Friday, 22nd November 2024

ಕನ್ನಡಕ್ಕಾಗಿ ಇಂಥ ಯಾವ ನಾಯಿಗಳೂ ಸಾಯುವುದಿಲ್ಲ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಶುಭಕಾರ್ಯಕ್ಕೆ ವಿರುದ್ಧವಾಗಿ ತಿಥಿ-ಶ್ರಾದ್ಧ ಸಮಾರಾಧನೆ ಮಾಡುವಂತೆ ಪ್ರತಿರೋಧ ಸಮ್ಮೇಳನವನ್ನು ಆಯೋಜಿಸಿಕೊಳ್ಳುವ ರನ್ನು ಬೆಂಬಲಿಸುತ್ತಿರುವವರು ದೇಶದ ಪರಂಪರೆಯ ಆಳ ಮತ್ತು ಅಗಲವನ್ನು ಹಾಳುಗೆಡಹುವ ಮತ್ತದೇ ಚೋರ ಗುರು ಚಾಂಡಾಳ ಶಿಷ್ಯರು. ಖರ್ಗೆಯವರ ಭಾಷೆಯಲ್ಲಿ ಹೇಳಬೇಕೆಂದರೆ ಕನ್ನಡಕ್ಕಾಗಿ ಇಂಥ ಯಾವ ನಾಯಿಗಳೂ ಸಾಯುವುದಿಲ್ಲ.

ಸನಾತನ ಪರಂಪರೆಯಲ್ಲಿ ಶ್ಲೋಕ, ಅಕ್ಷರ, ಗ್ರಂಥ, ಗದ್ಯ, ಪದ್ಯ, ಕಾವ್ಯ, ವಚನ, ಕೀರ್ತನೆ, ಸಾಹಿತ್ಯ ಇವೆಲ್ಲವೂ ಒಳಗೊಂಡ ‘ಜ್ಞಾನ’ ಪರಮ ಪೂಜ ನೀಯವಾದ್ದದು. ಇವೆಲ್ಲವನ್ನೂ ವಿದ್ಯಾದೇವತೆ ಸರಸ್ವತಿ ಮತ್ತು ಗಣಪತಿಗೆ ಸಮಾನವಾದದ್ದು ಎಂದು ಭಾವಿಸುವ ನಾಗರಿಕ ಪರಂಪರೆ ನಮ್ಮದು. ಇಂಥ ಜ್ಞಾನ ಪರಂಪರೆಯನ್ನು ‘ಸಾರಸ್ವತ ಲೋಕ’ ಎಂದು ಕರೆಯಲಾಗುತ್ತದೆ.
ನಮ್ಮ ಕನ್ನಡ, ಸಾವಿರಾರು ವರ್ಷಗಳಿಂದ ಆಡು ಭಾಷೆಯಾಗಿ ಬಳಕೆಯ ಲ್ಲಿದ್ದರೂ ಲಿಪಿಗೆ ಮಾತ್ರ ದೇವನಾಗರಿ ಭಾಷೆಯನ್ನು ಅವಲಂಭಿಸಲಾಗಿತ್ತು.

ಅಂಥ ಕಾಲದಲ್ಲಿ ಪಲ್ಲವರಿಂದ ಅವಮಾನಿತನಾಗಿ ಸ್ವಾಭಿಮಾನದಿಂದ ಕೆರಳಿದ ಹವ್ಯಕ ಬ್ರಾಹ್ಮಣ ಕುಲದವನಾದ ಕದಂಬ ವಂಶದ ಮಯೂರಶರ್ಮನು ಕನ್ನಡ ಸಾಮ್ರಾಜ್ಯವನ್ನು ಕಟ್ಟಲು ಜನಿವಾರ ಕಳಚಿಟ್ಟು ಮಯೂರವರ್ಮನಾದ. ಕನ್ನಡಕ್ಕೆ ಸ್ವಂತ ಲಿಪಿಯನ್ನು ಸೃಷ್ಟಿಸಿದ್ದಲ್ಲದೇ ಕನ್ನಡಿಗರು ಒಂದು ರಾಜ್ಯವನ್ನೂ ಗೆzಳಬಹುದೆಂದು ತೋರಿಸಿ ಕನ್ನಡ ಭಾಷೆಗೆ ‘ರಾಜಾ ಸ್ಥಾನ’, ‘ಗ್ರಂಥಾಸ್ಥಾನ’ ವನ್ನು ಕಟ್ಟಿಕೊಟ್ಟು ಕನ್ನಡಕ್ಕೆ ಬರವಣಿಗೆಯ ರೂಪ ಕೊಟ್ಟ ಮಯೂರಶರ್ಮ ರನ್ನು ಸರ್ವಕಾಲಿಕ ಪ್ರತಿಯೊಬ್ಬ ಕನ್ನಡಿಗನೂ ಸ್ಮರಿಸಬೇಕು.

ಮುಂದೆ ಬಸವಣ್ಣ, ಅಲ್ಲಮ ಆದಿಯಾಗಿ ಸಮಾಜದ ಅಂಕುಡೊಂಕುಗಳನ್ನು ಕಠಿಣ ಪದಗಳಲ್ಲಿ ಕಟ್ಟಿಕೊಟ್ಟಾಗ ವಚನ ಪ್ರಕಾರ ಹುಟ್ಟಿಕೊಂಡಿತು. ಆ ನಂತರ ಬಂದ ದಾಸರ ಕೀರ್ತನೆಯಲ್ಲೂ ಪುರಂದರದಾಸರು ‘ನಾಯಿ ಬಂದಿತಯ್ಯ’ ಎಂದು ಮನುಷ್ಯನ ಮನಸ್ಸನ್ನು ನಾಯಿಗೆ ಹೋಲಿಸಿ ಮುಲಾಜಿಲ್ಲದೇ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದರು. ತದನಂತರ ಸರ್ವಜ್ಞಮೂರ್ತಿ ಬಂದರಲ್ಲ, ಅವರ ತ್ರಿಪದಿಗಳಲ್ಲಿ ಕಾಣುವ ಮೊನಚು ತೀಕ್ಷ್ಣ ‘ಕೆರದಲ್ಲಿ ಹೊಡೆದಂತೆ’ ಇರುತ್ತಿತ್ತು.

ಆದರೆ ಅಂಥದೆಲ್ಲವೂ ಜ್ಞಾನದ ಒಂದು ಭಾಗವಾಗಿ ಸಮಾಜದ ಆರೋಗ್ಯವನ್ನು ಕಾಪಾಡುವಂಥ ಸಾಹಿತ್ಯ ಭಂಡಾರವಾಗಿತ್ತು.
ಇಂಥ ದೈವಸಮಾನವಾದ ಕನ್ನಡ ಸಾಹಿತ್ಯದೊಳಗೆ ನಮ್ಮ ದೇಶದ ನಾಗರಿಕತೆ ಮತ್ತು ಸಂಸ್ಕೃತಿಗೆ ವಿರುದ್ಧವಾಗಿ ಬಂದ ಕಮ್ಯುನಿಸ್ಟ್ ಸಿದ್ಧಾಂತವೆಂಬ ಮನೆಹಾಳು ಚಿಂತನೆಯನ್ನು ‘ಶೋಕಿಗಾಗಿ’ ತಲೆಗೆ ತುಂಬಿಕೊಂಡ ಇಲ್ಲಿನ ‘ಖಾಲಿಡಬ್ಬಗಳು’ ಬುದ್ಧಿಜೀವಿ ಎಂಬ ಪದಕ್ಕೆ ಹೊಲಸು ಮೆತ್ತಿ ತಲೆಗೆ ಸುತ್ತಿಕೊಂಡು ಮೆರೆಯಲಾರಂಭಿಸಿದರು.

ಸಮಾಜವನ್ನು ಕ್ರೋಡೀಕರಿಸಬೇಕಾದ ಸಮಯದಲ್ಲಿ ಜಾತಿ-ಮೇಲ್ಜಾತಿ-ಮನುವಾದ-ಕೋಮವಾದ, ಆರ್ಯ-ದ್ರಾವಿಡ ಎಂಬ ಹೆಸರಲ್ಲಿ ‘ವಿಚಾರವ್ಯಾಧಿ’ ಗಳಾಗಿ ಸಮಾಜವನ್ನು ಛಿದ್ರಗೊಳಿಸಲಾರಂಭಿಸಿದರು. ಇಂಥ ತಿಕ್ಕಲರುಗಳ ಮಧ್ಯೆ ಗುರುತಿಸಿ ಕೊಳ್ಳದೇ ಸತ್ಯ ವಿಚಾರಗಳನ್ನು ಮಂಡಿಸುತ್ತ ಹೋದವರಿಗೆ ‘ಬಲಪಂಥೀಯ’ ಎಂಬ ಅಡ್ಡಹೆಸರು ಕಟ್ಟಿದ ಈ ಅಡ್ಡಕಸುಬಿಗಳು ತಾವೆಲ್ಲರೂ ಎಡಗೈ ನೆಕ್ಕುವ ‘ಎಡಪಂಥೀಯ’ ಎಂಬ ಸ್ವಯಂ ಬಿರುದು ಕಟ್ಟಿಕೊಂಡರು.

ಇವರು ಕನ್ನಡದ ಸಾರಸ್ವತ ಲೋಕವನ್ನು ಆಪೋಷನ ತೆಗೆದುಕೊಂಡು ಸಾಹಿತ್ಯ ಪರಿಷತ್ತಿನಿಂದ ವಿಶ್ವವಿದ್ಯಾಲಯದವರೆಗೂ, ರಾಜಕೀಯದಿಂದ ಶಾಲೆಗಳವರೆಗೂ ದೇಶದ ಸಾಂಸ್ಕೃತಿಕ ವೈಚಾರಿಕತೆಯನ್ನು ಕುಲಗೆಡಿಸಿ ಭಾರತೀಯ ಸಾಧಕರನ್ನು ಮರೆಮಾಚೆ ದಾಳಿ-ದರೋಡೆಕೋರರು ಮತ್ತು ಮತಾಂಧ ಇಸ್ಲಾಂ ರಾಜರನ್ನು ‘ಭಾರತದ ಭಾಗ್ಯವಿಧಾತ’ ಎಂದು ಬೋಧಿಸಿದರು.

ಸನಾತನ ಪರಂಪರೆಯ ಜ್ಞಾನದೇಗುಲವಾದ ‘ಗುರುಕುಲ’ ಶಿಕ್ಷಣವನ್ನು ಹಾಳುಗೆಡವಿದ ಮೆಕಾಲೆಯಂಥ ಮಿಷನರಿ ಏಜೆಂಟನ್ನು ಮಹಾಪುರುಷನಂತೆ ತೋರಿಸಿದರು.ಈ ನಾಲಾಯಕ್ಕುಗಳ ಆಟಾಟೋಪ ಯಾವ ಮಟ್ಟಕ್ಕೆ ತಲುಪಿತೆಂದರೆ ಕನ್ನಡದ ಹಬ್ಬವಾದ ಅಖಿಲ ಭಾರತ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ ಸ್ಥಾನಕ್ಕೆ ಎಂದೋ ನಾಮಕರಣವಾಗಬೇಕಿದ್ದ ಹಿರಿಯ
ಸಂಶೋಧಕರು ಮತ್ತು ಸಾಹಿತಿಗಳಾದ ನಾಡೋಜ ಡಾ.ಎಂ.ಚಿದಾನಂದಮೂರ್ತಿಯವರಿಗೆ ಅದು ದೊರಕದಂತೆ ಮಾಡಿದರು.

ಪ್ರತಿ ಬಾರಿ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಚಿಮೂ ಅವರ ಹೆಸರು ಬಂದರೂ ಅದನ್ನು ದಕ್ಕದಂತೆ ಮಾಡಿದರು. ಇದರಿಂದ ರೋಸಿ ಹೋದ ಚಿಮೂ ಅವರು ಪತ್ರಿಕಾಗೋಷ್ಠಿಯೊಂದನ್ನು ಕರೆದು ಭವಿಷ್ಯದಲ್ಲಿ ತನ್ನ ಹೆಸರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸದಿರುವಂತೆ ಎಚ್ಚರಿಸಿದ್ದರು. ಚಿಮೂ ಅವರಿಗೆ ಘೋಷಣೆ ಮಾಡಲಾಗಿದ್ದ ಗೌರವ ಡಾಕ್ಷರೇಟ್ ಪುರಸ್ಕಾರವನ್ನು ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನೇ ದಾರಿತಪ್ಪಿಸಿ ದೊರಕದಂತೆ ಮಾಡಿದ್ದು ಸಹ ಇದೇ ಶಕ್ತಿಗಳು.

ಇಂಥ ನಾಮಕೆ ವಾಸ್ತೇ ‘ಸಾಯಿತಿ’ಗಳ ಮಧ್ಯೆ ಚಿಮೂ ಅವರಂತೆ ವಸ್ತುನಿಷ್ಠ ಇತಿಹಾಸವನ್ನು ಹೇಳುತಿದ್ದ ಡಾ.ಎಸ್.ಎಲ್.ಭೈರಪ್ಪ ನವರನ್ನು ಮೈಸೂರಿನ ಇರುವ ‘ರಂಗಾಯಣ’ ವೇದಿಕೆಗೆ ಮೂರು ದಶಕಗಳಿಂದ ಪ್ರವೇಶಿಸದಂತೆ ನೋಡಿಕೊಂಡರು. ಮೊನ್ನೆ ಅದೇ ರಂಗಾಯಣಕ್ಕೆ ಅಡ್ಡಂಡ ಕಾರ್ಯಪ್ಪನವರು ಭೈರಪ್ಪನವರನ್ನು ಆಹ್ವಾನಿಸಿ ‘ಟಿಪ್ಪು ನಿಜಕನಸುಗಳು’ ಕೃತಿ ಬಿಡುಗಡೆಗೊಳಿಸಿದರು.

ಇಂಥ ಕಿತ್ತುಹೋದ ಸಾಹಿತಿಗಳಿಗಿಂತ ಚಲನಚಿತ್ರ ಮಾಧ್ಯಮದಲ್ಲಿದ್ದ ಕು.ರಾ.ಸೀತರಾಮ ಶಾಸ್ತ್ರಿ, ಕಣಗಾಲ್ ಪ್ರಭಾಕರ
ಶಾಸಿ, ಚಿ.ಸದಾಶಿವಯ್ಯ, ಎಸ್. ಕೆ.ಕರಿಂಖಾನ್, ಚಿ.ಉದಯಶಂಕರ್, ಆರ್.ಎನ್.ಜಯಗೋಪಾಲ, ವಿಜಯನರಸಿಂಹ,
ಹುಣಸೂರು ಕೃಷ್ಣಮೂರ್ತಿಯವರನ್ನು ಸಮಸ್ತ ಕನ್ನಡಿಗರು ಮರೆಯಲಾಗುವುದಿಲ್ಲ.

ಇಂಥವರ ಪಾದತೊಳೆದು ನೀರು ಕುಡಿದರೂ ಈ ತಿಪ್ಪೆ ಸಾಹಿತಿಗಳು ಪಾವನವಾಗುವುದಿಲ್ಲ. ಹೆಸರಿಗೆ ಮಾತ್ರ ಸಾಹಿತಿ
ಗಳು, ವಿಚಾರವಾದಿಗಳು, ಪ್ರಗತಿಪರರು ಎನಿಸಿಕೊಂಡವರು ಹುಟ್ಟಿಸಿದ ಪುಸ್ತಕದ ಹೆಸರನ್ನು ಒಂದು ಹತ್ತು ಜನ ಥಟ್ ಅಂತ ಹೇಳಲಿ ನೋಡೋಣ! ಭೈರಪ್ಪನವರ ಕೃತಿಗಳು ದೇಶೀಯವಾಗಲ್ಲದೇ ವಿದೇಶಗಳಲ್ಲೂ ವಿಶ್ವಖ್ಯಾತಿಗಳಿಸಿದೆ. ಆದರೆ
ವಿಚಾರವ್ಯಾದಿಗಳ ಕೃತಿಗಳನ್ನು (ಅಸಲಿಗೆ ಬರೆದಿದ್ದರೇ ತಾನೇ?) ಕ್ಷೌರದಂಗಡಿಯಲ್ಲಿಟ್ಟರೂ ಯಾರೂ ಮುಟ್ಟುವುದಿಲ್ಲ. ಹೀಗಿದ್ದರೂ ಇವರು ಸಾಹಿತಿಗಳು, ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳು, ಕುಲಸಚಿವರು, ಪೊಫೆಸರ್‌ಗಳು, ಪ್ರಾಧ್ಯಾ
ಪಕರು, ಚಿಂತಕರು ಇತ್ಯಾದಿ… ಇವರಿಂದ ಪಾಠ ಕಲಿತವರು ಮಹಿಷಾಸುರನ ಉತ್ಸವ ಮಾಡುತ್ತಾರೆಯೇ ಹೊರತು ನಾಡದೇವಿಯ ಉತ್ಸವ ಮಾಡುವುದಿಲ್ಲ.

ಎಲ್ಲದಕ್ಕೂ ಒಂದು ಮಿತಿ ಮತ್ತು ಕೊನೆ ಇರುತ್ತದೆಂಬಂತೆ ಯಾವಾಗ ದೇಶದಲ್ಲಿ ಬಿಜೆಪಿ ಸರಕಾರಗಳು ಸ್ಥಾಪನೆಯಾದವೋ ಆಗಲೇ ಈ ತಲೆಮಾಸಿದವರೆಲ್ಲ ಬಿಲದಿಂದ ಹೊರಬಂದ ಹೆಗ್ಗಣಗಳಂತೆ ‘ಅಸಹಿಷ್ಣುತೆ’ ಪದವನ್ನು ಬಳಸಿಕೊಂಡು ‘ನಗದು ರಹಿತ’ ಪ್ರಶಸ್ತಿ ವಾಪ್ಸಿ ಮೂಲಕ ವೃದ್ಧನಾರಿ ಪತಿವ್ರತಾ ನಾಟಕವಾಡಿದರು. ಇವರುಗಳಿಗಿಂತ ನಮ್ಮ ಆಟೋ-ಲಾರಿ
ಚಾಲಕರೇ ಎಷ್ಟೋ ಮೇಲು. ತಮ್ಮ ವಾಹನದ ಮೇಲೆ ಜೀವನಸಾರ ಸಾಹಿತ್ಯವನ್ನು ಬರೆದುಕೊಂಡಿರುತ್ತಾರೆ.

ಇವರದ್ದೇನಿದ್ದರೂ ಸಮತಟ್ಟಾದ ನೆಲದಲ್ಲಿ ಬಿಲತೋಡಿ ಕುಲಗೆಡಿಸುವ ಹೆಗ್ಗಣದಂತೆ, ಸಮಾಜದಲ್ಲಿ ಸಾಮರಸ್ಯ ಹಾಳುಮಾಡುವುದಲ್ಲದೇ ‘ಶುಭ ನುಡಿಯೋ ಸೋಮ ಎಂದರೆ ಗೂಬೆ ಕಾಣ್ತ ಮಾಮಾ’ ಎಂಬಂತೆ ಸಾಹಿತ್ಯ ಸಮ್ಮೇಳನದಂಥ
ಪವಿತ್ರವಾದ ವೇದಿಕೆಗೆ ‘ಪ್ರತಿರೋಧ’ವೆಂಬ ಸೂತಕದ ತಿಥಿ ಮಾಡಿ ಮತ್ತೇ ಬಿಲದೊಳಗೆ ಅವಿತು ಹೋಗುವುದು. ಇಂಥವರಿಗೆ ಹೆಗಲು ನೀಡುತ್ತಿರುವುದು ದೇಶ ಮತ್ತು ನಾಡು ನಡುವಿನ ಮಹತ್ವದ ಜ್ಞಾನವಿಲ್ಲದ, ದೇಶದ ಒಕ್ಕೂಟ ವ್ಯವಸ್ಥೆ, ಸಂವಿಧಾನದ ಆಶಯಗಳ ಅರಿವಿಲ್ಲದ ಕೆಲ ಹೊಟ್ಟೆಪಾಡಿನ ‘ಪೋಸ್ಟ್ ಪೇಡ್-ಪ್ರೀಪೇಡ್’ ಗಿರಾಕಿಗಳು. ಮತ್ತು ‘ಆ ದಿನಗಳು’ ದಾಟಿದ ಹೆಂಗಸಿನಂತೆ ಸಾಹಿತ್ಯ ಕೃಷಿಯನ್ನು ಎಂದೋ ನಿಲ್ಲಿಸಿದವರು.

ದುರಂತವೆಂದರೆ ಇವರು ಕನ್ನಡವೇ ಬೇರೆ, ಸಂಸ್ಕೃತಿಯೇ ಬೇರೆ ಎನ್ನುವ ಅವಿವೇಕಿಗಳಾಗಿದ್ದಾರೆ. ಇವರ ಪ್ರಕಾರ ಕನ್ನಡವೆಂದರೆ ‘ಓರಾಟ’, ಸಂಸ್ಕೃತಿ ಎಂದರೆ ಕೋಮುವಾದ-ಮನುವಾದ-ಬ್ರಾಹ್ಮಣ್ಯ. ಇಂಥವರಿಂದ ಕನ್ನಡವನ್ನು ಕಾಪಾಡಿ ಕೊಳ್ಳುವ ದರಿದ್ರ ಕನ್ನಡಿಗರಿಗಿಲ್ಲ. ಇಂಥವರು ನಾಳೆ ತಾಯಿ ಭುವನೇಶ್ವರಿಯನ್ನು ಹಣೆತುಂಬ ಕುಂಕುಮ ತಿಲಕವಿಟ್ಟ ಮುತ್ತೈದೆಯ ‘ದೇವಿ’ಯಂತೆ ತೋರಿಸುವುದೂ ಬ್ರಾಹ್ಮಣ್ಯ-ಕೋಮುವಾದವೆಂದು ತೀರ್ಮಾನಿಸಿ ಆಕೆಯನ್ನು ವಿಧವೆಯಂತೆ ತೋರಿಸಿ ಆಕೆಯ ಮೂರ್ತಿಗೂ ಶಿಲುಬೆ ಏರಿಸಿ, ಹಿಜಾಬ್ ಹಾಕಿದರೂ ಆಶ್ಚರ್ಯವಿಲ್ಲ.

ಹೀಗಾಗಲೇ ಇಂಥವರಿಗೆ ಜೈಹಿಂದ್, ಜೈ ಭಾರತಮಾತೆ, ವಂದೇಮಾತರಂ, ಜೈ ಭುವನೇಶ್ವರಿದೇವಿ ಎಂಬ ಘೋಷಣೆ ಗಳಿಗೆ ಲಕ್ವಾ ಹೊಡೆದಿದ್ದು ಬರಿಯ ‘ಜೈ ಕರ್ನಾಟಕ’ ಎಂಬಷ್ಟಕ್ಕೇ ಸೀಮಿತವಾಗಿದೆ. ಕನ್ನಡದೇವಿಯನ್ನು ‘ಭುವನೇಶ್ವರಿ, ರಾಜರಾಜೇಶ್ವರಿ, ಕನ್ನಡಕುಲದರಸಿ’ ಎಂದು ಅಲಂಕರಿಸುವ ಪದಗಳು ವರನಟ ಡಾ.ರಾಜ್ ಅವರೊಂದಿಗೇ ಅಂತ್ಯವಾಗಿ ಹೋಗಿದೆ.

ನಿಜವಾಗಲೂ ಕನ್ನಡ ಸಾಹಿತ್ಯದ ಪದಕೋಶವನ್ನು ಸಾಮಾನ್ಯ ಕನ್ನಡಿಗರಿಗೂ ಪರಿಚಯಿಸಿ, ಕನ್ನಡದ ಸೊಗಡನ್ನು ಉಳಿಸಿಕೊಳ್ಳುವ ಜಾಗೃತ ಕೆಲಸ ಮಾಡುತ್ತಿರುವವರು ಪ್ರೊಫೆಸರ್ ಕೃಷ್ಣೇಗೌಡರು, ಹಿರೇಮಗಳೂರು ಕಣ್ಣನ್, ಗಂಗಾವತಿ ಪ್ರಾಣೆಶ್, ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ.ನಾ.ಸೋಮೇಶ್ವರ ಅವರಂಥ ಪರಿಶುದ್ಧ ಕನ್ನಡಿಗರೇ ಹೊರತು ಪ್ರತಿರೋಧ ರೋಗಪೀಡಿತರು, ಅರ್ಬನ್ ನಕ್ಸಲ್ ಏಜೆಂಟುಗಳು, ಗೌರಿ ಬ್ರಾಂಡ್ ಗಿರಾಕಿಗಳಿಂದ ಕನ್ನಡಕ್ಕೆ ಎಳ್ಳಷ್ಟೂ ಉಪಯೋಗವಿಲ್ಲ. ಇಂಥವರ ಹೆಸರುಗಳನ್ನು ಕೇಳಿದರೆ ನೇಣುಬಿಗಿದುಕೊಂಡು ನೇತಾಡುತ್ತಿರುವ ಹೆಣದ ಕೊಠಡಿಯ ಸೂತಕ ಭಾಸವಾತ್ತದೆಯೇ ಹೊರತು ನಾದಸ್ವರ, ಝಗಮಗಿಸುವ ದೀಪ, ಘಂಟಾನಾದಗಳ ನಡುವಿನ ‘ಸಾರಸ್ವತ’ ಲೋಕವಲ್ಲ.

ಇದೀಗ ಹಾವೇರಿಯಲ್ಲಿ ನಡೆಯುತ್ತಿರುವ ೮೬ನೇ ಸಾಹಿತ್ಯ ಸಮ್ಮೇಳನದಲ್ಲಿ ಬೇಕಂತಲೇ ‘ಧರ್ಮ- ಜಾತಿ’ ಜಂತುಗಳನ್ನು ಹರಿಬಿಡುವ ಪ್ರಯತ್ನ ಮಾಡುತ್ತಿದ್ದಾರೆ. ಶುಭಕಾರ್ಯಕ್ಕೆ ವಿರುದ್ಧವಾಗಿ ಶ್ರಾದ್ಧ ಸಮಾರಾಧನೆ ಮಾಡುವಂತೆ ವಿಲವಿಲ
ಪ್ರತಿರೋಧ ಸಮ್ಮೇಳನವನ್ನು ಆಯೋಜಿಸಿಕೊಂಡಿದ್ದಾರೆ. ಇಂಥವರಿಗೆ ಬೆಂಬಲಿಸುತ್ತಿರುವವರು ದೇಶದ ಪರಂಪರೆಯ ಆಳ ಮತ್ತು ಅಗಲವನ್ನು ಹಾಳುಗೆಡಹುವ ಮತ್ತದೇ ಚೋರುಗುರು ಚಂಡಾಳ ಶಿಷ್ಯರು.

ಮಲ್ಲಿಕಾರ್ಜುನ ಖರ್ಗೆಯವರ ಭಾಷೆಯಲ್ಲಿ ಹೇಳಬೇಕೆಂದರೆ ಕನ್ನಡಕ್ಕಾಗಿ ಇಂಥ ಯಾವ ನಾಯಿಗಳೂ ಸಾಯುವುದಿಲ್ಲ. ಇನ್ನು ಕನ್ನಡದಲ್ಲಿ ಸಾಹಿತ್ತಿಕ ಸಾಧನೆ ಮಾಡಿ ಕನ್ನಡವನ್ನು ಸ್ವಚ್ಛವಾಗಿ ಬಳಸುವ, ಉಚ್ಚವಾಗಿ ಬರೆಯುವ ಶಾಲೆ ಕಾಲೇಜು
ಮಟ್ಟದಲ್ಲಿರುವ ಯುವ ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆತಂದು ಸಾಹಿತಿಗಳನ್ನಾಗಿ ಪರಿಚಯಿಸುವಂತಾಗಲಿ. ಅವರಲ್ಲೂ ಆಲೂರು ವೆಂಕಟರಾಯರು, ಕುವೆಂಪು, ಬೇಂದ್ರೆ, ಕೈಲಾಸಂ, ಹುಣಸೂರು ಕೃಷ್ಣಮೂರ್ತಿ, ಚಿ.ಉದಯಶಂರ್ಕ, ಚಿಮೂ, ಭೈರಪ್ಪ ಮುಂತಾದ ಉತ್ಕೃಷ್ಟ ಸಾಹಿತಿಗಳು ಚಿಗುರೊಡೆಯುವಂತೆ ಮಾಡಲಿ.

ಪತ್ರಿಕೋದ್ಯಮದಲ್ಲಿ ಶ್ರೇಷ್ಠಮಟ್ಟದ ಕನ್ನಡವನ್ನು ಬಳಸಿ ಬೆಳೆಸುತ್ತಿರುವ ಪತ್ರಕರ್ತರಿಗೆ ಹೆಚ್ಚಿನ ಅವಕಾಶ ನೀಡುವಂತ್ತಾಗಲಿ. ಎಚ್.ಡಿ.ರೇವಣ್ಣನವರ ಭಾಷೆಯಲ್ಲಿ ಹೇಳಬೇಕೆಂದರೆ ಇಂದು ಗ್ರಂಥಾಲಯಕ್ಕೆ ಹೋಗಿ ಮೇಲೆ ಹೇಳಲಾದ ‘ಪುಟಗೋಸಿಗಳು’ ಬರೆದಿರುವ ಮಹಾಕಾವ್ಯ- ಗ್ರಂಥಗಳನ್ನು ಹುಡುಕುವುದಕ್ಕಿಂತ ಪತ್ರಿಕೆಗಳಲ್ಲಿ ದಿನನಿತ್ಯ ಕನ್ನಡವನ್ನು ಓದುವಂತೆ ಮಾಡುವ ಪತ್ರಕರ್ತರು ಕನ್ನಡಿಗರಿಗೆ ಹೆಚ್ಚು ಪರಿಚಿತ.

ಸಮಾಧಾನಕರ ಸಂಗತಿಯೆಂದರೆ ಕನ್ನಡಿಗರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ತಿಥಿ ಬ್ರಾಂಡ್ ‘ಸಾಯಿತಿಗಳು’ ಬದುಕಿದ್ದರೂ ಮಹೇಶ್ ಜೋಶಿಯಂಥ ಕ್ರಿಯಾಶೀಲ ವ್ಯಕ್ತಿಯನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಿರಿಗೆ ಚುನಾಯಿಸಿದ್ದಾರೆ. ಜೋಶಿಯವರು ಬಂದಿದ್ದೇ ಬಂದಿದ್ದು ಇವರುಗಳು ಅಂಡು ಸುಟ್ಟ ಶುನಕಗಳಂತೆ ರೋದಿಸುತ್ತಿದ್ದಾರೆ. ಪರಿಷತ್ತಿನ ನಿಯಮದಂತೆಯೇ ಬಹುಮತಗಳಿಸಿ ಆಯ್ಕೆಯಾದ ಜೋಶಿಯವರು ಹೇಳಿಕೇಳಿ ಬ್ರಾಹ್ಮಣ ಕುಲದವರು.

ನಾಡಿನ ಇಡೀ ಕನ್ನಡ ಸಾಹಿತ್ಯದ ಮುಖವಾಣಿಯಂಥ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಇವರ ಸಾರಥ್ಯದಲ್ಲಿ
ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಕಳಂಕ ತರುವ ಪೀಡೆಗಳ ಸಂತತಿಯೂ ಇದೆ. ಅದಕ್ಕಾಗಿ ಜೋಶಿಯವರು ‘ಹಿಟ್, ಆಲೌಟ್, ಟಿಕ್‌ಟ್ವೆಂಟಿ, ಹಾರ್ಪಿಕ್, ಬ್ಲೀಚಿಂಗ್ ಪೌಡರ್’ ಇಟ್ಟುಕೊಳ್ಳುವುದು ಒಳ್ಳೆಯದು!