ಬೆಂಗಳೂರು: ಗೊರಗುಂಟೆಪಾಳ್ಯದಿಂದ ಪಾರ್ಲೆ ಟೋಲ್ ಪ್ಲಾಜಾವರೆಗಿನ ತುಮಕೂರು ರಸ್ತೆಯ ಮೇಲ್ಸೇತುವೆ ಒಂದು ವರ್ಷ ವಾದರೂ ಭಾರಿ ವಾಹನಗಳ ಸಂಚಾರಕ್ಕೆ ಬಂದ್ ಆಗಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 30 ಕೋಟಿ ವೆಚ್ಚದಲ್ಲಿ 4 ಕಿಮೀ ಮೇಲ್ಸೇತುವೆ ದುರಸ್ತಿ ಕಾಮಗಾರಿಗೆ ಟೆಂಡರ್ ಕರೆದಿದೆ. ಮೇಲ್ಸೇತುವೆ ಕಾಮಗಾರಿಗೆ ಕನಿಷ್ಠ ಒಂದು ವರ್ಷ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಜನವರಿ 17 ರಂದು ಹರಾಜು ಪ್ರಕ್ರಿಯೆ ಪ್ರಾರಂಭವಾಗಲಿದೆ.
2010 ರಲ್ಲಿ ನಿರ್ಮಿಸಲಾದ ಫ್ಲೈಓವರ್ ಬಿಬಿಎಂಪಿಯ ದಾಸರಹಳ್ಳಿ ವಲಯದ ಮೂಲಕ ಹಾದುಹೋಗುತ್ತದೆ. ಡಿಸೆಂಬರ್ 25, 2021 ರಂದು ಒತ್ತಡದ ಕೇಬಲ್‌ಗಳು ಎರಡು ಪಿಲ್ಲರ್ ಗಳಲ್ಲಿ ಹಾನಿಗೊಳಗಾಗಿರುವುದು ಕಂಡುಬಂದಿದೆ. ಕೆಲ ದುರಸ್ತಿ ಕಾರ್ಯ ನಡೆದಿದ್ದರೂ ಲಘು ವಾಹನಗಳಿಗೆ ಮಾತ್ರ ತೆರೆಯಲಾಗಿದೆ.
ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದರೂ, ಮಧ್ಯರಾತ್ರಿ 12 ರಿಂದ ಮರು ದಿನ ಬೆಳಿಗ್ಗೆ 6 ಗಂಟೆಯವರೆಗೆ ಎಲ್ಲಾ ಸಂಚಾರಕ್ಕಾಗಿ ಫ್ಲೈಓವರ್ ಅನ್ನು ಮುಚ್ಚಲಾಗುತ್ತದೆ. ಉತ್ತರ, ಮಧ್ಯ ಮತ್ತು ಕರಾವಳಿ ಪ್ರದೇಶಗಳ ಕನಿಷ್ಠ 20 ಜಿಲ್ಲೆಗಳ ವಾಹನಗಳು ತುಮಕೂರು ರಸ್ತೆ ಮೂಲಕವೇ ಬೆಂಗಳೂರಿಗೆ ಬರುತ್ತವೆ.
ಮೇಲ್ಸೇತುವೆ ತುಮಕೂರು ಎಕ್ಸ್‌ಪ್ರೆಸ್‌ವೇ ಭಾಗ ವಾಗಿದ್ದು, ಭಾರೀ ಟ್ರಾಫಿಕ್ ಚಲನೆಯಿಂದಾಗಿ ಅದರ ಕೇಬಲ್‌ಗಳು ಸವೆದು ಹೋಗುತ್ತಿವೆ. ಪ್ರತಿದಿನ ಸುಮಾರು 50,000-60,000 ವಾಹನಗಳು ಫ್ಲೈಓವರ್ ಮೇಲೆ ಸಂಚರಿಸುತ್ತವೆ.
Read E-Paper click here