವೇಳೆ ಸ್ಪೀಕರ್ ಮಾತನಾಡಿದ, ‘ನಾನು ನೋಡುತ್ತಿದ್ದೇನೆ, ಯಾರು ಕೈ ಎತ್ತುತ್ತಿದ್ದಾರೋ ಅವರಿಗೆ ಅವಕಾಶ ನೀಡುತ್ತಿದ್ದೇನೆ ಎಂದರು. ಆಕ್ಷೇಪ ವ್ಯಕ್ತಪಡಿಸಿದ ಅಶೋಕ್, ಎಲ್ಲಿ ಕೊಡುತ್ತೀದ್ದಿರಾ ಅವರೆಲ್ಲ ಕೈ ಎತ್ತುತ್ತಲೆ ಇದ್ದಾರೆ. ಇನ್ನೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಚರ್ಚೆ ಆಗಬೇಕು ಎಂದರು.

ಆಕ್ರೋಶಗೊಂಡ ಸ್ಪೀಕರ್, ನಿಮ್ಮ ಸ್ಥಾನದಲ್ಲಿ ನಿಂತು ಎಲ್ಲರಿಗೂ ತಪ್ಪು ಭಾವನೆ ಬರುವಂತೆ ಮಾತನಾಡಬೇಡಿ.’ಬೀ ಕೇರ್ ಫುಲ್’ . ಕಲಾಪ ಸಲಹಾ ಸಮಿತಿ(ಬಿಎಸಿ) ಸಭೆಯಲ್ಲಿ ನೀವೆಲ್ಲ ಏನು ಮಾತನಾಡಿದ್ದೀರಿ ಎಂದು ಇಲ್ಲಿ ಹೇಳಲೇ? ಎಂದು ಎಚ್ಚರಿಕೆ ನೀಡಿದರು.

ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್ ಕಾಗೇರಿ ಅವರನ್ನು ಸಮಾಧಾನಪಡಿಸಿದರು.

 
Read E-Paper click here