ನವದೆಹಲಿ: ಜಾಗತಿಕವಾಗಿ ಭಾರತ ಮತ್ತು ಅದರ ಉತ್ಪಾದನಾ ಸಾಮಗ್ರಿಗಳು ಸದ್ದು ಮಾಡುವಂತೆ, ದೇಶದ ಮಾಧ್ಯಮ ಕ್ಷೇತ್ರಗಳು ಕೂಡ ಈ ವಿಚಾರದಲ್ಲಿ ಇನ್ನಷ್ಟು ಬೆಳೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಭಿಪ್ರಾಯ ಪಟ್ಟರು.
ದೇಶದಲ್ಲಿ ಬೆಳೆದ ಉತ್ಪನ್ನ ಹಾಗೂ ಉತ್ಪಾದನಾ ಸಾಮಗ್ರಿಗಳು ವಿದೇಶಗಳಲ್ಲಿ ಬೇಡಿಕೆ ಹೊಂದಿವೆ. ನಮ್ಮವರು ಕೂಡ ಇದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಅಂತಾರಾಷ್ಟ್ರೀಯ ವಿವಿಧ ಸ್ತರಗಳಲ್ಲಿ ಭಾರತ ತನ್ನ ವೇದಿಕೆ ಹೊಂದಿದೆ. ಇನ್ನು ಮಾಧ್ಯಮ ಕ್ಷೇತ್ರ ಕೂಡ ಈ ನಿಟ್ಟಿನಲ್ಲಿ ಮುನ್ನಡೆ ಸಾಗಬೇಕಿದೆ ಎಂದು ಹೇಳಿದರು.
ಸದ್ಯದ ಕೋವಿಡ್ 19 ನ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶದ ಮಾಧ್ಯಮಗಳು ಈ ಕುರಿತಾಗಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತಿವೆ. ಈ ಮೂಲಕ ಸರ್ಕಾರದ ಕಾರ್ಯವೈಖರಿ ಕುರಿತಂತೆ ಹಾಗೂ ಮುಂಬರುವ ಯೋಜನೆಗಳ ಬಗ್ಗೆೆ ತಿಳಿ ಹೇಳುತ್ತಿವೆ ಎಂದು ಸೂಚ್ಯವಾಗಿ ತಿಳಿಸಿದರು.