ಮಂಗಳವಾರ ಡಾರ್ಜಿಲಿಂಗ್ ಜಿಲ್ಲೆಯ ಫನ್‌ಸಿಡೆವಾ ಪ್ರದೇಶದ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳ ಮೇಲೆ ಕಲ್ಲು ತೂರಾಟ ನಡೆದಿದ್ದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಎರಡು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಇದು ಎರಡನೇ ದಾಳಿ ಯಾಗಿದೆ.
ಮೂರು ದಿನಗಳಲ್ಲಿ ಎರಡು ಬಾರಿ ದಾಳಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಇದನ್ನು ಮಾಡುತ್ತಿರು ವವರನ್ನು ಗುರುತಿಸಿ ಅವರನ್ನು ಶಿಕ್ಷಿಸಬೇಕೆಂದು ಬಯಸುತ್ತೇವೆ ಎಂದರು.
ರೈಲ್ವೆ ಜನರ ಆಸ್ತಿಯಾಗಿದೆ. ರೈಲು ಓಡಿಸಲು ಹಣ ಖರ್ಚಾಗುತ್ತದೆ. ಇದು ರಾಜ್ಯಕ್ಕೆ ಅಪ ಮಾನ. ಇದು ನಮ್ಮ ದೇಶದ ಆಸ್ತಿ. ಇದನ್ನು ಏಕಾಏಕಿ ನಿಲ್ಲಿಸಿದರೆ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ. ಈ ಘಟನೆಯಿಂದ ನಾವು ಕಳವಳಗೊಂಡಿದ್ದೇವೆ ಎಂದು ಹೇಳಿದರು.
ಎರಡು ದಿನಗಳ ಹಿಂದೆ ಕೋಲ್ಕತ್ತಾದ ನಜ್ರುಲ್ ಮಂಚ್‌ನಲ್ಲಿ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ಕಾರ್ಯ ಕರ್ತರು ವಿಧ್ವಂಸಕ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ವಿಧ್ವಂಸಕ ರಾಜಕಾರಣ ಮಾಡಿಲ್ಲ ಎಂದು ಹೇಳಿದರೆ ಆಶ್ಚರ್ಯವಿಲ್ಲ ಎಂದರು.
Read E-Paper click here