ಮಧ್ಯಪ್ರದೇಶದ ರೇವಾ ಜಿಲ್ಲೆಯ ಡುಮ್ರಿ ಗ್ರಾಮದಲ್ಲಿರುವ ದೇವಸ್ಥಾನದ ಗರ್ಭಗುಡಿಯ ಶಿಖರಕ್ಕೆ ಡಿಕ್ಕಿ ಹೊಡೆದು ಖಾಸಗಿ ಲಘು ವಿಮಾನ ಪತನಗೊಂಡಿತ್ತು. ಘಟನೆಯಲ್ಲಿ ತರಬೇತಿ ಪಡೆಯುತ್ತಿದ್ದ ಪೈಲಟ್ ಗಾಯಗೊಂಡಿರುವುದಾಗಿ ವರದಿ ವಿವರಿಸಿದೆ.
ಶುಕ್ರವಾರ ಅವಘಡ ಸಂಭವಿಸಿದೆ. ಲಘು ವಿಮಾನ ದೇವಸ್ಥಾನದ ಗರ್ಭಗುಡಿಗೆ ಡಿಕ್ಕಿ ಹೊಡೆದು ಪತನಗೊಂಡಿತ್ತು. ಗಾಯಗೊಂಡ ತರಬೇತು ಪೈಲಟ್ ನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾ ಗುತ್ತಿದೆ ಎಂದು ರೇವಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ತಿಳಿಸಿದ್ದಾರೆ.
ಪ್ರತಿಕೂಲ ಹವಾಮಾನ ಮತ್ತು ಅತಿಯಾದ ಮಂಜು ಕವಿದಿದ್ದರಿಂದ ಲಘು ವಿಮಾನ ದೇವಸ್ಥಾನದ ಗರ್ಭಗುಡಿಗೆ ಡಿಕ್ಕಿ ಹೊಡೆ ಯಲು ಕಾರಣವಾಗಿದೆ ಎಂದು ವರದಿ ವಿವರಿಸಿದೆ.
Read E-Paper click here