ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಹಿಂದೂ ಕುಟುಂಬಗಳ ಮೇಲಿನ ಭಯೋತ್ಪಾದಕ ದಾಳಿಯಿಂದ ಎಚ್ಚೆತ್ತ ಕೇಂದ್ರ ಸರ್ಕಾರ ಹೆಚ್ಚುವರಿ ಸೈನಿಕರನ್ನು ನಿಯೋಜಿಸುವ ಕ್ರಮಕ್ಕೆ ಮುಂದಾಗಿದೆ.
ಕಳೆದ ಎರಡು ವಾರಗಳ ಅವಧಿಯಲ್ಲಿ ನಡೆದ ಎರಡು ಭಯೋತ್ಪಾದಕ ದಾಳಿಯಿಂದ ರಾಜೌರಿಗೆ ಜಿಲ್ಲೆಗೆ ಸಿ.ಆರ್.ಪಿ.ಎಫ್ ನ (ಕೇಂದ್ರ ಮೀಸಲು ಪೊಲೀಸ್ ಪಡೆ) 1,800 ಸಿಬ್ಬಂದಿ ನಿಯೋಜಿಸುವ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮೂರು ದಿನಗಳಿಂದಲೂ ರಜೌರಿಯಲ್ಲಿ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಹೆಚ್ಚಿನ ಭದ್ರತಾ ಸಿಬ್ಬಂದಿ ನೇಮಿಸಿದ್ದು, ಶೋಧ ಮುಂದುವರಿದಿದೆ. ಭಾನುವಾರ ಭಯೋ ತ್ಪಾದಕ ದಾಳಿಯ ನಂತರ ಸೇನೆ, ಪೊಲೀಸರೊಂದಿಗೆ ಸಿ.ಆರ್.ಪಿ.ಎಫ್ ತುಕಡಿ ಗಳು ಕಾರ್ಯಾಚರಣೆ ಆರಂಭಿಸಿವೆ.
ಸಿ.ಆರ್.ಪಿ.ಎಫ್ ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಅಸ್ತಿತ್ವವ ಹೊಂದಿದೆ. ಇದರೊಂದಿಗೆ ಸಿಆರ್ಪಿಎಫ್ನ ಒಟ್ಟು ಬಲದ ಮೂರನೇ ಒಂದು ಭಾಗದಷ್ಟು 70ಕ್ಕೂ ಹೆಚ್ಚು ಬೆಟಾಲಿಯನ್ಗಳನ್ನು ಕೇಂದ್ರಾಡಳಿತ ಪ್ರದೇಶ ದಲ್ಲಿ ನಿಯೋಜಿಸಲಾಗಿದೆ.