ಜಾರ್ಖಂಡ್: ಶ್ರೀ ಸಮ್ಮದ್ ಶಿಖರ್ ಜಿಲ್ಲೆಯನ್ನು ಪ್ರವಾಸಿ ಸ್ಥಳವಾಗಿ ಘೋಷಿಸಿದ ಜಾರ್ಖಂಡ್ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲೇಖನ ವ್ರತ ಕೈಗೊಂಡಿದ್ದ ಜೈನ ಸನ್ಯಾಸಿ ಸಮರ್ಥ್ ಸಾಗರ್ (74) ಮೃತಪಟ್ಟಿದ್ದಾರೆ.
ಜೈಪುರದಲ್ಲಿ ಸಮರ್ಥ್ ಸಾಗರ್ ನಿಧನರಾಗಿದ್ದು, ಕಳೆದ 5 ದಿನಗಳಿಂದ ಸಲ್ಲೇಖನ ವ್ರತ ಕೈಗೊಂಡಿದ್ದರು. ಇದಕ್ಕೂ ಮುನ್ನ ಇದೇ ವಿಷಯವಾಗಿ ಜೈನ ಸನ್ಯಾಸಿ ಸುಗ್ಯೇಯಸಾಗರ ಮಹಾರಾಜ್ (72) ಸರ್ಕಾರದ ನಿರ್ಧಾರವನ್ನು ಖಂಡಿಸಿ ಉಪವಾಸ ಕೈಗೊಂಡು ದೇವಾಲಯದಲ್ಲಿ ಸಾವನ್ನಪ್ಪಿದ್ದರು.
ಜಾರ್ಖಂಡ್ ನ ಪಾರಸ್ನಾಥ್ ಕೇಂದ್ರ ಜೈನ ತೀರ್ಥಯಾತ್ರೆ ಕ್ಷೇತ್ರವಾಗಿದ್ದು, ಅಲ್ಲಿನ ರಾಜ್ಯ ಸರ್ಕಾರ ಅದನ್ನು ಪ್ರವಾಸಿ ಕ್ಷೇತ್ರ ವನ್ನಾಗಿ ಮಾರ್ಪಾಡು ಮಾಡುವುದಾಗಿ ಘೋಷಿಸಿತ್ತು. ಇದರ ವಿರುದ್ಧ ಜೈನ ಸಮುದಾಯ ತಿರುಗಿಬಿದ್ದಿದೆ.
ಆದರೆ ಕೇಂದ್ರ ಪಾರಸ್ ನಾಥ್ ಹಿಲ್ಸ್ ನಲ್ಲಿ ಎಲ್ಲಾ ರೀತಿಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ತಡೆ ನೀಡಿದ್ದು, ಜೈನರ ಭಾವನೆಗಳನ್ನು ರಕ್ಷಿಸುವುದಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.