ಯಶಸ್ವಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಮತ್ತು ದೇಶಕ್ಕೆ ಹಲವು ವರ್ಷಗಳಿಂದ ಸೇವೆ ಒದಗಿಸಿರುವ ಸೇನಾ ನಿವೃತ್ತರು ವಿಭಿನ್ನ ಉದ್ಯೋಗದ ಮಾರ್ಗಗಳ ಆವಿಷ್ಕಾರ ನಡೆಸಿರುತ್ತಾರೆ ಮತ್ತು ವಿಶಿಷ್ಟ ಅನುಭವವನ್ನು ತರುವ ಶಕ್ತಿ ಹೊಂದಿದ್ದಾರೆ. ಅಮೆಜಾ಼ನ್‌ನಲ್ಲಿ ನೂರಾರು ಸೇನಾ ನಿವೃತ್ತರು ಆವಿಷ್ಕಾರವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಗ್ರಾಹಕ ಅನುಭವದ ಮಾನದಂಡ ಎತ್ತರಿಸುತ್ತಿದ್ದಾರೆ. ಅಮೂಲ್ಯ ಅನುಭವಗಳೊಂದಿಗೆ ಸನ್ನದ್ಧವಾಗಿರುವ ಅವರು ತಮ್ಮ ಜ್ಞಾನ, ಕೌಶಲ್ಯಗಳು ಮತ್ತು ನಾಯಕತ್ವ ಸಾಮರ್ಥ್ಯಗಳನ್ನು ವಿಸ್ತಾರವಾದ ಹುದ್ದೆಗಳಲ್ಲಿ ಬಳಸುತ್ತಾರೆ. ಸೇನಾ ನಿವೃತ್ತರಿಗೆ ಸದೃಢ ಮತ್ತು ವಿಶೇಷವಾದ ಕಾರ್ಯಕ್ರಮದೊಂದಿಗೆ ಅಮೆಜಾ಼ನ್ ಇಂಡಿಯಾ ಅವರನ್ನು ಸ್ವಾಗತಿಸುತ್ತಿದೆ ಮತ್ತು ಅವರಿಗೆ ಕಾರ್ಪೊರೇಟ್ ಜಗತ್ತಿಗೆ ಅವರ ಉದ್ಯೋಗವನ್ನು ಮೃದುವಾಗಿ ಪರಿವರ್ತಿಸಿಕೊಳ್ಳಲು ನೆರವಾಗುತ್ತದೆ.
ಭಾರತೀಯ ಸೇನೆಗೆ ಎರಡು ದಶಕಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸಿದ ನಂತರ ಮತ್ತು ದೇಶದ ಮೂಲೆ ಮೂಲೆಯಲ್ಲಿ ಕಾರ್ಯಾಚರಣೆ ನಡೆಸಿದ ರಾಹುಲ್ ಗಂಗಾಸ್ ಅವರು ಮಾರ್ಚ್ ೨೦೨೨ರಲ್ಲಿ ಅಮೆಜಾ಼ನ್‌ನಲ್ಲಿ ಕಾಂಪಿಟಿಟರ್ ಮಾನಿಟರಿಂಗ್ ಟೀಂನ ಸೀನಿಯರ್ ಆಪರೇಷನ್ಸ್ ಮ್ಯಾನೇಜರ್ ಆಗಿ ಸೇರಿದರು ಒಳಗೆ ಬೆಂಗಳೂರು. ಜಾಗತಿಕ ಬೆಲೆಯ ತಂಡದ ಭಾಗವಾಗಿ ಅವರು ೨೦೦ಕ್ಕೂ ಹೆಚ್ಚು ಅಮೆಜಾ಼ನೀಯನ್ನರ ತಂಡದ ನೇತೃತ್ವ ವಹಿಸಿದ್ದು ಉದ್ಯಮಗಳಿಗೆ ಇಂಟೆಲಿಜೆನ್ಸ್ ಪೂರೈಸಲು ಜವಾಬ್ದಾರಿಯಾಗಿದೆ ಅದು ಸ್ಪಧಾತ್ಮಕ ಬೆಲೆ ನೀಡುತ್ತದೆ. ಅವರ ಹುದ್ದೆಯು ಬೆಲೆಯ ಕಾರ್ಯತಂತ್ರಗಳಲ್ಲಿ ವಿಸ್ತರಿಸಬಲ್ಲ ಮತ್ತು ದಕ್ಷ ಪ್ರಕ್ರಿಯೆಗಳನ್ನು ಒಳಗೊಂಡಿದೆ.
ಅಮೆಜಾ಼ನ್‌ಗೆ ಸೇನಾ ನಿವೃತ್ತರಾಗಿ ತಮ್ಮ ಅನುಭವ ಕುರಿತು ರಾಹುಲ್, “ಭಾರತೀಯ ಸೇನೆಗೆ ನನ್ನ ಜೀವನದ ಉತ್ತಮ ಭಾಗವನ್ನು ಕಳೆದ ನಂತರ ನಾನು ಹೊಸ ವೃತ್ತಿಗೆ ಪರಿವರ್ತನೆ ಹೊಂದಲು ಬಹಳ ಆತಂಕ ಹೊಂದಿದ್ದೆ, ಆದರೆ ಅಮೆಜಾ಼ನ್ ವೆಟರನ್ ಪ್ರೋಗ್ರಾಮ್ ಅದನ್ನು ತಡೆರಹಿತ ವಾಗಿಸಿದೆ. ನಾನು ಕಳೆದ ಒಂಬತ್ತು ತಿಂಗಳಲ್ಲಿ ಸಾಕಷ್ಟು ಕಲಿತಿದ್ದೇನೆ, ನಾನು ಈಗ ಹೆಚ್ಚು ತಂತ್ರಜ್ಞಾನ ಬಳಸುತ್ತೇನೆ ಮತ್ತು ದೈನಂದಿನ ಚಟುವಟಿಕೆ ಗಳಿಗೆ ತಂತ್ರಜ್ಞಾನ ಬಳಸುವ ಮೂಲಕ ನಮ್ಮ ತಂಡವನ್ನು ಗ್ರಾಹಕ ಅನುಭವ ಅಖಂಡವಾಗಿರಲು ನೆರವಾಗುತ್ತದೆ. ಪ್ರತಿನಿತ್ಯ ಹೊಸ ಕಲಿಕೆ ಯಾಗಿದೆ!” ಎಂದರು.
ರಾಹುಲ್, “ಅಮೆಜಾ಼ನ್‌ನಲ್ಲಿನ ನಾಯಕತ್ವ ತತ್ವಗಳು ಸೇನೆಯಲ್ಲಿ ನಾನು ೨೦ ವರ್ಷಗಳು ಅನುಸರಿಸಿದ್ದವನ್ನೇ ಅನುರಣಿಸುತ್ತವೆ. ನಾನು ಸಹಯೋಗ ಹೊಂದಿರುವ ಬಹುತೇಕ ತತ್ವಗಳು `ಮಾಲೀಕತ್ವ’ ಮತ್ತು `ವಿಶ್ವಾಸ ಗಳಿಸು’ ಎಂದಿದ್ದು ಅದು ಮಾಲೀಕತ್ವದ ನೈತಿಕತೆಯೊಂದಿಗೆ ನಾನು ಸದೃಢವಾಗಿ ಸಂಪರ್ಕ ಹೊಂದಿದ್ದೇನೆ ಮತ್ತು ಸಹೋದ್ಯೋಗಿಗಳು ಹಾಗೂ ಗ್ರಾಹಕರ ವಿಶ್ವಾಸ ಗಳಿಸುತ್ತಿದ್ದೇನೆ. ನನ್ನ ಪ್ರಾರಂಭಿಕ ಪ್ರಭಾವಗಳಂತೆ ಅಮೆಜಾ಼ನ್ ಇಂಡಿಯಾ ನನ್ನಂತಹ ಸೇನಾ ನಿವೃತ್ತರಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ವೃತ್ತಿ ರೂಪಿಸಿಕೊಳ್ಳಲು ಪರಿಪೂರ್ಣ ವೇದಿಕೆಯಾಗಿದೆ” ಎಂದರು.
ರಾಹುಲ್ ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಅವರ ಪದವಿಯ ನಂತರ ಮತ್ತು ಡೆಹ್ರಾಡೂನ್‌ನಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಪ್ರಿ-ಕಮಿಷನಿಂಗ್ ತರಬೇತಿಯ ನಂತರ ಡಿಸೆಂಬರ್ ೨೦೦ರಲ್ಲಿ ಭಾರತೀಯ ಸೇನೆಗೆ ಸೇರಿದರು. ಎಂಜಿನಿಯರಿAಗ್ ಸಪೋರ್ಟ್ ಹುದ್ದೆಗೆ ಮುನ್ನಡೆಯುವ ಮುನ್ನ ರಾಹುಲ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಭಯೋತ್ಪಾದನಾ ನಿಯಂತ್ರಣ ಜವಾಬ್ದಾರಿ ನೀಡಲಾಗಿತ್ತು. ರಾಹುಲ್ ಕೋರ್ಸ್ ಆಫ್ ಎಲೆಕ್ಟಾçನಿಕ್ಸ್ ಅಂಡ್ ಮೆಕ್ಯಾನಿಕಲ್ ಎಂಜಿನಿಯರಿA(ಇಎAಇ) ನಿವೃತ್ತರಾಗಿದ್ದಾರೆ ಮತ್ತು ಹೆಲಿಕಾಪ್ಟರ್ ನಿರ್ವಹಣೆ ಹಾಗೂ ವೈಮಾನಿಕ ಕಾರ್ಯಾಚರಣೆಗಳಲ್ಲಿ ಪರಿಣಿತಿ ಪಡೆದಿದ್ದಾರೆ.
ಸೇನೆಯಲ್ಲಿ ಅವರ ಸೇವಾವಧಿಯಲ್ಲಿ ಅವರು ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು ಮತ್ತು ಅದರಲ್ಲಿ ಭಾರತೀಯ ಸೇನೆಯ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳಿಗೆ ಎಂಜಿನಿಯರಿAಗ್ ಬೆಂಬಲ ನೀಡುವುದಾಗಿತ್ತು. ಕೆಲಸದ ಹೊರಗೆ ರಾಹುಲ್ ಫಿಕ್ಷನ್ ಹಾಗೂ ನಾನ್-ಫಿಕ್ಷನ್ ಓದಲು ಬಯಸುತ್ತಾರೆ, ಅವರ ಅಚ್ಚುಮೆಚ್ಚಿನ ಲೇಖಕ ಅಮಿಶ್ ತ್ರಿಪಾಠಿ. ಅವರು ತಮ್ಮ ಕುಟುಂಬ ಹಾಗೂ ಸಾಕುಪ್ರಾಣಿಯೊಂದಿಗೆ ಸಮಯ ಕಳೆಯಲು, ಮಿತ್ರರೊಂದಿಗೆ ಹಾಗೂ ಚಲನಚಿತ್ರಗಳನ್ನು ವೀಕ್ಷಿಸಲು ಬಯಸುತ್ತಾರೆ. ಅವರು ವೈಯಕ್ತಿಕ ಹಣಕಾಸು ಕುರಿತು ಮಾತನಾಡಲು ಬಯಸುತ್ತಾರೆ ಮತ್ತು ಬೀದಿನಾಯಿಗಳಿಗೆ ಒಂದು ಎನ್‌ಜಿಒ ಪ್ರಾರಂಭಿಸುವ ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವ ಬಯಕೆ ಹೊಂದಿದ್ದಾರೆ.
ಅಮೆಜಾ಼ನ್ ಇಂದಿಯಾ ೨೦೧೯ರಲ್ಲಿ ತನ್ನ ಮಿಲಿಟರಿ ವೆಟರನ್ಸ್ ಪ್ರೋಗ್ರಾಮ್ ಪ್ರಾರಂಭಿಸಿತು. ಈ ಕಾರ್ಯಕ್ರಮವು ಸೇನಾ ನಿವೃತ್ತರು ಮತ್ತು ಅವರ ಕುಟುಂಬಗಳಿಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುತ್ತದೆ. ಸೇನಾಪಡೆಗಳ ನಿವೃತ್ತರು ಯಾವುದೇ ಸಂಸ್ಥೆಗೆ ಅಮೂಲ್ಯ ಸಂಪತ್ತಾಗಿದ್ದು ಅವರು ಅಪಾರ ಜ್ಞಾನ ಮತ್ತು ವಿಸ್ತಾರ ಶ್ರೇಣಿಯ ಕೌಶಲ್ಯಗಳನ್ನು ತರುತ್ತಾರೆ. ಅಮೆಜಾ಼ನ್ ಇಂಡಿಯಾ ಡೈರೆಕ್ಟರ್ ಜನರಲ್ ಆಫ್ ರೀಸೆಟ್ಲ್ಮೆಂಟ್(ಡಿಜಿಆರ್), ಇಂಡಿಯನ್ ನೇವಲ್ ಪ್ಲೇಸ್‌ಮೆಂಟ್ ಏಜೆನ್ಸಿ(ಐಎನ್‌ಪಿಎ), ಇಂಡಿಯನ್ ಏರ್ ಫೋಸ್ ಪ್ಲೇಸ್‌ಮೆಂಟ್ ಏಜೆನ್ಸಿ(ಐಎಎಫ್‌ಪಿಎ) ಮತ್ತು ಆರ್ಮಿ ವೆಲ್‌ಫೇರ್ ಪ್ಲೇಸ್‌ಮೆಂಟ್ ಆರ್ಗನೈಸೇಷನ್(ಎಡಬ್ಲೂö್ಯಪಿಒ) ಜೊತೆಯಲ್ಲಿ ಸಹಯೋಗ ಹೊಂದಿದ್ದು ಸೇನಾ ಸೇವೆಯಿಂದ ನಿವೃತ್ತರಾದವರು ದೇಶಾದ್ಯಂತ ಅಮೆಜಾ಼ನ್‌ನಲ್ಲಿ ದೊರೆಯುವ ಉದ್ಯೋಗಾವಕಾಶಗಳ ಕುರಿತು ಅರಿವನ್ನು ಹೊಂದಿರಬೇಕು ಎನ್ನುವುದನ್ನು ದೃಢೀಕರಿಸುತ್ತದೆ.
ಅಮೆಜಾ಼ನ್ ಇಂಡಿಯಾದಲ್ಲಿ ಅಮೂಲ್ಯ ಅನುಭವ ಮತ್ತು ವಿಶಿಷ್ಟ ಕೌಶಲ್ಯಗಳಿಂದ ಸನ್ನದ್ಧವಾದ ಸೇನಾ ನಿವೃತ್ತರು ಕಂಪನಿಯ ವೈವಿಧ್ಯತೆ, ಸಮಾನತೆ ಮತ್ತು ಒಳಹೊಳ್ಳುವ ಕಂಪನಿಯ ಬದ್ಧತೆಯನ್ನು ಸದೃಢಗೊಳಿಸುತ್ತಾರೆ. ಹಲವು ವರ್ಷಗಳಿಂದ ಅಮೆಜಾ಼ನ್ ಇಂಡಿಯಾ ತನ್ನ ಉದ್ಯಮಗಳಲ್ಲಿ ಅಸಂಖ್ಯ ಹುದ್ದೆಗಳಿಗೆ ಸೇನಾ ನಿವೃತ್ತರನ್ನು ನೇಮಕ ಮಾಡಿಕೊಂಡಿದೆ. ಅಮೆಜಾ಼ನ್‌ನ ೧೦೦,೦೦೦ ಸೇನಾ ನಿವೃತ್ತರು ಮತ್ತು ಸೇನಾಪಡೆಯಲ್ಲಿ ಸೇವೆ ಸಲ್ಲಿಸಿದವರ ಪತ್ನಿಯರನ್ನು ನೇಮಕ ಮಾಡಿಕೊಳ್ಳುವ ಜಾಗತಿಕ ಗುರಿ ಹೊಂದಿದ್ದು ಇದು ಭಾರತಕ್ಕೆ ಸೇವೆ ಸಲ್ಲಿಸಿ ಕಾರ್ಪೊರೇಟ್ ಜೀವನಕ್ಕೆ ಪರಿವರ್ತನೆ ಹೊಂದುವ ಮತ್ತು ಅಮೆಜಾ಼ನ್‌ನ ಗ್ರಾಹಕರ ಬಯಕೆಗಳಿಗೆ ಕೊಡುಗೆ ನೀಡುವ ಅವಕಾಶ ಕಲ್ಪಿಸುತ್ತದೆ.