ಎರಡು ಶವಗಳಿಗಾಗಿ ಇಂದು ಬೆಳಗ್ಗೆಯಿಂದ ಹುಡುಕಾಟ ನಡೆದಿದೆ. ಇವರಲ್ಲಿ ಐವರು ಭಾರತೀಯರು ಸೇರಿ, ಒಟ್ಟು 42 ಮಂದಿಯ ಗುರುತು ಪತ್ತೆ ಯಾಗಿದೆ.
ಜನವರಿ 15ರಂದು ಯೇತಿ ಏರ್ವೇಸ್ಗೆ ಸೇರಿದ ವಿಮಾನವೊಂದು ಕಠ್ಮಂಡುವಿನಿಂದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿತ್ತು. ಲ್ಯಾಂಡ್ ಆಗಲು ಕೆಲವೇ ಕ್ಷಣದ ಮೊದಲು ಅಲ್ಲಿಯೇ ಇದ್ದ ಸೇತಿ ಗಂಡಕಿ ನದಿ ದಡದ ಮೇಲೆ ಪತನಗೊಂಡಿದೆ. ಕಡಿದಾದ ಕಂದಕಕ್ಕೆ ವಿಮಾನ ಬಿದ್ದು, ಬೆಂಕಿ ಹೊತ್ತಿ ಉರಿದಿದೆ.
ಜನವರಿ 15ರಂದು ವಿಮಾನ ಬೆಳಗ್ಗೆ 10.33ಕ್ಕೆ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು. ಇದರಲ್ಲಿ 53 ನೇಪಾಳಿ ನಾಗರಿಕರು, ಐವರು ಭಾರತೀಯರು (ಉತ್ತರ ಪ್ರದೇಶದವರು), ನಾಲ್ವರು ರಷ್ಯನ್ನರು ಮತ್ತು ಒಬ್ಬ ಐರಿಶ್, ಇಬ್ಬರು ಕೊರಿಯನ್ನರು ಮತ್ತು ಒಬ್ಬರು ಅರ್ಜೆಂಟೀನಾ ಪ್ರಜೆ ಮತ್ತು ಒಬ್ಬ ಫ್ರೆಂಚ್ ನಾಗರಿಕ ಇದ್ದರು.