Saturday, 26th October 2024

ಅಭಿವೃದ್ದಿ ಮಾಡದೆಯೇ ಹರಿಕಾರ ಹೇಗಾಗುತ್ತಾರೆ? ಆತ್ಮರತಿಗೂ ಮಿತಿಯಿದೆ : ವಿನಯ್ ಶ್ಯಾಮ್

ಬಾಂಬೆಬಾಯ್ಸ್ ಹೊಗಳಿಕೆಯಲ್ಲಿ ಕ್ಷೇತ್ರದ ಅಭಿವೃದ್ದಿ ಆಗಿರಬೇಕು: ಚಿಕ್ಕಬಳ್ಳಾಪುರ ಸಮಸ್ಯೆಗಳಿಂದ ನರಳುತ್ತಿದೆ

ಚಿಕ್ಕಬಳ್ಳಾಪುರ : ಚುನಾವಣೆ ಸಮಯದಲ್ಲಿ ಉತ್ಸವ, ಮಹೋತ್ಸವ ಸಮಾವೇಶ ಮಾಡಿಸಿ,ಕೇಂದ್ರ ರಾಜ್ಯದ ಯೋಜನೆಗಳ ನಾಮಫಲಕ ಹಾಕಿಸಿ ಪ್ರದರ್ಶನದ ಮಾಡಿದಾಕ್ಷಣ ಅಭಿವೃದ್ಧಿ ಆಗಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರವು ನೀರು, ನೈರ್ಮಲ್ಯ, ರಸ್ತೆ, ಉದ್ಯೋಗ, ಬೆಲೆಯೇರಿಕೆ,ರಸಗೊಬ್ಬರ ಕೊರತೆ, ವಸತಿ ಸಮಸ್ಯೆಗಳಿಂದ ನರಳುತ್ತಿದೆ. ಬಾಂಬೆ ಬಾಯ್ಸ್ ಹೇಳಿಕೆಯಲ್ಲಿ ಸುಧಾಕರ್ ಮಾತ್ರ ಅಭಿವೃದ್ಧಿ ಆಗಿರಬೇಕು. ಹೊಗಳಿಕೆ ಮತ್ತು ಆತ್ಮರತಿಗೂ ಮಿತಿಯಿದೆ ಎಂದು ಕೆಪಿಸಿಸಿ ಸದಸ್ಯ, ಕಾಂಗ್ರೆಸ್ ಎಂಎಲ್‌ಎ ಅಭ್ಯರ್ಥಿ ವಿನಯ್ ಶ್ಯಾಮ್ ಅಭಿಪ್ರಾಯಪಟ್ಟರು.

ಜನವರಿ ೧೬ರಂದು ಬೆಂಗಲೂರಿನ ನಾನಾಯಕಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಪ್ರಿಯಾಂಕಾ ಗಾಂ ಆಗಮಿಸುತ್ತಿದ್ದಾರೆ. ಜಿಲ್ಲೆಯ ಜನತೆ ವಿಶೇಷವಾಗಿ ಚಿಕ್ಕಬಳ್ಳಾರ ಕ್ಷೇತ್ರದ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಬದಲಾ ವಣೆಗೆ ನಾಂದಿ ಹಾಡಬೇಕು.ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಕಾರಕ್ಕೆ ತರಲು ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ದೀಪ ಹಾಕಿದರೆ ಸಾಲದು
ನಗರದ ಪ್ರಶಾಂತ್ ನಗರದಲ್ಲಿರುವ ಜಿ.ಹೆಚ್. ನಾಗರಾಜ್ ಅವರ ಸ್ವಗೃಹದಲ್ಲಿ ಮಾಧ್ಯಮಮಿತ್ರರೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.

ಬಿಜೆಪಿ ಸರಕಾರದ ಜನವಿರೋ ನೀತಿ ಮತ್ತು ಸಚಿವ ಸುಧಾಕರ್ ಸರ್ವಾಕಾರಿ ಧೋರಣೆಯಿಂದಾಗಿ ಜನತೆ ಅಷ್ಟೇ ಅಲ್ಲದೆ ಅಕಾರಿ ವರ್ಗವೂ ನರಳುತ್ತಿದೆ.ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಿ,ಭರಪೂರ ಆಸೆ ಆಮಿಷಗಳನ್ನು ತೋರಿಸಿ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ.ಜನತೆ ಸರಕಾರದಿಂದ ಯಾವೊಂದು ಸೌಲಭ್ಯವನ್ನೂ ಪಡೆಯಲಾಗದೆ ಪರಿತಪಿಸುತ್ತಿದ್ದಾರೆ. ಮೋಜು ಮಸ್ತಿಯಿಂದ ಯಾರಿಗೂ ಲಾಭವಿಲ್ಲ. ಇಂತಹ ಹೊತ್ತಲ್ಲ ಅವರ ಕಷ್ಟಗಳನ್ನು ಪರಿಹರಿಸುವ ಬದಲಿಗೆ ಕಿಲೋಮಿಟರ್ ಗಟ್ಟಲೆ ದೀಪ ಬೆಳೆಗಿಸಿದರೆ ಸಾಲದು. ಚುನಾವಣೆ ಬರಲಿ ಮತದಾರರು ಶಾಶ್ವತವಾಗಿ ದೀಪ ಆರಿಸುತ್ತಾರೆ ಎಂದು ಚಿಕ್ಕಬಳ್ಳಾಪುರ ಉತ್ಸವದ ಅಗತ್ಯದ ಬಗ್ಗೆ ಕುಟುಕಿದರು.

ಕೋವಿಡ್ ಗೋಲ್‌ಮಾಲ್
ಕೋವಿಡ್ ಮೊದಲ ಮತ್ತು ಎರಡನೇ ಅವಯಲ್ಲಿ ಸಾಮಗ್ರಿಗಳ ಖರೀದಿ,ಸೋಂಕಿತರ ಆರೈಕೆ, ನಿರ್ವಹಣೆಯಲ್ಲಿ ಸಾವಿರಾರು ಕೋಟಿ ಗೋಲ್‌ಮಾಲ್ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಿದೆ.ಬೇನಾಮಿ ಸಂಸ್ಥೆಗಳ ಹೆಸರಿನಲ್ಲಿ ಸಚಿವ ಸುಧಾಕರ್ ಲೂಟಿ ಮಾಡಿದ್ದಾರೆ ಎಂದು ಜನತೆ ಆಡಿಕೊಳ್ಳುತ್ತಿದ್ದಾರೆ.ವಿಶ್ವೇಶ್ವರಯ್ಯ ಸಿ.ಎನ್.ಆರ್.ರಾವ್,ಹೆಚ್. ನರಸಿಂಹಯ್ಯ ಅವರ ಕೀರ್ತಿಯಿಂದಾಗಿ ಜಿಲ್ಲೆಗೆ ಒಳ್ಳೆಯ ಹೆಸರು ಇತ್ತು. ಈಗ ಚಿಕ್ಕಬಳ್ಳಾಪುರ ಅಂದರೆ ಹೋ ಅವರಾ ಸುಧಾಕರ್ ಎನ್ನುವಷ್ಟರ ಮಟ್ಟಿಗೆ ಕುಖ್ಯಾತಿ ಪಡೆಯುತ್ತಿದೆ.ಉತ್ಸವಕ್ಕೆ ಅಬಕಾರಿ ಇಲಾಖೆ, ಗಣಿಗಾರಿಕೆ ಸೇರಿದಂತೆ ಪ್ರತಿಯೊಂದು ಇಲಾಖೆಯಿಂದ ಚಂದಾ ವಸೂಲಿ ಮಾಡಲಾಗಿದೆ.ತಾಲೂಕಿನ ಅಭಿವೃದ್ಧಿಗಿಂತ ತಮ್ಮ ಅಭಿವೃದ್ಧಿ ಹೆಚ್ಚಿದೆ. ೧೦ ವರ್ಷದ ಹಿಂದೆ ಸುಧಾಕರ್ ಹೇಗಿದ್ದರು, ಈಗ ಹೇಗಾಗಿದ್ದಾರೆ ಎನ್ನುವುದು ನೋಡಿದರೆ ಬದಲಾವಣೆ ಗೊತ್ತಾಗುತ್ತದೆ ಎಂದು ದೂರಿದರು.

ಮುಖ್ಯಮಂತ್ರಿ ಗಮನಿಸಿ
ಸಿದ್ದರಾಮಯ್ಯ ಕಾಲದಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜಿಗೆ ಬಿಜೆಪಿ ಸರಕಾರ ಅನುದಾನ ನೀಡಿದೆ. ಇದರಲ್ಲಿ ಸುಧಾಕರ್ ಹೆಚ್ಚುಗಾರಿಕೆ ಏನೂ ಇಲ್ಲ.ಆದರೆ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಮೆಡಿಕಲ್ ಕಾಲೇಜು ಚುನಾವಣೆಗೂ ಮುಂಚಿತವಾಗಿ ಉದ್ಘಾಟನೆ ಮಾಡಿ ಅದರ ಕ್ರೆಡಿಟ್ ಪಡೆದುಕೊಳ್ಳಲು ತರಾತುರಿಯಲ್ಲಿ, ಕಳಪೆಗುಣಮಟ್ಟದ ಸಿಮೆಂಟ್ ಮರಳು ಕಬ್ಬಿಣ ಬಳಸಿ ನಿರ್ಮಾಣ ಮಾಡುತ್ತಿದ್ದಾರೆ. ಇದರ ಪರಿಶೀಲನೆಗೆ ಒಂದು ತಜ್ಞರ ಸಮಿತಿ ರಚಿಸುವ ಅಗತ್ಯವಿದೆ. ಏಕೆಂದರೆ ಇದು ನೂರಾರು ವರ್ಷಗಳ ಕಾಲ ಸಾರ್ವಜನಿಕರ ಬಳಕೆಗೆ ಬರಬೇಕು.ಇತ್ತೀಚೆಗೆ ಮೇಲ್ಮಡಿಯ ಚಾವಣಿ ಕುಸಿದು ೯ ಮಂದಿ ಗಾಯಗೊಂಡಿದ್ದನ್ನು ಪರಿಗಣಿಸಿ ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಲಿ ಎಂದು ಆಗ್ರಹಿಸಿದರು.
ಅಜಿತ್ ಪ್ರಸಾದ್ ಮಾತನಾಡಿ ಮಳೆಗಾಲದಲ್ಲಿ ಕೆರೆತುಂಬಿದಾಗ ಬಾಗೀನ ಅರ್ಪಿಸುತ್ತಾರೆ, ಕೋಡಿ ಹೋಗಿದ್ದಕ್ಕೆ ಊರಹಬ್ಬ ಮಾಡುತ್ತಾರೆ.ಅದನ್ನು ಬಿಟ್ಟು ಯಾವಾಗಂದರೆ ಆವಾಗ ಮಾಡುವುದಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಶಾಲಾ ಮಕ್ಕಳನ್ನು ಬಳಸಿಕೊಳ್ಳುವುದು ಅಕ್ಷಮ್ಯ ಅಪರಾಧ.ಚಿಕ್ಕಬಳ್ಳಾಪುರ ಉತ್ಸವ ಮೈಸೂರು ದಸರಾ ಮಾದರಿಯಲ್ಲಿ ಮಾಡುತ್ತೇವೆ ಎಂದು ಡಂಗೂರ ಸಾರಿದವರು,ರಾಜಮಹಾರಾಜರಂತೆ ಸಾರೋಟಿನಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದವರು ಸ್ವತಃ ಮೈಸೂರು ಮಹಾರಾಜರೇ ನಗರಕ್ಕೆ ಬಂದಿದ್ದರೂ ಸೌಜನ್ಯಕ್ಕಾದರೂ ಅವರನ್ನು ಉತ್ಸವಕ್ಕೆ ಆಹ್ವಾನ ನೀಡದಿರುವುದು ಯಾವ ಸಂಸ್ಕೃತಿ ಎಂಬುದನ್ನು ಜನತೆ ಅರಿಯಬೇಕು ಎಂದು ಸುಧಾಕರ್ ಕಾಲೆಳೆದರು.

ಲಾಯರ್ ನಾರಾಯಣಸ್ವಾಮಿ ಮತನಾಡಿ ಈಶಾ ಪೌಂಡೇಷನ್ ಸರಕಾರಿ ಆಸ್ತಿ ಕಬಳಿಸಿ ಆಶ್ರಮ ನಿರ್ಮಿಸುತ್ತಿದ್ದು, ಈಬಗ್ಗೆ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.ಈ ನಡುವೆ ಜನವರಿ ೧೫ರಂದು ಆದಿಯೋಗಿ ಮೂರ್ತಿ ಪ್ರತಿಷ್ಟಾಪನೆ ಕಾರ್ಯ ನಡೆಸುವುದಾಗಿ ಈಶಾ ಫೌಂಡೇಷನ್ ಪ್ರಚಾರ ಮಾಡಿತ್ತು.ಬುಧವಾರ ಹೈಕೋರ್ಟು ಮುಂದಿನ ಆದೇಶದವರೆಗೆ ಇಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಯಾವುದೇ ಕೆಲಸ ಕಾರ್ಯಕ್ರಮ ಮಾಡಬಾರದು ಎಂದು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.ಸುಧಾಕರ್ ಕುಮ್ಮಕ್ಕಿನಿಂದ ತಾಲೂಕು ಆಡಳಿತ ಇದಕ್ಕೆ ಸರಕಾರಿ ಭೂಮಿ ಮಂಜೂರು ಮಾಡಲು ಹೊರಟಿತ್ತು. ಇದಕ್ಕೆಲ್ಲಾ ಕಡಿವಾಣ ಬೀಳಲಿದೆ ಎಂದರು.

ರೈತಮುಖ0ಡ ಚಂದ್ರಪ್ಪ ಮಾತನಾಡಿ ಅಭಿವೃದ್ದಿ ಬಗ್ಗೆ ಪುಂಖಾನುಪು0ಖವಾಗಿ ಮಾತನಾಡುವ ಸುಧಾಕರ್ ಕ್ಷೇತ್ರದ ರೈತರ ಬಗ್ಗೆ ವಿಧಾನ ಸಭೆ ಪರಿಷತ್ತಿನಲ್ಲಿ ಎಂದಾದರೂ ಪ್ರಶ್ನೆ ಮಾಡಿದ್ದಾರಾ?ಒಂದು ಎಕರೆಯಲ್ಲಿ ಬೆಳೆಯಿಡಲು ಎಷ್ಟು ಖರ್ಚಾಗುತ್ತದೆ. ರಸಗೊಬ್ಬರ, ಕ್ರಿಮಿನಾಶಕಗಳ ಬೆಲೆಏರಿಕೆಗೆ ಕಡಿವಾಣ ಹಾಕಲು ಮುಂದಾಗಿದ್ದಾರಾ ಎಂದು ಪ್ರಶ್ನಿಸಿದರು.ಇನ್ನೊಮ್ಮೆ ಬಿಜೆಪಿ ಸರಕಾರ ಅಕಾರಕ್ಕೆ ಬಂದರೆ ರೈತರ ಸರ್ವನಾಶ ಖಚಿತ ಎಂದು ಬೇಸರ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಮುಖಂಡರಾದ ಎಸ್.ಸಿ ಮೋರ್ಚ ಜಿಲ್ಲಾಧ್ಯಕ್ಷ ಕೃಷ್ಣಪ್ಪ,ಮರಸನಹಳ್ಳಿ ಪ್ರಕಾಶ್, ರಾಮಕೃಷ್ಣಪ್ಪ, ಸುಬ್ಬರಾಯಪ್ಪ, ಡೈರಿ ಗೋಪಿ, ಪಟ್ರೇನಹಳ್ಳಿ ಕೃಷ್ಣ,ಆಪ್ತಸಹಾಯಕ ಮುಬಾರಕ್ ಮತ್ತಿತರರು ಇದ್ದರು.
೧೧ಸಿಬಿಪಿಎಂ೧: ಚಿಕ್ಕಬಳ್ಳಾಪುರ ನಗರದ ಪ್ರಶಾಂತ್ ನಗರ ಜಿ.ಹೆಚ್ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ವಿನಯ್‌ಶ್ಯಾಮ್ ಮಾತನಾಡಿದರು