ಮಧುರೈ: ತಮಿಳುನಾಡಿನ ಮಧುರೈನ ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ತಿವಿದು 19 ಮಂದಿ ಗಾಯ ಗೊಂಡಿದ್ದಾರೆ.
ಹೋರಿ ತಿವಿತದಿಂದ ಗಾಯಗೊಂಡ 11 ಮಂದಿ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಂದಾಯ ಇಲಾಖೆ ತಿಳಿಸಿದೆ.ಈ ಘಟನೆ ಹೊರತಾಗಿಯೂ ಇಂದು ಸಂಜೆ 4 ಗಂಟೆ ಯವರೆಗೂ ಜಲ್ಲಿಕಟ್ಟು ಸ್ಪರ್ಧೆ ಮುಂದುವರೆಯಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಂಗಲ್ ಹಬ್ಬದ ಅಂಗವಾಗಿ ಮಧುರೈನ ಮೂರು ಗ್ರಾಮಗಳಲ್ಲಿ ಜಲ್ಲಿಕಟ್ಟು ಅದ್ದೂರಿಯಾಗಿ ಆರಂಭವಾಯಿತು.
ಸೋಮವಾರ ಮತ್ತು ಮಂಗಳವಾರ ಪಾಲಮೇಡು ಮತ್ತು ಅಲಂಗನಲ್ಲೂರಿ ನಲ್ಲಿ ಮತ್ತಷ್ಟು ಜಲ್ಲಿಕಟ್ಟು ಕಾರ್ಯಕ್ರಮಗಳು ನಡೆಯಲಿವೆ. ಜಲ್ಲಿಕಟ್ಟು ಸ್ಪರ್ಧೆಯಲ್ಲಿ 300 ಗೂಳಿ ಪಳಗಿಸುವವರಿಗೆ ಮತ್ತು 150 ಪ್ರೇಕ್ಷಕರಿಗೆ ಮಾತ್ರ ಅವಕಾಶವಿದೆ.