ಬಸ್ತಿ: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಆಯೋಜಿಸಲಾದ ಸಂಸದ್ ಖೇಲ್ ಮಹಾಕುಂಭ 2022-23 ರ ಎರಡನೇ ಹಂತವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಬಸ್ತಿ ಜಿಲ್ಲೆಯಲ್ಲಿ 2021 ರಿಂದ ಬಸ್ತಿಯ ಲೋಕಸಭಾ ಸಂಸದರಾದ ಹರೀಶ್ ದ್ವಿವೇದಿ ಯವರು ಸಂಸದ್ ಖೇಲ್ ಮಹಾಕುಂಭ ವನ್ನು ಆಯೋಜಿಸುತ್ತಿದ್ದಾರೆ. ಸಂಸದ್ ಖೇಲ್ ಮಹಾಕುಂಭ 2022-23 ಅನ್ನು ಎರಡು ಹಂತಗಳಲ್ಲಿ ಆಯೋಜಿಸಲಾಗಿದೆ.
ಮೊದಲ ಹಂತವನ್ನು ಡಿಸೆಂಬರ್ 10 ರಿಂದ ಡಿಸೆಂಬರ್ 16, 2022 ರವರೆಗೆ ಆಯೋಜಿಸ ಲಾಗಿದೆ ಮತ್ತು ಖೇಲ್ ಮಹಾಕುಂಭದ ಎರಡನೇ ಹಂತವನ್ನು ಜನವರಿ 18 ರಿಂದ ಜನವರಿ 28, 2023 ರವರೆಗೆ ಆಯೋಜಿಸಲಾಗಿದೆ.
ಖೇಲ್ ಮಹಾಕುಂಭವು ಕುಸ್ತಿ, ಕಬಡ್ಡಿ, ಖೋ ಖೋ, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಹಾಕಿ, ವಾಲಿಬಾಲ್, ಹ್ಯಾಂಡ್‌ಬಾಲ್, ಚೆಸ್, ಕೇರಂ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮುಂತಾದ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ವೈವಿಧ್ಯಮಯ ಸ್ಪರ್ಧೆ ಗಳನ್ನು ಆಯೋಜಿಸುತ್ತದೆ. ಇವುಗಳ ಹೊರತಾಗಿ, ಪ್ರಬಂಧ ಬರೆಯುವ ಸ್ಪರ್ಧೆ, ಚಿತ್ರಕಲೆ, ರಂಗೋಲಿ ಹಾಕುವುದು ಇತ್ಯಾದಿ ಗಳನ್ನು ಖೇಲ್ ಮಹಾಕುಂಭದ ಸಂದರ್ಭದಲ್ಲಿ ಆಯೋಜಿಸಲಾಗಿದೆ ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.
ಖೇಲ್ ಮಹಾಕುಂಭವು ಒಂದು ವಿನೂತನ ಉಪಕ್ರಮವಾಗಿದ್ದು, ಇದು ಜಿಲ್ಲೆಯ ಬಸ್ತಿ ಮತ್ತು ನೆರೆಹೊರೆಯ ಪ್ರದೇಶಗಳ ಯುವಕ ರಿಗೆ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮತ್ತು ವೇದಿಕೆಯನ್ನು ಒದಗಿಸುತ್ತದೆ ಮತ್ತು ಕ್ರೀಡೆಯನ್ನು ವೃತ್ತಿ ಆಯ್ಕೆಯಾಗಿ ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸುತ್ತದೆ.