Thursday, 19th September 2024

ಸ್ಟ್ರೈಕ್‌ ರೇಟ್‌ 135ಕ್ಕಿಂತ ಕಡಿಮೆ ಇದ್ದರೆ ಟಿ20 ತಂಡಕ್ಕೆ ಆಯ್ಕೆಯಿಲ್ಲ: ಶಾಹಿದ್ ಅಫ್ರಿದಿ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮುಖ್ಯ ಆಯ್ಕೆಗಾರರಾಗಿ ನೇಮಕವಾದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ಟಿ20 ತಂಡಕ್ಕೆ ಆಯ್ಕೆಯಾಗಲು ದೇಶೀಯ ಕ್ರಿಕೆಟ್‌ನಲ್ಲಿ ಬ್ಯಾಟರ್ ಸ್ಟ್ರೈಕ್‌ ರೇಟ್‌ 135ಕ್ಕಿಂತ ಕಡಿಮೆ ಇದ್ದರೆ, ಅಂತಹ ಆಟಗಾರರನ್ನು ಆಯ್ಕೆಗಾಗಿ ಪರಿಗಣಿಸುವುದಿಲ್ಲ ಎಂದು ಹೇಳಿ ದ್ದಾರೆ.

ನ್ಯೂಜಿಲೆಂಡ್ ಸರಣಿಗಾಗಿ ಟೆಸ್ಟ್ ತಂಡಕ್ಕೆ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಅವರಿಗೆ ಮತ್ತೆ ಅವಕಾಶ ನೀಡಿದ್ದರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.

ಪಾಕಿಸ್ತಾನ ಟಿ20 ತಂಡದಲ್ಲಿ ಹಲವು ಬ್ಯಾಟರ್ ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಳಪೆ ಸ್ಟ್ರೈಕ್‌ ರೇಟ್‌ಗಾಗಿ ಭಾರಿ ಟೀಕೆಗೆ ಗುರಿಯಾಗಿದ್ದರು. ಶಾಹಿದ್ ಅಫ್ರಿದಿ ಹೊಸ ನಿಮಯ ಜಾರಿ ಮಾಡಿ ರುವುದರಿಂದ ಟಿ20 ತಂಡದಲ್ಲಿ ಸಾಕಷ್ಟು ಬದಲಾವಣೆ ಯಾಗುವ ಸಾಧ್ಯತೆ ಇದೆ ಎನ್ನಲಾ ಗಿದೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಲ್ಲಿ ತ್ವರಿತವಾಗಿ ಹಲವು ಬದಲಾವಣೆ ಮಾಡಲಾಯಿತು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಯಲ್ಲಿ ಪಾಕಿಸ್ತಾನ ಹೀನಾಯ ಸೋಲನುಭವಿಸಿದ ಬಳಿಕ ಪಿಸಿಬಿ ಅಧ್ಯಕ್ಷ ರಮೀಝ್ ರಾಜಾರನ್ನು ವಜಾ ಮಾಡಲಾಯಿತು.

ನಜಮ್ ಸೇಥಿ ಅಧ್ಯಕ್ಷರಾಗಿ ನೇಮಕವಾದ ಬಳಿಕ, ಶಾಹಿದ್ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಹಂಗಾಮಿ ಮುಖ್ಯ ಆಯ್ಕೆಗಾರರಾಗಿ ನೇಮಕಗೊಂಡರು. 135 ಕ್ಕಿಂತ ಕಡಿಮೆ ಸ್ಟ್ರೈಕ್‌ ರೇಟ್‌ ಹೊಂದಿರುವ ಬ್ಯಾಟರ್ ಗಳಿಗೆ ಟಿ20 ತಂಡದಲ್ಲಿ ಸ್ಥಾನ ಇಲ್ಲ ಎಂದು ಹೇಳಿರುವ ಕ್ರಮ ಗೊಂದ ಲಕ್ಕೆ ಕಾರಣವಾಗಿದೆ.

ಪಾಕಿಸ್ತಾನ ನಾಯಕ ಬಾಬರ್ ಅಜಂ ಟಿ20 ಸ್ಟ್ರೈಕ್ ರೇಟ್ 127.81 ಇದೆ. ನಂಬರ್ 1 ಟಿ20 ಬ್ಯಾಟರ್ ಆಗಿದ್ದ ಮೊಹಮ್ಮದ್ ರಿಜ್ವಾನ್ ಸ್ಟ್ರೈಕ್ ರೇಟ್ 126.62 ಇದೆ. ಒಂದು ವೇಳೆ ಶಾಹಿದ್ ಅಫ್ರಿದಿ ತಮ್ಮ ನಿಯಮ ಕಟ್ಟು ನಿಟ್ಟಾಗಿ ಜಾರಿಗೆ ತಂದರೆ ಹಲವು ಪ್ರಮುಖ ಆಟಗಾರರು ಪಾಕಿಸ್ತಾನ ಟಿ20 ತಂಡದಿಂದ ಹೊರಗುಳಿಯಬೇಕಾಗುತ್ತದೆ.

Read E-Paper click here