Saturday, 26th October 2024

ಸೋಲು ಗೆಲುವು ಮುಖ್ಯವಲ್ಲ ಸ್ಥಳೀಯರಿಗೆ ಆಧ್ಯತೆ ಎಂಬುದೇ ಚರ್ಚೆಗೆ ಆಹಾರ

ಕೊತ್ತೂರು ಮಂಜು ಗ್ರಾಂಡ್ ಎಂಟ್ರಿಗೆ ಕಾಂಗ್ರೆಸ್ ಪಾಳೆಯದಲ್ಲಿ ಭಿನ್ನಮತ ಸ್ಪೋಟ

ಸೋಲು ಗೆಲುವು ಮುಖ್ಯವಲ್ಲ ಸ್ಥಳೀಯರಿಗೆ ಆಧ್ಯತೆ ಎಂಬುದೇ ಚರ್ಚೆಗೆ ಆಹಾರ
ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಹುರಿಯಾಳು ಯಾರು ಎಂಬುದನ್ನು ಇನ್ನೂ ಪಕ್ಷದ ಹೈಕಮಾಂಡ್ ಘೋಷಣೆ ಮಾಡಿಲ್ಲದಿದ್ದರೂ ಕೊತ್ತೂರು ಮಂಜು ಗ್ರಾಂಡ್ ಎಂಟ್ರಿಯಿAದಾಗಿ ಬೂದಿಮುಚ್ಚಿದ ಕೆಂಡದAತಿದ್ದ ಸ್ಥಳೀಯ ನಾಯಕರ ಅಸಹನೆ ಸ್ಪೋಟಗೊಂಡು ಪರಸ್ಪರ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿದೆ.ಇಲ್ಲಿ ಸೋಲು ಗೆಲುವಿಗಿಂತ ಮುಖ್ಯವಾಗಿ ಸ್ಥಳೀಯರಿಗೆ ಆಧ್ಯತೆ ನೀಡಲಿಲ್ಲ ಎಂದರೆ ಪಕ್ಷಕ್ಕೆ ಉಳಿಗಾಲ ವಿಲ್ಲ ಎನ್ನುವ ಸಂದೇಶವನ್ನು ವರಿಷ್ಟರಿಗೆ ದಾಟಿಸುವಲ್ಲಿ ಜನಧ್ವನಿ ವೇದಿಕೆ ಯಶಸ್ವಿಯಾಗಿದೆ ಎನ್ನುವುದು ರಾಜಕೀಯ ಪಡಸಾಲೆಯ ಪಿಸುಮಾತಾಗಿದೆ.

ಎಡವಟ್ಟು ಆಗದಿರಲಿ
೨೦೨೩ರ ವಿಧಾನ ಸಭಾ ಚುನಾವಣೆಗೆ ದಿನಗಣನೆ ಶುರುವಾಗಿ ರಾಜಕೀಯ ಅಖಾಡದಲ್ಲಿ ಸೋಲುಗೆಲುವಿನ ಲೆಕ್ಕಾಚಾರ ಶುರುವಾಗಿದೆ.ಮುಖ್ಯವಾಗಿ ಎಲ್ಲಾ ರಾಷ್ಟಿçÃಯ ಪ್ರಾದೇಶಿಕ ಪಕ್ಷಗಳು ವಿಧಾನಸೌಧದದ ಮೂರನೇ ಮಹಡಿಗೆ ಲಗ್ಗೆಯಿಡಲು ಭರದ ಸಿದ್ಧತೆಯಲ್ಲಿ ತೊಡಗಿವೆ. ಬಲಾಬಲ ಪ್ರದರ್ಶನಕ್ಕೆ ವೇದಿಕೆ ಸಿದ್ದ ಮಾಡಿಕೊಂಡು ಸಮರ್ಥ ಅಭ್ಯರ್ಥಿಗಳ ಹುಡುಕಾಟ ಕೆಲವೆಡೆ ಘೋಷಣೆ ಮಾಡಿ ಕ್ಷೇತ್ರದ ಹೊಣೆಗಾರಿಕೆ ಹೊರಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಹವಣಿಸಿವೆ. ಆದರೆ ಈ ಹೊತ್ತಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿ ಪಕ್ಷ ಸಂಘಟನೆಗಿAತ ಅಭ್ಯರ್ಥಿ ಯಾರಾಗುವರು ಎಂಬುದೇ  ಕಗ್ಗಂಟಾಗಿದ್ದು ಸ್ಥಳೀಯರೋ ಹೊರಗಿನವರೋ ಎಂಬ ಲೆಕ್ಕಾಚಾರ ಗಡಿಗಳ ಮೀರಿ ಚರ್ಚೆಯ ವಸ್ತುವಾಗಿದೆ.ಹೈವೋಲ್ಟೇಜ್ ಕ್ಷೇತ್ರವಾಗಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬೇಗುದಿ ತುಸು ಹೆಚ್ಚೇ ಸದ್ದು ಮಾಡುತ್ತಿದ್ದು, ಶಿಡ್ಲಘಟ್ಟದಲ್ಲಿಯೂ ಇದಕ್ಕಿಂತ ಭಿನ್ನವಿಲ್ಲ.ಹೈಕಮಾಂಡ್ ಇತ್ತ ಗಮನ ಹರಿಸಿ ಸಕಾಲದಲ್ಲಿ ಇದನ್ನು ತಣಿಸಲಿಲ್ಲ ಎಂದರೆ ಅಧಿಕಾರದ ಕನಸಿಗೆ ಮರ್ಮಾಘಾತ ಖಚಿತ.

ವಿರೋಧ ಏಕೆ?
ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಸಚಿವ ಸುಧಾಕರ್ ಹೊಡೆತಕ್ಕೆ ಸಿಕ್ಕಿ ನೆಲಕಚ್ಚಿದ್ದ ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುವ ಸ್ಥಿತಿಯಲ್ಲಿದ್ದಾಗ ಆಪದ್ಭಾಂಧವನAತೆ ಬಂದವರು ವಿನಯ್‌ಶ್ಯಾಮ್ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.ಮೇಲಾಗಿ ನಗರಸಭೆ ಚುನಾವಣೆ, ಗ್ರಾ.ಪಂ.ಚುನಾವಣೆಯಲ್ಲಿ ಪಕ್ಷದ ಮಾನ ಉಳಿಸಿದ್ದು ಯಾರು ಎಂಬುದನ್ನು ಹಿರಿಯ ಮುಖಂಡರು ಚೆನ್ನಾಗಿ ಬಲ್ಲರು.ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ, ಬೆಂಗಳೂರಿನ ಅಭಿಯಾನಗಗಳು ಸಮಾವೇಶಗಳು,ಕೊರೋನಾ, ಅತಿವೃಷ್ಟಿಯಂತಹ ಸಂಕಷ್ಟದಲ್ಲಿ ಪಕ್ಷದ ಬಾವುವನ್ನು ಜನರ ಬಳಿಗೆ ಕರೆದೊಯ್ದವರು ಯಾರು?ಇದನ್ನೆಲ್ಲಾ ನೋಡದೆ ಕೇವಲ ಹಣವಿದೆ ಎನ್ನುವ ಕಾರಣಕ್ಕೆ ಹೊರಗಿನವರನ್ನು ಇಲ್ಲಿಗೆ ಕರೆತರುವುದು ಎಷ್ಟು ಸರಿ? ಕ್ಷೇತ್ರಕ್ಕೆ ಅವರ ಕೊಡುಗೆ ಏನು?ಯಾರಿಗೆ ಅವರ ಪರಿಚಯವಿದೆ? ಎನ್ನುವುದೇ ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ.

ಇಬ್ಬರ ಜಗಳ..ಲಾಭ?
ಕಾಂಗ್ರೆಸ್ ನಾಯಕರು ಸುಧಾಕರ್ ಸೋಲಿಸುವ ಸಮರ್ಥ ಅಭ್ಯರ್ಥಿ ಎಂದು ಕೊತ್ತೂರು ಮಂಜುನಾಥ್ ಅವರಿಗೆ ಮಣೆ ಹಾಕಿದರೆ ಕಾಂಗ್ರೆಸ್‌ನ ಕೆಲ ಸ್ಥಳೀಯ ನಾಯಕರೂ ಬೆಂಬಲಿಸುವುದಿಲ್ಲ ಎಂಬುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ತೋರಿಸಿಕೊಂಡಿದ್ದಾರೆ.ಇದಕ್ಕೆ ಇಂಬು ನೀಡುವಂತೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ವಿನಯ್ ಶ್ಯಾಮ್ ಕೂಡ ನಮಗೆ ಟಿಕೆಟ್ ನೀಡಲಿಲ್ಲ ಎಂದರೆ ನಮ್ಮ ದಾರಿ ನಮಗೆ ಅವರ ದಾರಿ ಅವರಿಗೆ ಎಂದಿದ್ದು ,ಉಳಿದವರೂ ಕೂಡ ಹೀಗೆಯೆ ಇದ್ದಾರೆ.ಒಂದು ವೇಳೆ ಬಲವಂತಕ್ಕೆ ಬೆಂಬಲಿಸಿ ಎಂದು ವರಿಷ್ಟರು ತಾಕೀತು ಮಾಡಿದಲ್ಲಿ ಶತೃವಿನ ಶತೃ ಮಿತ್ರ ಎಂಬAತೆ ಇಬ್ಬರ ಜಗಳ ಮೂರನೆಯವನಿಗೆ ಲಾಭವಾಗುವುದರಲ್ಲಿ ಸಂಶಯವೇ ಇಲ್ಲ.

ಮುಗಿಯದ ಗೊಂದಲ
ಒಟ್ಟಾರೆ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಕೊತ್ತೂರು ಮಂಜು ಅವರನ್ನು ಕರೆತರುವಲ್ಲಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಡಾ.ಎಂ.ಸಿ. ಸುಧಾಕರ್,ಎಂ,ಎಲ್,ಸಿ ಅನಿಲ್‌ಕುಮಾರ್ ಕೂಡ ಕಾರಣವಂತೆ ಎನ್ನುವ ವಿಚಾರ ಕ್ಷೇತ್ರದಲ್ಲಿ ಜೋರಾಗಿ ಕೇಳಿಬರುತ್ತಿವೆ.ಇದೇ ಕಾರಣಕ್ಕೆ ಜನಧ್ವನಿ ವೇದಿಕೆ ಕಾರ್ಯಕ್ರಮದಲ್ಲಿ ಜಿ.ಹೆಚ್. ನಾಗರಾಜ್ ಮತ್ತು ಎಂ.ಸಿ. ಸುಧಾಕರ್ ಕೊತ್ತೂರು ಮಂಜು ಎಂಟ್ರಿ ವಿಷಯದಲ್ಲಿ  ನಾನೆಷ್ಟು ನೀನೆಷ್ಟು ಎಂಬAತೆ ಮಾತಾಡಿಕೊಂಡಿದ್ದಾರೆ ಎನ್ನುವ ಸುದ್ದಿಯೂ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಮಾಡಿದೆ.

ಏನೇ ಆಗಲಿ ಜಿಲ್ಲೆಯ ಕಾಂಗ್ರೆಸ್ ಭದ್ರಕೋಟೆಯನ್ನು ಅಲುಗಾಡಿಸಿ ಕಮಲ ಅರಳಿಸಲು ಸಚಿವ ಡಾ. ಸುಧಾಕರ್ ತಯಾರಾಗಿ ನಿಂತಿದ್ದರೆ,ಕಾAಗ್ರೆಸ್ ಪಕ್ಷದ ವರಿಷ್ಟರು, ಮುಖಂಡರು ಭದ್ರತೆಗೆ ಪ್ರತಿತಂತ್ರ ರೂಪಿಸಿ ಗಟ್ಟಿಯಾಗಿ ನಿಲ್ಲದೆ,ಕೊಳ್ಳೆ ಹೊಡೆದ ಮೇಲೆ ಊರು ಬಾಗಿಲು ಹಾಕಲು ಸನ್ನದ್ದರಾಗಿದ್ದಾರೆ ಎನ್ನುವುದು ರಾಜಕೀಯ ನಿಪುಣರ ಮಾತಾಗಿದೆ.