Thursday, 12th December 2024

ವಾಸಣ್ಣನವರು ಮುಂದೆಯೂ ಶಾಸಕರಾಗಿ ಆಯ್ಕೆಯಾಗಲಿದ್ದಾರೆ

ಗುಬ್ಬಿ : ವಾಸಣ್ಣನವರು ಬಡವ ಶ್ರಮಿಕರಿಗೆ ಜೀವನಾಧಾರಿತ ಕೆಲಸಗಳನ್ನು ಮಾಡಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದು ಮುಂದೆಯೂ ಸಹ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದು ದಲಿತ ಮುಖಂಡ ಅದಲಗೆರೆ ಈಶ್ವರಯ್ಯ ತಿಳಿಸಿದರು.

ತಾಲೂಕಿನ ತ್ಯಾಗಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅದಲಗೆರೆ ಗ್ರಾಮದಲ್ಲಿ ಶಾಸಕ ಎಸ್ಆರ್ ಶ್ರೀನಿವಾಸ್ ಅವರ ಜನಪರ ಅಭಿವೃದ್ಧಿ ಕಾರ್ಯಕ್ರಮಗಳ ಪುಟಗಳನ್ನು ಒಳಗೊಂಡ ನೂತನ ಕ್ಯಾಲೆಂಡರ್ ಗಳನ್ನು ಮನೆಮನೆಗೆ ವಿತರಿಸಿ ಮಾತನಾಡಿ ಸುಮಾರು 20 ವರ್ಷಗಳ ಅಧಿಕಾರದ ಅವಧಿಯಲ್ಲಿ ಸಚಿವರಾಗಿ ಶಾಸಕರಾಗಿ ಅನೇಕ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವ ಮೂಲಕ ಮನೆ ಮಾತಾಗಿದ್ದು ಎಲ್ಲಾ ಸಮುದಾಯದ ಸೇರಿದಂತೆ ಯುವಕರು ಮಹಿಳೆಯರಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು ತಾಲೂಕಿನ ಪ್ರತಿ ಗ್ರಾಮಗಳ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸಿ ಕೃಷಿಕರಿಗೆ ಬೋರ್ವೆಲ್ ಕೊರೆಸಿ ಕೊಟ್ಟಿದ್ದಾರೆ ಜನಾಶೀರ್ವಾದದಿಂದ ಮುಂದೆಯೂ ಸಹ ವಾಸಣ್ಣ ನವರು ಶಾಸಕರಾಗಿ ಆಯ್ಕೆ ಯಾಗುವುದು ಖಚಿತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಸ ನಾಗೇಂದ್ರ ಕುಮಾರ್, ಮುಖಂಡರಾದ ದೇವರಾಜು , ಮೂಡಲಗಿರಿಯ್ಯ,ವೆಂಕಟೇಶ್, ಕೃಷ್ಣಯ್ಯ, ಸುರೇಶ್,