Saturday, 23rd November 2024

ಇಸ್ರೇಲಿ ಆಕ್ರಮಣದಿಂದ ಮಹಿಳೆ ಸೇರಿ ಒಂಭತ್ತು ಪ್ಯಾಲೆಸ್ಟೀನಿಯನ್ನರ ಸಾವು

ಇಸ್ರೇಲ್: ಜೆನಿನ್‌ನ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲಿ ಪಡೆಗಳ ಆಕ್ರಮಣದಿಂದ ವಯಸ್ಸಾದ ಮಹಿಳೆ ಸೇರಿದಂತೆ ಒಂಭತ್ತು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿರುವುದಾಗಿ ವರದಿ ಮಾಡಿದೆ.

ವೆಸ್ಟ್ ಬ್ಯಾಂಕ್ ನಗರದಲ್ಲಿ ನಡೆದ ದಾಳಿಯು ಈ ವರ್ಷ ಇಸ್ರೇಲಿ ಪಡೆಗಳಿಂದ ಕೊಲ್ಲಲ್ಪಟ್ಟ ಪ್ಯಾಲೆಸ್ಟೀನಿಯಾದ ಒಟ್ಟಾರೆ ಸಂಖ್ಯೆ 29 ಕ್ಕೆ ಏರಿದೆ. ತಮ್ಮ ಕಡೆಯಿಂದ ಯಾವುದೇ ಸಾವು ಗಳಾಗಿಲ್ಲ ಎಂದು ಇಸ್ರೇಲಿ ಮಿಲಿಟರಿ ಹೇಳಿಕೊಂಡಿದೆ.

ಇಸ್ರೇಲಿ ಪಡೆಗಳು ಜೆನಿನ್ ಸರ್ಕಾರಿ ಆಸ್ಪತ್ರೆಯಲ್ಲಿ ಅಶ್ರುವಾಯು ಕ್ಯಾನಿಸ್ಟರ್‌ಗಳನ್ನು ಹೊಡೆದಿದ್ದು, ಇದರ ಪರಿಣಾಮವಾಗಿ ಮಕ್ಕಳು ಇನ್ಹಲೇಷನ್ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ವರದಿ ಯಾಗಿದೆ.

ದಾಳಿಯನ್ನು ನಿರಾಕರಿಸಿದ ಇಸ್ರೇಲ್‌ “ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಸಂಘಟನೆಗೆ ಸೇರಿದ ಭಯೋತ್ಪಾದಕ ದಳ”ವನ್ನು ಹಿಡಿಯಲು ಜೆನಿನ್‌ ನಲ್ಲಿ ಕಾರ್ಯಾಚರಣೆ ನಡೆಸಿದ್ದಾಗಿ ಮಿಲಿಟರಿ ಹೇಳಿಕೊಂಡಿದೆ. ಕಾರ್ಯಾಚರಣೆ ಯಲ್ಲಿ ಮೂವರು ಭಯೋತ್ಪಾದಕರನ್ನು ಕೊಂದಿರುವುದಾಗಿ ಇಸ್ರೇಲ್‌ ಹೇಳಿಕೆಯಲ್ಲಿ ತಿಳಿಸಿದೆ.

ರಕ್ತಪಾತವು ಪ್ಯಾಲೆಸ್ಟೈನ್‌ನ ಒಂದು ಭಾಗವಾಗಿ ಉಳಿಯುತ್ತಿರುವುದರಿಂದ, ಪ್ಯಾಲೆಸ್ತೀನ್ ಪ್ರಾಧಿಕಾರದ ಪ್ರಧಾನಮಂತ್ರಿ ಮುಹಮ್ಮದ್ ಶ್ತಾಯೆಹ್ ಅವರು “ಮಕ್ಕಳು, ಯುವಕರು ಮತ್ತು ಮಹಿಳೆಯರಿಗೆ ರಕ್ಷಣೆ ನೀಡಲು ತುರ್ತಾಗಿ ಮಧ್ಯಪ್ರವೇಶಿಸುವಂತೆ” ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳಿಗೆ ಕರೆ ನೀಡಿದರು.

 
Read E-Paper click here