ಮಾನ್ವಿ: ಪಟ್ಟಣದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಪೂರ್ವ ಸಿದ್ದತಾ ಸಭೆ ಅಂಗವಾಗಿ ಮಾನ್ವಿ ವಿಧಾನಸಭ ಕ್ಷೇತ್ರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಾ ಶ್ಯಾಮಸುಂದರ ನಾಯಕ ಮಾತನಾಡಿ ಆಮ್ ಆದ್ಮಿ ಪಕ್ಷ ಎಂದಿಗೂ ಬ್ರಷ್ಟಚಾರ ಮಾಡಲು ಬಿಡುವುದಿಲ್ಲ ಹಾಗೂ ಚುನಾವಣೆಯಲ್ಲಿ ಮತದಾರರಿಗೆ ಪಕ್ಷದ ಯಾವುದೇ ಅಭ್ಯರ್ಥಿಕೂಡ ಅಮೀಷ ನೀಡಿ ಮತಪಡೆಯಬರದು ಎನ್ನುವುದು ಪಕ್ಷದ ರಾಷ್ಟಿçÃಯ ಅಧ್ಯಕ್ಷರಾದ ಅರವಿಂದ್ ಕೇಜ್ರಿವಾಲಾ ರವರ ಸೂಚನೆಯಾಗಿದ್ದು ಬೆಂಗಳೂರಿನಲ್ಲಿ ಪಕ್ಷದ ಸಚೇತಕರಾದ ದಿಲೀಪ್ ಪಾಂಡೆ ನೇತೃತ್ವದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಪೂರ್ವ ಸಿದ್ದತಾ ಸಭೆ ರಾಜ್ಯದ ಅಧ್ಯಕ್ಷರ ಸಮ್ಮುಖದಲ್ಲಿ ನಡೆಯಲಿದ್ದು ಆಮ್ ಆದ್ಮಿ ಪಕ್ಷದ ರಾಜ್ಯದ ೨೨೪ ವಿಧಾನಸಭೆ ಅಭ್ಯರ್ಥಿಗಳು ಹಾಗೂ ಮುಖಂಡರು ಪದಾಧಿಕಾರಿಗಳು ಭಾಗವಹಿಸಲಿದ್ದರೆ ನಮ್ಮ ಪಕ್ಷವು ತತ್ವ,ಸಿದ್ದಂತಗಳನ್ನು ಹೊಂದಿ ರುವ ಪಕ್ಷವಲ್ಲ.
ಜನಸಾಮನ್ಯರ ಪಕ್ಷ ಜನರ ಅಗತ್ಯಗಳನ್ನು ಪೂರೈಸುವ ಪಕ್ಷವೇನುವುದನ್ನು ದೇಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ನಮ್ಮ ಪಕ್ಷವು ಉತ್ತಮ ಆಡಳಿತ ನೀಡುವ ಮೂಲಕ ತೋರಿಸಿಕೊಟ್ಟಿದ್ದು ಕಾರ್ಯಕರ್ತರು ಕೇವಲ ವಿಧಾನಸಭೆ ಚುನಾವಣೆಯ ದೃಷ್ಟಿಯಲ್ಲಿಟ್ಟು ಕೊಂಡು ಪಕ್ಷವನ್ನು ಸಂಘಟಿಸದೆ ಮುಂಬರುವ ಜಿ,ಪಂ,ತಾ,ಪA, ಸ್ಥಳಿಯ ಸಂಸ್ಥೆಗಳಾದ ಮಹಾನಗರ ಪಾಲಿಕೆ,ನಗರಸಭೆ,ಪುರಸಭೆ , ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೇಲವು ಸಾಧಿಸಲು ಈಗಿನಿಂದಲೇ ಸಿದ್ದತೆಗಳನ್ನು ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪಕ್ಷದ ಪಧಾಧಿಕಾರಿಗಳು ಹಾಗೂ ಮುಖಂಡರು ಹಾಗೂ ನೂರಾರು ಪಕ್ಷದ ಕಾರ್ಯಕರ್ತರು ಇದ್ದರು.