ಇಂಡಿ: ವಸತಿ ನಿಲಯಗಳು ಎಂದರೆ ಕೇವಲ ವಿಧ್ಯಾರ್ಥಿಗಳಿಗೆ ಊಟ, ವಸತಿ ನೀಡುವ ಕೇಂದ್ರಗಳು ಎಂಬ ಭಾವನೆ ಸಾರ್ವ ಜನಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಹಾಸು ಹೊಕ್ಕಿದೆ. ಆದರೆ ಬದಲಾವಣೆ ಜಗದ ನೀಯಮ ಯಾವ ಸಂಧರ್ಬಗಳಲ್ಲಿ ಒಳ್ಳೇಯ ಅಧಿಕಾರಿಗಳು ಬಂದು ಹೊಸಸ್ಪರ್ಶ ನೀಡುತ್ತಾರೆ ಎನೂ ಎಂಬುದಕ್ಕೆ ವಿಜಯಪೂರ ಜಿಲ್ಲೆಯ ಜಿಲ್ಲಾ ಪಂಚಾಯತ ಕಾರ್ಯ ನಿವಾರ್ಹಕ ಅಧಿಕಾರಿ ರಾಹುಲ್ ಸಿಂಧೆಯವರು ವಸತಿ ನಿಲಯಗಳಲ್ಲಿ ಊಟದ ಜೊತೆ ವಿಧ್ಯಾರ್ಥಿಗಳಿಗೆ ಬೀಡುವಿನ ವೇಳೆಯಲ್ಲಿ ವಿನೂತನ ಶಿಕ್ಷಣ ನೀಡುವ ಪರಿಕಲ್ಪನೆಯೊಂದಿಗೆ ಕರ್ನಾಟಕ ರಾಜ್ಯದಲ್ಲಿಯೇ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ ವಿಜಯಪೂರ ಮಿಷೆನ್ ವಿಧ್ಯಾಪೂರ, ಚೇತನ ಸಂಜೆ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಮೇಟ್ರೀಕ ಪೂರ್ವ ವಸತಿ ನಿಲಯಗಳ ವಿಧ್ಯಾರ್ಥಿಗಳಿಗೆ ಚೇತನ ಸಂಜೆ ಶಾಲಾ ಅವಧಿಯ ನಂತರ ಸಾಯಂಕಾಲ ೬-೧೫ರಿಂದ ೭-೧೫ ಆನ್ ಲೈನ್ ಸ್ಮಾರ್ಟ ಕ್ಲಾಸ್ ಬೋದನಾ ತರಗತಿ ಜಿಲ್ಲೆಯ ನುರಿತ ತಜ್ಞ ಹಾಗೂ ಅನುಭವಿ ಶಿಕ್ಷಕರಿಂದ ಕಬ್ಬಿಣದ ಕಡಲೆ ಯಂತಾದ ಗಣಿತ. ವಿಜ್ಞಾನ ,ಇಂಗ್ಲೀಷ ವಿಷಯಗಳ ಬೋಧನೆ ಮಾಡಿಸಿ ನಗರ ವಾಸಿಗಳ ಮಕ್ಕಳು ಶೈಕ್ಷಣಿಕ ದಾಹ ನಿಗಿಸಿಕೊಳ್ಳಲು ಮನೆಪಾಠಗಳಿಗೆ, ಟ್ಯೋಷನ್ ದಂತಹ ಕ್ಲಾಸುಗಳಿಂದ ಶೈಕ್ಷಣಕ ಗುಣಮಟ್ಟ ಹೆಚ್ಚಿಸಿಕೊಳ್ಳಬಹುದು.
ಆದರೆ ವಸತಿ ನಿಲಗಳಲ್ಲಿ ಇರುವ ಬಡಮಕ್ಕಳಿಗೆ ಬಿಡುವಿನ ಶಿಕ್ಷಣ ಸಿಗುವುದಿಲ್ಲ ಎಂಬ ದೂರದೃಷ್ಠಿ ಹೊಂದಿದ ಅಧಿಕಾರಿ ಸಿ.ಇ.ಓ ವಸತಿ ನಿಲಯಗಳಲ್ಲಿ ಅನುಭವಿ ಶಿಕ್ಷಕರಿಂದ ಆನ್ ಲೈನ್ ಸ್ಲಾರ್ಟ ಕ್ಲಾಸ್ ನಡೇಯಿಸಿ ಬಡಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿರುವ ಕಾರ್ಯವೈಖ್ಯರಿಗೆ ವಿಧ್ಯಾರ್ಥಿಗಳಿಂದ ಪಾಲಕ ಪೋಷಕರಿಂದ ಒಳ್ಳೇಯ ಪ್ರತಿಕ್ರೀಯೇ ಬರುತ್ತಿದೆ.
*
ಶಾಲೆಯ ಮುಗಿದ ನಂತರ ವಿಧ್ಯಾರ್ಥಿಗಳು ಈ ಹಿಂದೆ ಹರಟೆ ಹೊಡೆಯು ತ್ತಿದ್ದರು. ಆದರೆ ಇಂದು ಜಿ.ಪಂ ಅಧಿಕಾರಿ ರಾಹುಲ್ ಸಿಂಧೆ ಸಾಹೇಬರ ದೂರ ದೃಷ್ಠಿಯಿಂದ ಚೇತನ ಸಂಜೆ ಸ್ಮಾರ್ಟ ಕ್ಲಾಸ್ ಪ್ರಾರಂಭಿಸಿ ವಿಧ್ಯಾರ್ಥಿಗಳ ಕಲಿಕೆಗೆ ಮತ್ತಷ್ಟು ಬಲ ತುಂಬಿ ದ್ದಾರೆ . ಈ ಹಿಂದೆ ವಸತಿ ನಿಲಯಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಟ್ಯೋಶನ್ ನೀಡಲಾಗುತ್ತಿತ್ತು ಆದರೆ ಶಿಕ್ಷಕರಲ್ಲಿ ದಿನಂಪ್ರತಿ ಬರದೆ ಇರುವದರಿಂದ್ದ ಮಕ್ಕಳ ಶಿಕ್ಷಣ ಅಷ್ಟೋಂದು ಫಲ ನೀಡಿಲ್ಲ. ಆದರೆ ಈಗ ಮಕ್ಕಳಲ್ಲಿ ಒಳ್ಳೇಯ ಪ್ರತಿಕ್ರೀಯೆ ಬಂದಿದೆ ಶಾಲೆಯಲ್ಲಿ ಶಿಕ್ಷರು ಮಾಡಿದ ಬೋದನೆ ,ಆನ್ ಲೈನ ಶಿಕ್ಷಣ ಎರಡರಿಂದ ಸಾಕಷ್ಟು ತಿಳಿಯು ವಂತಾಗಿದೆ.
ಸಾಯಂಕಾಲ ಕ್ಲಾಸ್ ನಡೆಯುವುದರಿಂದ ನಿಲಯ ಪಾಲಕರು ಕೂಡಾ ಹಾಜರಿರಲು ಸಾಧ್ಯವಾಗಿದೆ. ಯಾವ ಸಂದರ್ಬದಲ್ಲಿ ಭೇಟಿ ನೀಡುತ್ತಾರೆ ಎಂಬ ಭಯ ಎಲ್ಲರಲ್ಲಿದೆ. ತಾಲೂಕಿನ ವಸತಿ ನಿಲಯಗಳಿಗೆ ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕರಾದ ರಾಮನ ಗೌಡ ಕನ್ನೊಳ್ಳಿಯವರು ಹಾಗೂ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ ಇಂಡಿಯವರು ಸಾಕಷ್ಟು ಬಾರಿ ಭೇಟಿ ನೀಡಿ ಆನ್ ಲೈನ್ ಕ್ಲಾಸ್ ನಡೇದಾಗ ಮಧ್ಯದಲ್ಲಿ ಮಕ್ಕಳಿಗೆ ಪ್ರಶ್ನೆ ಕೇಳಿ ನೀರಿಕ್ಷಿತ ಉತ್ತರ ಪಡೇದು ಖುಷಿ ಪಟ್ಟಿದ್ದಾರೆ.
ಪುಂಡಲಿಕ.ಪಿ ಗೊಂದಳಿ
ಮೇಟ್ರೀಕ ಪೂರ್ವ ವಸತಿ ನಿಲಯ ಸ್ಟೇಶನ್ ರಸ್ತೆ
ಕಣ್ಣಿ ಬಿಲ್ಡಿಂಗ್ ಇಂಡಿ.
ನಿಲಯ ಪಾಲಕ.
*
ಕೆಲ ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿಷಯ ಶಿಕ್ಷಕರ ಕೊರತೆ ಇರುವುದರಿಂದ ಮಕ್ಕಳ ಶಿಕ್ಷಣ ಕುಂಟಿತವಾಗಿ ಗುಣಮಟ್ಟದ ಶಿಕ್ಷಣ ಆಗುವುದಿಲ್ಲಹೀಗಾಗಿ ಬಡ ಮಕ್ಕಳಿಗೆ ಮಿಷನ್ ವಿಧ್ಯಾಪೂರ ಚೇತನ ಸಂಜೆ ಕಾರ್ಯಕ್ರಮದಡಿ ಆನ್ ಲೈನ್ ಕ್ಲಾಸ್ ಚೆನ್ನಾಗಿ ನಡೆ ದಿವೆ. ವಿಜ್ಞಾನ ವಿಷಯಕ್ಕೆ ಸಂಭAದಿಸಿದAತೆ ಪ್ರಾಯೋಗಿಕ ಪಾಠ ನಡೆಯುತ್ತವೆ, ವಿಜ್ಞಾನದ ಮಾದರಿಗಳು ಆನ್ ಲೈನ್ ನೋಡು ತ್ತಾ ವಿಧ್ಯಾರ್ಥಿಗಳು ಮಾಡಲ್ ಮಾಡುತ್ತಾರೆ ದೂರದೃಷ್ಠಿಯಿಂದ ಈ ವಿನೂತನ ಯೋಜನೆ ಜಾರಿ ಮಾಡಿದ ಸಿ.ಇ.ಓ ಸಾಹೇಬ ರಿಗೂ, ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಬಿ.ಜೆ ಇಂಡಿ.
ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ
ಪೋಟೋಕ್ಯಾಪ್ಸನ್ ೦೧ ಇಂಡಿ೦೧:
ಪೋಟೋಕ್ಯಾಪ್ಸನ್ ೦೧ ಇಂಡಿ೦೧-೦೨: ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಿಂಧೆ ಇವರ ಭಾವಚಿತ್ರ.