Saturday, 26th October 2024

ಜಿಲ್ಲೆಯಲ್ಲಿ ಅದ್ಧೂರಿಯಾಗಿ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ೭೪ನೇ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಗಣರಾಜ್ಯೋತ್ಸವದ ಹೆಸರನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ಅವರು ಧ್ವಜಾರೋಹಣ ಮಾಡಿ ಮಾತನಾಡಿದರು. ಸಂವಿಧಾನದ ಆಶಯವನ್ನು ಎತ್ತಿಹಿಡಿದು ದೇಶದ ಅಭಿವೃದ್ದಿಗೆ ದುಡಿಯೋಣ ಎಂದು ಕರೆ ನೀಡಿದರು.ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಲಕ್ಷಿö್ಮÃಕಾಂತ್ ಜೆ.ಮಿಸ್ಕಿನ್ ಸೇರಿದಂತೆ ಎಲ್ಲಾ ನ್ಯಾಯಾಧೀಶರು ಮತ್ತವರ ಸಿಬ್ಬಂದಿ ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.

ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಕೂಡ ಗಣರಾಜ್ಯೋತ್ಸವ ದಿನಾಚರಣೆ ಆಚರಣೆ ಮಾಡಲಾಯಿತು. ಪ್ರಾಂಶುಪಾಲ ಮೋಹನ್‌ಕುಮಾರ್ ಮಾತನಾಡಿ ದೇಶ ಮತ್ತು ದೇಶವಾಸಿಗಳ ಬದುಕಿಗೆ ಬುನಾದಿಯಾಗಿರುವ ಸಂವಿಧಾನದ ಅಡಿಯಲ್ಲಿ ನಾವೆಲ್ಲಾ ಬದುಕು ಕಟ್ಟಿಕೊಂಡಿದ್ದೇವೆ.ಇದನ್ನು ಕಾಪಾಡುವ ಜವಾಬ್ದಾರಿ ಈ ದೇಶದ ಎಲ್ಲಾ ನಾಗರೀಕರ ಮೇಲಿದೆ ಎಂದರು. ಇದೇ ವೇಳೆ  ಮಕ್ಕಳಿಂದ ಪರೇಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆದವು.

ನಗರ ಹೊರವಲಯ ಎಸ್‌ಜೆಸಿಐಟಿ ಕಾಲೇಜಿನಲ್ಲಿ ಕೂಡ ಗಣರಾಜ್ಯೋತ್ಸವ ಅದ್ಧೂರಿಯಾಗಿ ಆಚರಣೆ ಮಾಡಿದರು.ಪ್ರಾಂಶುಪಾಲ ಡಾ. ರಾಜು ಮಾತನಾಡಿ ಎಲ್ಲರೂ ಒಗ್ಗೂಡಿ ಒಂದೇ ಕುಟುಂಬದAತೆ ಸಾಗಿಸದರೆ ಏನನ್ನಾದರೂ ಸಾಧಿಸಬಹುದು.ನಾನು ನಮ್ಮನ್ನಾಳುವ ನಾಯಕ ರನ್ನು ಆರಿಸಿಕೊಳ್ಳುವುದು ತುಂಬಾ ಮುಖ್ಯ ಎಂದರು.ಈ ವೇಳೆ ಕುಲಸಚಿವ ಸುರೇಶ್ ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರು ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು.

ಎಂಜಿ ರಸ್ತೆಯ ಪ್ರೆಸಿಡೆನ್ಸಿ ಇಂಗ್ಲೀಷ್ ಶಾಲೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ನಳಪಾಕ ಪ್ರದರ್ಶನ ಏರ್ಪಡಿಸ ಲಾಗಿತ್ತು ವಿದ್ಯಾರ್ಥಿಗಳು ತಮ್ಮ ಪೋಷಕರು ಶಿಕ್ಷಕರ ನೆರವಿನಿಂದ ನೂರಾರು ಬಗೆಯ ತಿಂಡಿ ತಿನಸುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಸಾಮಾಜಿಕ ಜೀವನದಲ್ಲಿ ಬರುವ ಆರ್ಥಿಕ ಸಂಕಷ್ಟಗಳನ್ನು ಕಲಿಯುವ ಉತ್ತಮ ಪ್ರಯತ್ನ ಮಾಡಿ ಪೋಷಕರು ಸಾರ್ವಜನಿಕರಿಂದ ಸೈ ಎನಿಸಿಕೊಂಡರು.ಈ ವೇಳೆ ಶಾಲೆಯ ಮುಖ್ಯಸ್ಥರಾದ ನ್ಯಾಮತ್ ಬೇಗಂ, ಪ್ರಾಂಶುಪಾಲ ಮುಸ್ತಾಕ್ ಅಹ್ಮದ್, ಮುಖ್ಯೋಪಾಧ್ಯಾಯ ಹರೀಶ್, ಶಿಕ್ಷಕರಾದ ಚಂದ್ರಶೇಖರ್,ಬಾಬು, ಮೋಹನ್‌ಕುಮಾರ್,ಹೇಮಾವತಿ,ಅರ್ಷಿಯಾ,ಆಥಿಯಾ,ಸಬೀಹ,ರಮಾ,ಅನಸೂಯ,ರುಕಯ್ಯಾ,ಅನಿತ,ಶಶಿಕಲಾ ಇದ್ದರು.

ಚಿಕ್ಕಬಳ್ಳಾಪುರ ತಾಲೂಕಿನ ಇನಮಿಂಚೇನಹಳ್ಳಿ ಸರಿಕಾರಿ ಶಾಲೆಯಲ್ಲಿ ೭೪ನೇ ಸಂವಿಧಾನ ಸಮರ್ಪಣಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಈವೇಳೆ ಮುಖ್ಯ ಶಿಕ್ಷಕಿ ವನಜಾಕ್ಷಿ, ಶಿಕ್ಷಕರಾದ ಸುಶೀಲ ಮಂಜುನಾಥ್, ತಾರಾನಾಥ್,ಭಾರತಿ,ಗಾಯಿತ್ರಿ,ತಾಲೂಕು ಪಂಚಾಯಿತಿ ಸದಸ್ಯ ತಿರುಮಳಪ್ಪ,ರಾಜಣ್ಣ, ಲೋಕೇಶ್,ಮಂಜುನಾಥ್, ಯಶೋಧಮ್ಮ ಇದ್ದರು.