Thursday, 19th September 2024

ಬಿಜೆಪಿ “ಸೇನಾ ವಿರೋಧಿ”: ರಾಹುಲ್ ಗಾಂಧಿ ಟೀಕೆ

ಚಂಡೀಗಢ: ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಸರ್ಕಾರ ಅಗ್ನಿಪಥ್ ಯೋಜನೆ ಪರಿಚಯಿಸಿದ ಸುಮಾರು ಆರು ತಿಂಗಳ ನಂತರ, ರಾಹುಲ್ ಗಾಂಧಿ ಅವರು ಯೋಜನೆಯ ಬಗ್ಗೆ ಟೀಕೆ ಮುಂದುವರಿ ಸಿದ್ದಾರೆ. ಇದಕ್ಕೆ ಬಿಜೆಪಿ ಅವರನ್ನು “ಸೇನಾ ವಿರೋಧಿ” ಎಂದು ಆರೋಪಿಸಿದೆ.
ತಮ್ಮ ಭವಿಷ್ಯ ಹಾಳಾಗಿದೆ ಎಂದು ಸೇನೆಯ ಯುವ ಅಭ್ಯರ್ಥಿಗಳು ತಮ್ಮ ಬಳಿ ನೋವು ತೋಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಹರಿಯಾಣದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತದ ಮೊದಲ ದಿನದ ರ್ಯಾಲಿಯಲ್ಲಿ ಮಾತನಾಡಿ, ಸನೋಲಿ-ಪಾಣಿಪತ್ ರಸ್ತೆಯಿಂದ ಯಾತ್ರೆ ಪುನರಾರಂಭವಾಯಿತು. ಪಾಣಿಪತ್ನಲ್ಲಿ ನಡೆದ ರ್ಯಾಲಿ ಯನ್ನು ದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ “ಮೊದಲು ಅಗ್ನಿಪಥ್ ಯೋಜನೆ ಏನೆಂದು ನನಗೆ ಅರ್ಥ ಮಾಡಿಸಿ ಎಂದರು.

ಬಿಜೆಪಿಯವರು ತಮ್ಮ ನಾಯಕರು ದೇಶಭಕ್ತರು ಎಂದು ಹೇಳುತ್ತಾರೆ. ಅವರ ದೇಶಭಕ್ತಿ ನನಗೆ ಅರ್ಥವಾಗುವಂತೆ ಮಾಡಿ. ನಾನು ಅಗ್ನಿವೀರ್ ವಿಷಯವನ್ನು ಪ್ರಸ್ತಾಪಿಸಿದಾಗ, ನಾನು ರಕ್ಷಣಾ ಪಡೆಗಳ ವಿರುದ್ಧ ಮಾತನಾಡುತ್ತಿದ್ದೇನೆ ಎಂದು ಬಿಜೆಪಿ ಹೇಳುತ್ತದೆ, ದೇಶದ ರಕ್ಷಣಾ ಪಡೆಗಳ ಬಗ್ಗೆ ನನಗೆ ಸಂಪೂರ್ಣ ಗೌರವವಿದೆ.

ಕೇವಲ ಶೇಕಡಾ 25ರಷ್ಟು ಮಂದಿ ಹೊಸ ನೇಮಕಾತಿಗಳನ್ನು ಮಾಡಿದ ನಾಲ್ಕು ವರ್ಷಗಳ ನಂತರ ನಿಯಮಿತ ಉದ್ಯೋಗ ಗಳನ್ನು ಪಡೆಯುತ್ತಾರೆ. ಉಳಿದವರು ನಿರುದ್ಯೋಗಿಗಳಾಗಿ ಉಳಿಯುತ್ತಾರೆ ಎಂದು ಇತ್ತೀಚೆಗೆ ಬಿಡುಗಡೆಯಾದ CMIE ನಿರುದ್ಯೋಗ ದತ್ತಾಂಶ ಹೇಳುತ್ತದೆ.