ಭೋಪಾಲ್: ಸರ್ಕಾರಿ ಸ್ವಾಮ್ಯದ ಗಾಂಧಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನಲ್ಲಿ ಮಹಿಳಾ ವೈದ್ಯೆಯೊಬ್ಬರು ಅರಿವಳಿಕೆ ಮದ್ದು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಮಹಿಳೆಯನ್ನು ಆಕಾಂಶಾ ಮಹೇಶ್ವರಿ ಎಂದು ಗುರುತಿಸಲಾಗಿದ್ದು, ಹಾಸ್ಟೆಲ್ ಕೋಣೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪೊಲೀಸರು ಆಕೆಯ ಕೊಠಡಿಯಿಂದ ಖಾಲಿ ಇಂಜೆಕ್ಷನ್ ಬಾಟಲುಗಳು ಮತ್ತು ಸಿರಿಂಜ್ ಅನ್ನು ವಶಪಡಿಸಿ ಕೊಂಡಿದ್ದಾರೆ. ಮಹಿಳೆಯು ತಲಾ 2.5 ಮಿಲಿಯ ನಾಲ್ಕು ಡೋಸ್ ಅರಿವಳಿಕೆ ತೆಗೆದುಕೊಂಡಿದ್ದಾರೆ ಎಂದು ಕೋಹ್-ಇ-ಫಿಜಾ ಪೊಲೀಸ್ ಠಾಣೆಯ ಉಸ್ತುವಾರಿ ಸಿಸೋಡಿಯಾ ಹೇಳಿದ್ದಾರೆ.
ತಾನು ಮಾನಸಿಕವಾಗಿ ಬಲಿಷ್ಠವಾಗಿಲ್ಲ ಮತ್ತು ಉದ್ವೇಗವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕೆ ಬರೆದಿಟ್ಟಿದ್ದ ಡೆತ್ ನೋಟ್ ಕೋಣೆಯಲ್ಲಿ ಪತ್ತೆಯಾಗಿದೆ.
Read E-Paper click here