ಬೈಕ್ ಟ್ಯಾಕ್ಸಿಗಳ ಜೊತೆಗೆ ಕಂಪನಿಯ ರಿಕ್ಷಾಗಳು, ವಿತರಣಾ ಸೇವೆಗಳು ಸಹ ಪರವಾನಗಿ ಪಡೆದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ರ್ಯಾಪಿಡೋ ಟ್ಯಾಕ್ಸಿ ಸೇವೆಯ ವಿಚಾರಣೆಯ ಸಮಯದಲ್ಲಿ, ಬಾಂಬೆ ಹೈಕೋರ್ಟ್ ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ಎಲ್ಲಾ ಸೇವೆಗಳನ್ನು ನಿಲ್ಲಿಸುವಂತೆ ಕಂಪನಿಗೆ ನಿರ್ದೇಶನ ನೀಡಿತು.
ಹೈಕೋರ್ಟ್ ಆದೇಶದ ನಂತರ, ಕಂಪನಿಯು ಜನವರಿ 20 ರೊಳಗೆ ರಾಜ್ಯದಾದ್ಯಂತ ಎಲ್ಲಾ ಸೇವೆಗಳನ್ನು ನಿಲ್ಲಿಸಲು ಒಪ್ಪಿಕೊಂಡಿದೆ. ಈ ವಿಷಯವನ್ನು ಮುಂದಿನ ಶುಕ್ರವಾರ ಮತ್ತೆ ವಿಚಾರಣೆ ನಡೆಸಲಾಗುವುದು.
ರ್ಯಾಪಿಡೊ ಮಾರ್ಚ್ 16, 2022 ರಂದು ಪುಣೆ ಆರ್ಟಿಒದಲ್ಲಿ ಪರವಾನ ಗಿಗಾಗಿ ಅರ್ಜಿ ಸಲ್ಲಿಸಿದ್ದರು, ಅದನ್ನ ಸಾರಿಗೆ ಇಲಾಖೆ ತಿರಸ್ಕರಿಸಿತ್ತು. ಇದರೊಂದಿಗೆ, ಸಾರಿಗೆ ಇಲಾಖೆಯು ರ್ಯಾಪಿಡೊ ಅಪ್ಲಿಕೇಶನ್ ಮತ್ತು ಅದರ ಸೇವೆಗಳನ್ನ ಬಳಸದಂತೆ ಜನರಿಗೆ ಮನವಿ ಮಾಡಿತ್ತು. ಇದರ ನಂತರ, ರ್ಯಾಪಿಡೊ ಬಾಂಬೆ ಹೈಕೋರ್ಟ್’ನ್ನ ಸಂಪರ್ಕಿಸಿದರು.
ನವೆಂಬರ್ 29, 2022 ರಂದು, ಹೈಕೋರ್ಟ್ ಅನುಮತಿಯನ್ನ ಮರುಪರಿಶೀಲಿಸುವಂತೆ ಇಲಾಖೆಗೆ ಸೂಚಿಸಿತ್ತು. ಡಿಸೆಂಬರ್ 21, 2022 ರಂದು ನಡೆದ ಆರ್ಟಿಒ ಸಭೆಯಲ್ಲಿ ಇದನ್ನು ಮತ್ತೆ ತಿರಸ್ಕರಿಸಲಾಯಿತು.