ಬೆಂಗಳೂರು: ಸ್ಯಾಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿ ಸಿಸಿಬಿಯಿಂದ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಗುತ್ತದೆ ಎಂದು ವಕೀಲ ರವಿಶಂಕರ್ ತಿಳಿಸಿದ್ದಾರೆ.
ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆೆ ಟೆಸ್ಟಿಿಂಗ್ ಆಗಿದ್ಯಾ ?ರಾಗಿಣಿ ಕೇವಲ ಆರೋಪಿ, ಅಪರಾಧಿಯಲ್ಲ ಎಂದು ರಾಗಿಣಿಗೆ ಜಾಮೀನು ಸಿಗಲಿದೆ ಎಂದು ಹೇಳಿದರು. ಅವರು ಮಹಿಳೆ ಎಂಬ ಕಾರಣಕ್ಕೆ ಬೇಲ್ ಸಿಗುವ ಸಾಧ್ಯತೆ ಇದೆ ಎಂದರು. ಈ ನಡುವೆ ಕಾನೂನು ಸಲಹೆಗಾರರ ಮೂಲಕ ಎರಡನೇ ಬಾರಿ ರಾಗಿಣಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆದರೆ, ತನಿಖಾಧಿಕಾರಿಗಳು ನಟಿಯರಿಗೆ ಜಾಮೀನು ಸಿಗದಂತೆ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಿದೆ ಎಂದು ತಿಳಿದು ಬಂದಿದೆ.