Thursday, 12th December 2024

ಬ್ರೆಜಿಲ್ ಅಧ್ಯಕ್ಷರಾಗಿ ಲುಲಾ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕಾರ

ಬ್ರೆಜಿಲ್ : ಬ್ರೆಜಿಲ್ ಅಧ್ಯಕ್ಷರಾಗಿ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಭಾನುವಾರ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಅಕ್ಟೋಬರ್‌ನಲ್ಲಿ ನಡೆದ ಚುನಾವಣೆ ಯಲ್ಲಿ ಬಲಪಂಥೀಯ ನಾಯಕ ಜೈರ್ ಬೋಲ್ಸನಾ ರೊರನ್ನು ಸೋಲಿಸಿದರು.

ಬಲಪಂಥೀಯ ನಾಯಕ ಜೈರ್ ಬೋಲ್ಸನಾರೊ ಅವರ ವಿಭಜಿತ ಆಡಳಿತದ ನಂತರ ಬಡವರು ಮತ್ತು ಪರಿಸರಕ್ಕಾಗಿ ಹೋರಾ ಡಲು ಮತ್ತು ದೇಶವನ್ನು ಪುನರ್ ನಿರ್ಮಿಸಲು ಲುಲಾ ಡ ಸಿಲ್ವಾ ಪ್ರತಿಜ್ಞೆ ಮಾಡಿದರು.

ಫ್ಯಾಸಿಸಂನಿಂದ ಪ್ರೇರಿತ ವಿರೋಧಿಗಳ ಮುಖಾಂತರ ನಾವು ಸ್ವೀಕರಿಸಿದ ಜನಾದೇಶವನ್ನು ನಮ್ಮ ಪ್ರಜಾಪ್ರಭುತ್ವ ಸಂವಿಧಾನದ ಮೂಲಕ ರಕ್ಷಿಸಲಾಗುವುದು. ನಾವು ದ್ವೇಷಕ್ಕೆ ಪ್ರೀತಿ ಯಿಂದ ಪ್ರತಿಕ್ರಿಯಿಸುತ್ತೇವೆ. ಸತ್ಯದೊಂದಿಗೆ ಸುಳ್ಳು, ಭಯೋತ್ಪಾದನೆ ಮತ್ತು ಹಿಂಸಾಚಾರಕ್ಕೆ ಕಾನೂನಿನೊಂದಿಗೆ ಪ್ರತಿಕ್ರಿಯಿಸು ತ್ತೇವೆ ಎಂದು ಎಎಫ್‌ಪಿ ಲುಲಾ ಹೇಳಿದ್ದಾರೆ.

Read E-Paper click here