Saturday, 23rd November 2024

ಛೋಟಾ ರಾಜನ್ ಜನ್ಮದಿನದಂದು ಪೋಸ್ಟರ್: ಆರು ಜನರ ವಿರುದ್ಧ ಪ್ರಕರಣ ದಾಖಲು

ಮುಂಬೈ: ಭೂಗತ ಪಾತಕಿ ಛೋಟಾ ರಾಜನ್ ಜನ್ಮದಿನದಂದು ಪೋಸ್ಟರ್ ಹಾಕಿದ್ದಕ್ಕಾಗಿ ಆರು ಜನರ ವಿರುದ್ಧ ಮುಂಬೈ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಕಬಡ್ಡಿ ಕಾರ್ಯಕ್ರಮ ಆಯೋಜಿಸಿದ್ದ ವ್ಯಕ್ತಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪೋಸ್ಟರ್‌ ನಲ್ಲಿ ಸಾಗರ್ ರಾಜ್ ಗೋಲೆ ಎಂಬ ವ್ಯಕ್ತಿಯೇ ಸಂಘಟಕ ಎಂದು ಬರೆಯಲಾಗಿದ್ದು, ‘ಸಿಆರ್ ಸಮಾಜಿಕ ಸಂಘಟನೆ’ ಮಹಾರಾಷ್ಟ್ರದ ಪೋಸ್ಟರ್ ಹಾಕಲಾಗಿದೆ.

ಪೋಸ್ಟರ್ ಪ್ರಕಾರ ಶುಕ್ರವಾರ ಭೂಗತ ಪಾತಕಿ ಛೋಟಾ ರಾಜನ್ ಜನ್ಮದಿ ನದ ಸಂದರ್ಭದಲ್ಲಿ ಕಬ್ಬಡ್ಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮೂಲತಃ ಚೆಂಬೂರಿನ ಪಾತಕಿ ಛೋಟಾ ರಾಜನ್ ನ ನಿಜವಾದ ಹೆಸರು ರಾಜೇಂದ್ರ ಸದಾಶಿವ ನಿಕಲ್ಜೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಆತನನ್ನು ಮಲೇಷ್ಯಾದಿಂದ ಗಡೀಪಾರು ಮಾಡಲಾಗಿತ್ತು. ಇತ್ತೀಚೆಗಷ್ಟೇ ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು.