Saturday, 23rd November 2024

ವಂಚನೆ ಪ್ರಕರಣ: ಕೊಚ್ಚರ್ ದಂಪತಿಗೆ ರಿಲೀಫ್‌

ನವದೆಹಲಿ: ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಅವರ ಬಂಧನ ಗಳು ಕಾನೂನಿನ ಪ್ರಕಾರವಾಗಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿಕೆ ನೀಡಿದ ಬೆನ್ನಲ್ಲೇ ವಂಚನೆ ಪ್ರಕರಣದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಚಂದಾ ಕೊಚ್ಚರ್ ಖಾಸಗಿ ವಲಯದ ಬ್ಯಾಂಕ್‌ನ ಮುಖ್ಯಸ್ಥರಾಗಿದ್ದಾಗ ವಿಡಿಯೋಕಾನ್ ಗ್ರೂಪ್‌ಗೆ ಒದಗಿಸಿದ 3,000 ಕೋಟಿ ರೂ. ಹೆಚ್ಚು ಸಾಲದಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ಪ್ರಕರಣದಲ್ಲಿ ಡಿಸೆಂಬರ್ 23 ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಅವರನ್ನು ಬಂಧಿಸಿತ್ತು.

ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ತನ್ನ ಬಂಧನ ಕಾನೂನುಬಾಹಿರವಾಗಿದೆ. ತನಿಖೆ ಆರಂಭಿಸಲು ಕಾಯಿದೆಯ ಸೆಕ್ಷನ್ 17A ಅಡಿಯಲ್ಲಿ ಅನುಮತಿ ಕಡ್ಡಾಯವಾಗಿದೆ ಹಾಗೂ ಈ ತನಿಖೆಯನ್ನು ಪ್ರಾರಂಭಿಸಲು ಸಂಸ್ಥೆಯು ಅಂತಹ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ಕೊಚ್ಚರ್‌ ದಂಪತಿ ನ್ಯಾಯಾಲಯದ ಮುಂದೆ ವಾದಿಸಿದರು.

Read E-Paper click here