Sunday, 24th November 2024

ಕಿತ್ನೇ ತೇಜಸ್ವಿ ಲೋಗ್‌ ಹೈ, ಹಮಾರೇ ಪಾಸ್

ತುಂಟರಗಾಳಿ

ಸಿನಿಗನ್ನಡ

ಅತ್ತ ಸಾಹಿತಿ ಭಗವಾನ್ ಸುಮ್‌ಸುಮ್ನೆ ರಾಮನ ಬಗ್ಗೆ ವಿವಾದ ಮಾಡ್ತಾ ಇದ್ರೆ ಇತ್ತ ಕನ್ನಡ ಚಿತ್ರದಲ್ಲಿ ಇನ್ನೊಂದು ರಾಮ್ ನಾಮ ವಿವಾದ ಸೃಷ್ಠಿ ಮಾಡಿದೆ. ನಟಿ ರಚಿತಾ ರಾಮ್ ಅತಿ ಉತ್ಸಾಹದಿಂದ, ಅತಿ ಅಭಿಮಾನದಿಂದ ಮಾತಾಡಲು ಹೋಗಿ ಎಡವಟ್ಟಿಗೆ ಸಿಕ್ಕಿಕೊಂಡಿರುವ ಕಥೆ ಇದು. ರಚಿತಾ ರಾಮ್ ದರ್ಶನ್ ಜತೆ ಅಭಿನಯಿಸಿರೋ ಕ್ರಾಂತಿ ಚಿತ್ರ ಜನವರಿ ೨೬ಕ್ಕೆ ಬಿಡುಗಡೆ ಆಗುತ್ತಿದೆ.

ಅದರ ಪ್ರೀ ರಿಲೀಸ್ ಇವೆಂಟಿನಲ್ಲಿ ರಚಿತಾ ರಾಮ್ ಏನೋ ಮಾತಾಡಲು ಹೋಗಿ, ‘ಏನು ಮಾತಾಡಿದೆ ನೀನು’ ಅನ್ನುವಂತೆ ದೇಶದ ಸಂವಿಧಾನಕ್ಕೆ ಧಕ್ಕೆ ತರುವಂಥ ಮಾತಾಡಿzರೆ. ಪ್ರತಿ ವರ್ಷ ಜನವರಿ ೨೬ ಗಣರಾಜ್ಯೋತ್ಸವ ಆಚರಿಸ್ತೀವಿ. ಆದ್ರೆ, ಈ ವರ್ಷ ಗಣರಾಜ್ಯೋತ್ಸವವನ್ನು ಮರೆತು ಕ್ರಾಂತಿ ಉತ್ಸವ ಆಚರಿಸೋಣ ಅಂತ ಬಾಯಿಗೆ ಬಂದಿದ್ದು ಮಾತಾಡಿ, ರಚಿತಾ ರಾಮ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಗ ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ರಾಜ್ಯದ ಎರಡು ಕಡೆ ಕೇಸುಗಳು ದಾಖಲಾಗಿವೆ. ಕೇವಲ ಸಿನಿಮಾಗೆ ಬಿಟ್ಟಿ ಪ್ರಚಾರ ತೆಗೆದು ಕೊಳ್ಳಲು ಬೇಕಾಬಿಟ್ಟಿ ಮಾತಾಡಿರುವ ರಚಿತಾ ರಾಮ್ ಒಬ್ಬ ದೇಶದ್ರೋಹಿ, ಅವರನ್ನು ಗಡಿಪಾರು ಮಾಡಬೇಕು ಅನ್ನೋ ಹಂತಕ್ಕೆ ಇದು ಮುಟ್ಟಿದೆ. ಅಂದು ರಚಿತಾ ರಾಮ್ ಮಾತನಾಡಿದ್ದು ತಪ್ಪು ಅಂತ ಸ್ವತಃ ಅವರಿಗೇ ಗೊತ್ತು. ಮರುದಿನವೇ ಅದರ ಬಗ್ಗೆ, ಗೊತ್ತಿಲ್ಲದೆ ಮಾತಾಡಿದ್ದು, ಬಾಯಿತಪ್ಪಿ ಬಂದಿದೆ. ಕ್ಷಮಿಸಿ ಅಂತ ಒಂದು ಮಾತು ಹೇಳಿದ್ದರೆ ಇದು ಇಷ್ಟೊಂದು ದೊಡ್ಡ ವಿಷಯ ಆಗುತ್ತಿರಲಿಲ್ಲ.

ಆದರೆ, ಅದನ್ನೂ ಮಾಡದ ರಚಿತಾ ರಾಮ್ ಈಗ ಕನಿಷ್ಠ ಪಕ್ಷ ಬಲವಂತವಾಗಿಯಾದರೂ ಕ್ಷಮೆ ಕೇಳಲೇಬೇಕಾದ ಹಂತಕ್ಕೆ ಬಂದಿದ್ದಾರೆ ಅಂದ್ರೆ ತಪ್ಪಿಲ್ಲ. ಅದರ ಜತೆಗೆ ಕ್ರಾಂತಿ ಸಿನಿಮಾಗೆ ಮೀಡಿಯಾ ಸಪೋರ್ಟ್ ಸಿಕ್ತಾ ಇಲ್ಲ, ಹಂಗಾಗಿ ಇಂಥ ಗಿಮಿಕ್‌ಗಳನ್ನೆ ಬೇಕಂತಲೇ ಅವರ ಮಾಡಿದ್ದಾರೆ ಅನ್ನೋ ಮಾತುಗಳನ್ನು ಕೇಳುವ ಅಗತ್ಯವೂ ಇರಲಿಲ್ಲ.

ಲೂಸ್ ಟಾಕ್
ತೇಜಸ್ವಿ ಸೂರ್ಯ (ಕಾಲ್ಪನಿಕ ಸಂದರ್ಶನ) 
ಏನ್ ಸಾರ್, ವಿಮಾನದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ತೆಗೆದು ಆಕಾಶದೆತ್ತರಕ್ಕೆ ಹೆಸರು ಮಾಡಿಬಿಟ್ರಲ್ಲಾ?
– ಅಯ್ಯೋ, ಅವಕಾಶ ಬಾಗಿಲು ತಟ್ಟಿದಾಗ ತೆಗಿಬೇಕು ಅಂತ ದೊಡ್ಡೋರು ಹೇಳಿದ್ದನ್ನು ತಪ್ಪು ತಿಳಿದುಕೊಂಡುಬಿಟ್ಟೆ ಕಣ್ರೀ..

ಆದ್ರೂ, ಎದೆಯಲ್ಲಿ ನಾಕಕ್ಷರ ಇದ್ದವರು ಮಾಡೋ ಕೆಲಸನಾ ಇದು?
– ಅಯ್ಯೋ, ಅಲ್ಲಿ ನಾಕಲ್ಲ ಜಾಸ್ತಿ ಅಕ್ಷರ ಇದ್ವು ಕಣ್ರೀ, ಅದಕ್ಕೆ, ಕಣ್ ತಪ್ಪಿನಿಂದ ಕನ್ ಫ್ಯೂಷನ್ ಆಗಿದ್ದು

ಆದ್ರೂ ಜನಕ್ಕೆ ಆಡ್ಕೊಂಡು ನಗೋಕೆ ನೀವು ಆಕಾಶದಲ್ಲಿ ಅವಕಾಶ ಸಿಕ್ರೂ ಬಿಡಲ್ಲ ಅಲ್ವಾ?

– ಅಯ್ಯೋ, ನೀವೊಳ್ಳೆ, ಹೋಗ್ಲಿ ಬಿಡ್ರೀ, ನಾನೇನು ನಿಮ್ಮ ಸಿನಿಮಾ ಹೀರೋ ದರ್ಶನ್ ಥರ, ಗಗನ ಸಖಿಯರನ್ನು ಅದೃಷ್ಠ ದೇವತೆ ಅಂದ್ಕೊಂಡು ಬಾಗಿಲು ತೆಗೆದಿಲ್ವಲ್ಲ.

ಅದೂ ಸರಿನೇ, ಅಂದಂಗೆ, ನಿಮ್ಮ ಕಂಗನಾ ರಣಾವತ್ ಎಮರ್ಜೆನ್ಸಿ ಅಂತ ಸಿನಿಮಾ ಪ್ರೊಡ್ಯೂಸ್ ಮಾಡ್ತಿzರಲ್ಲ ಅವರಿಗೆ ನೀವೇನು ಸಹಾಯ
ಮಾಡಲ್ವಾ?
– ಖಂಡಿತಾ ಮಾಡ್ತೀನಿ, ಸಿನಿಮಾ ರಿಲೀಸ್ ದಿನ ಜನರನ್ನು ಫ್ರೀಯಾಗಿ ಒಳಗೆ ಬಿಟ್ಟು, ಅರ್ಧಕ್ಕೆ ಎದ್ದು ಹೋಗೋರು, ಒಂದು ಸಾವಿರ ರುಪಾಯಿ ಕೊಡೇಕು ಅಂತ ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ನಿಂತ್ಕೊತೀನಿ. ಒಳ್ಳೆ ಕಲೆಕ್ಷನ್ನು.

* ಸರಿ, ನಿಮ್ಮ ಈ ಕೆಲಸದ ಬಗ್ಗೆ ಪ್ರಧಾನಿ ಮೋದಿ ಅವರು ಏನಂದ್ರು?
– ಅಯ್ಯೋ, ಕಿತ್ನೇ ತೇಜಸ್ವಿ ಲೋಗ್ ಹೈ, ಹಮಾರೇ ಪಾಸ್’ ಅಂತ ಮೋದಿ ಅವರು ಹೇಳಿರುವ ವೈರಲ್ ವಿಡಿಯೊ ನೋಡಿಲ್ವಾ ಅದು ನನ್ನ ಬಗ್ಗೆನೇ
ಹೇಳಿದ್ದು.

ನೆಟ್ ಪಿಕ್ಸ್

ಖೇಮು ಮತ್ತು ಖೇಮುಶ್ರೀ ವಾರ್ಷಿಕೋತ್ಸವ ಅಂದು. ಇಬ್ಬರೂ ಬೆಳಗ್ಗೆ ಎದ್ದ ಕೂಡಲೇ ಏನಾದರೂ ವಿಶೇಷವಾಗಿಯೇ ಈ ದಿನವನ್ನು ಆಚರಿಸಬೇಕು
ಎಂದುಕೊಂಡು ನಿರ್ಧಾರ ಮಾಡಿದರು. ಆದರೆ, ಬೆಳಗಾಗಿ ಮನೆಯ ಹೊರಬಂದ ಅವರಿಗೆ ಅಚ್ಚರಿ ಕಾದಿತ್ತು. ಬೆಳ್ಳಂಬೆಳಗ್ಗೆ ಮನೆಯ ಬಾಗಿಲ ಮುಂದೆ ಕವರ್ ಒಂದು ಬಿದ್ದಿತ್ತು. ತೆಗೆದು ನೋಡಿದರೆ ಅದರಲ್ಲಿ ಬರೆದಿತ್ತು, ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು, ‘ಈ ಕವರ್‌ನಲ್ಲಿ ಎರಡು ವಂಡರ್ ಲಾ ಟಿಕೆಟ್‌ಗಳು, ಎರಡು ಫ್ರೀ ಪಿಜ್ಜಾ ಕೂಪನ್‌ಗಳು, ಎರಡು ಪಿವಿಆರ್ ಸಿನಿಮಾ ಟಿಕೆಟ್‌ಗಳು ಇವೆ, ಇಡೀ ದಿನ ಎಂಜಾಯ್ ಮಾಡಿ’.

ಅದನ್ನು ಓದಿದ ಮೇಲೆ ಇದನ್ಯಾರು ಕಳೆಸಿದರು ಎಂಬುದೇ ಇಬ್ಬರಿಗೂ ಗೊಂದಲ ಆಯ್ತು. ಯಾರೋ ಸ್ನೇಹಿತರೇ ಇರಬೇಕು ಎಂದುಕೊಂಡರೂ ಯಾರು ಅಂತ ಮಾತ್ರ ಗೊತ್ತಾಗಲಿಲ್ಲ, ಯೋಚನೆ ಮಾಡಿದ್ದು ಸಾಕು, ಸುಮ್ಮನೆ ಮಾತಾಡಿ ಸಮಯ ಹಾಳು ಮಾಡುವುದು ಬೇಡ ಎಂದುಕೊಂಡು
ಇಬ್ಬರೂ ಆ ಕವರ್ ತೆಗೆದುಕೊಂಡು ಮನೆಯಿಂದ ಹೊರಟರು. ಬೆಳಗ್ಗೆ ವಂಡರ್ ಲಾ, ಮಧ್ಯಾಹ್ನ ಪಿಜ್ಜಾ, ಸಂಜೆ ಸಿನಿಮಾ ನೋಡಿಕೊಂಡು ಖುಷಿಯಾಗಿ ಅಂತೂ ನಮ್ಮ ಮದುವೆ ದಿನ ಸೂಪರ್ ಆಗಿತ್ತು ಎಂದುಕೊಂಡು ಮನೆಗೆ ಬಂದರು.

ಮನೆಯ ಬಾಗಿಲು ತೆರೆದು ನೋಡಿದರೆ ಮನೆ ಪೂರ್ತಿ ಖಾಲಿ ಯಾರೋ ದರೋಡೆಕೋರರು ಮನೆ ಪೂರ್ತಿ ದೋಚಿಕೊಂಡು ಹೋಗಿದ್ದರು. ಕಂಗಾಲಾದ ಕೇಮು ದಂಪತಿಗಳ ಕಣ್ಣಿಗೆ ಅಂದು ಅವರ ಕಣ್ಣಿಗೆ ಬಿತ್ತು, ತೆರೆದು ನೋಡಿದರೆ ಅದರಲ್ಲಿ ಬರೆದಿತ್ತು. ‘ಇಡೀ ದಿನ ಹೊರಗೆ ಕಳೆದು ನಮಗೆ ನೆಮ್ಮದಿಯಾಗಿ ನಮಗೆ ನಮ್ಮ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದಕ್ಕೆ ಥ್ಯಾಂಕ್ಸ್’. ಆಗ ಬೆಳಗ್ಗೆ ಆ ಕವರ್ ನಲ್ಲಿ ವಂರ್ಡ ಲಾ ಟಿಕೆಟ್‌ಗಳು, ಪಿಜ್ಜಾ ಕೂಪನ್‌ಗಳು ಮತ್ತು ಸಿನಿಮಾ ಟಿಕೆಟ್ ಗಳನ್ನು ಯಾರು ಕಳಿಸಿದ್ದು ಅಂತ ಖೇಮುದಂಪತಿಗಳಿಗೆ ಗೊತ್ತಾಯ್ತು.

ಲೈನ್ ಮ್ಯಾನ್ ಲವ್ ಮ್ಯಾಟರ್
ಹುಡುಗ- ‘ಐ ಲವ್ ಯೂ’

ಹುಡುಗಿ- ‘ನನ್ ಮೇಕಪ್ ಖರ್ಚೇ ತಿಂಗಳಿಗೆ ಒಂದ್ ಲಕ್ಷ ಆಗುತ್ತೆ, ನನ್ನ ಸಾಕೋಕೆ ಆಗುತ್ತಾ ನಿನ್ ಕೈಲಿ?’
ಹುಡುಗ- ಅಯ್ಯೋ, ಹೌದಾ, ಹಂಗಾದ್ರೆ ನೋಡೋಕ್ ಚೆನ್ನಾಗಿರೋ ಹುಡುಗಿನೇ ಮದುವೆ ಆಗ್ತೀನಿ ಬಿಡು’
ಜಾಸ್ತಿ ಏಜ್ ಡಿ- ಇರೋ ಗರ್ಲ್ ಫ್ರೆಂಡ್ ಬರ್ತ್ ಡೇ ಗೆ ಏನಂತ ವಿಶ್ ಮಾಡ್ಬೇಕು?
‘ಆಛ್ಝಿZಠಿಛಿb’ಚಿಜ್ಟಿಠಿebZqsಡಿಜಿoeಛಿo
ವಯಸ್ಸಿನ ಅಂತರ ಇರುವವರ ನಡುವಿನ ಸಮಸ್ಯೆ
– ‘ಜನ’ರೇಷನ್ ಗ್ಯಾಪ್
ಈ ಭಗವಾನ್ ಯಾಕೆ ಆಗಾಗ ಶ್ರೀರಾಮನ ಬಗ್ಗೆ ಇಲ್ಲಸಲ್ಲದ ಮಾತಾಡ್ತಾರೆ?
-ಅವರು ಭಗ‘ವಾನರ’ ಸೈನ್ಯದಲ್ಲಿ ಇದ್ರು ಅನ್ಸುತ್ತೆ. ಅದಕ್ಕೇ ’ಕಪಿ’ ಚೇಷ್ಟೆ
ಸುಮ್ ಸುಮ್ನೆ ಪಕ್ಕದಲ್ಲಿ ಕೂತವರನ್ನು ಗಿಲ್ಲುವ ಅಭ್ಯಾಸ
-ಜಿಗುಟು’ತನ
ಯಾರನ್ನಾದರೂ ವ್ಯಂಗ್ಯವಾಗಿ ಸರ್ ಎಂದು ಕರೆದರೆ, ಅದು
-ಸರ್ ಕ್ಯಾಸ್ಟಿಕ್
ಮಗ್ಗಿ ಹೇಳುವಾಗ ಇರಬೇಕಾದ ಶಿಸ್ತು
– ‘ಟೇಬಲ’ ಮ್ಯಾನರ್ಸ್
ಉದ್ದ ಕೂದಲಿರುವ ಗಗನ ಸಖಿ
– ‘ಹೇರ್’ ಹೋಸ್ಟೆಸ್
Read E-Paper click here